*ಗೋಣಿಕೊಪ್ಪ, ಅ. ೯: ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ, ಕೊಡವ ಕೂಟ ಮತ್ತು ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಆಯೋಜಿಸಿರುವ ಕೊಡವ, ಅಮ್ಮಕೊಡವ ಕೌಟುಂಬಿಕ ವಾಲಿಬಾಲ್ ಟೂರ್ನಿಯಲ್ಲಿ ಮಂಡುವAಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅಮ್ಮಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮುಂಡಚಾಡೀರ ತಂಡಕ್ಕೆ ೩ನೇ ಸ್ಥಾನ, ಮಲ್ಲಮಾಡ ನಾಲ್ಕನೇ ತಂಡವಾಗಿ ಹೊರಹೊಮ್ಮಿತು.
ಭಾನುವಾರ ನಡೆದ ೯ನೇ ವರ್ಷದ ಫೈನಲ್ ಹಣಾಹಣಿಯಲ್ಲಿ ಮಂಡುವAಡ ೨೫-೧೮, ೨೫-೨೩ ನೇರ ಸೆಟ್ ಮೂಲಕ ಮಣಿಸಿತು. ಮುಂಡಚಾಡೀರ ತಂಡವು ಮಲ್ಲಮಾಡವನ್ನು ೨೧-೧೫, ೨೧-೧೧ ನೇರ ಸೆಟ್ಗಳಿಂದ ಮಣಿಸಿತು.
ಪ್ರಥಮ: ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸಣ್ಣುವಂಡ ವಿನು ವಿಶ್ವನಾಥ್ ಪ್ರಥಮ, ಚಿಯಕ್ಪೂವಂಡ ಚೇತನ್ ದ್ವಿತೀಯ, ಬಡುವಂಡ ಧನು ದೇವಯ್ಯ ತೃತೀಯ ಸ್ಥಾನ ಪಡೆದರು.
ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ರ್ಯಾಂಕ್, ರಾಜ್ಯಕ್ಕೆ ೭ನೇ ರ್ಯಾಂಕ್ ಪಡೆದ ಆಪಟ್ಟೀರ ಕವಿನಾ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ತೇಲಪಂಡ ಶಿವಕುಮಾರ್ ನಾಣಯ್ಯ, ಕಂಗಳತ್ನಾಡ್ ಮಹಿಳಾ ಸಮಾಜ ಅಧ್ಯಕ್ಷೆ ಚೆಪ್ಪುಡೀರ ರಾಧಾ ಅಚ್ಚಯ್ಯ, ಉದ್ಯಮಿ ಸಣ್ಣುವಂಡ ಎಂ. ಸುರೇಶ್, ಸಣ್ಣುವಂಡ ದಿಲಿಪ್ ಸೋಮಣ್ಣ, ಕಾಫಿ ಬೆಳೆಗಾರ ಸಣ್ಣುವಂಡ ವಿನು ವಿಶ್ವನಾಥ್ ಬಹುಮಾನ ವಿತರಿಸಿದರು.