ಮಡಿಕೇರಿ, ಅ. ೯: ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ನವೆಂಬರ್ ೬ ರಂದು ಮಡಿಕೇರಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ಕೆ.ಜಯಲಕ್ಷಿö್ಮ ತಿಳಿಸಿದ್ದಾರೆ.

೧ ರಿಂದ ೩ ವರ್ಷದ ಮಕ್ಕಳಿಗೆ ಮತ್ತು ೩ ರಿಂದ ೫ ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ. ೬ ರಿಂದ ೧೦ ವರ್ಷದ ಮಕ್ಕಳಿಗೆ ಕನ್ನಡ ಗೀತೆಗಳಿಗೆ ನೃತ್ಯ ಮಾಡುವ ಸ್ಪರ್ಧೆ. ೧೧ ರಿಂದ ೧೬ ವರ್ಷದ ಮಕ್ಕಳಿಗೆ ಜಾನಪದ ನೃತ್ಯ ಸ್ಪರ್ಧೆ. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ.'

ಮಹಿಳೆಯರಿಗೆ ಸಮೂಹ ಗಾಯನ ಸ್ಪರ್ಧೆ (ಕನ್ನಡ ಗೀತೆಗಳು ಮಾತ್ರ). ಮಹಿಳೆಯರಿಗೆ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ.

ಹೆಸರು ನೋಂದಾಯಿಸಲು ಕೊನೆ ದಿನ ತಾ. ೧೮ ಆಗಿದ್ದು, ನೋಂದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ೯೬೬೩೧೧೯೬೭೦, ೯೯೦೨೨೫೩೮೩೧, ೯೬೩೨೯೭೬೮೩೩, ೯೪೮೧೩೪೫೬೬೨ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.