ಮಡಿಕೇರಿ, ಅ. ೮: ರೋಟರಿ ಮಡಿಕೇರಿ ವತಿಯಿಂದ ‘ರೋಟರಿ ಚದುರಂಗ ಪಂದ್ಯಾವಳಿ-೨೦೨೨’ ಸ್ಪರ್ಧೆ ಏರ್ಪಡಿಸಲಾಗಿದ್ದು, ತಾ. ೧೫ ಹಾಗೂ ೧೬ ರಂದು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಂದ್ಯಾವಳಿ ಆಯೋಜಕರಾದ ಸಿ.ಟಿ. ಮಂದಣ್ಣ ಹಾಗೂ ಕೆ.ಸಿ. ಕಾರ್ಯಪ್ಪ ಅವರುಗಳು, ಮಡಿಕೇರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಪಂದ್ಯಾವಳಿ ನಡೆಯಲಿದೆ. ತಾ. ೧೪ರಂದು ಪಂದ್ಯಾವಳಿಯಲ್ಲಿ ನೋಂದಾಯಿಸಿ ಕೊಂಡಿರುವವರಿಗೆ ಉಚಿತ ತರಬೇತಿ ನೀಡಲಾಗುವದೆಂದು ತಿಳಿಸಿದರು. ಪಂದ್ಯಾವಳಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೇ ವಿಭಾಗದಲ್ಲಿ ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಎರಡನೆಯ ವಿಭಾಗದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಮೂರನೇ ವಿಭಾಗದಲ್ಲಿ ಮುಕ್ತ ಎಂದು ವಿಂಗಡಿಸಲಾಗಿದೆ. ವಿಜೇತ ಮೊದಲ ಐದು ಸ್ಥಾನಿಗಳಿಗೆ ನಗದು ಹಾಗೂ ಟ್ರೋಫಿ ನೀಡÀಲಾಗುವದು ಎಂದು ಮಾಹಿತಿ ನೀಡಿದರು.

ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೇ ವಿಭಾಗದಲ್ಲಿ ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಎರಡನೆಯ ವಿಭಾಗದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಮೂರನೇ ವಿಭಾಗದಲ್ಲಿ ಮುಕ್ತ ಎಂದು ವಿಂಗಡಿಸಲಾಗಿದೆ. ವಿಜೇತ ಮೊದಲ ಐದು ಸ್ಥಾನಿಗಳಿಗೆ ನಗದು ಹಾಗೂ ಟ್ರೋಫಿ ನೀಡÀಲಾಗುವದು ಎಂದು ಮಾಹಿತಿ ನೀಡಿದರು.

ಯಲ್ಲಿ ಭಾಗವಹಿಸಬಹುದಾಗಿದೆ ಎಂದು ಮನವಿ ಮಾಡಿದ ಅವರು, ನೋಂದಣಿ ಮಾಡಿಕೊಳ್ಳಲು ತಾ.೧೨ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೮೪೫೦೦೬೩೧೩, ೯೪೪೮೧೦೮೩೬೪ ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಚೆಸ್ ಅಸೋಸಿಯೇಶನ್ ರಚನೆ ಮಾಡುವ ಉದ್ದೇಶ ಹೊಂದಿದ್ದು, ಆಟಗಾರರು, ತರಬೇತುದಾರರು, ಆಸಕ್ತರು ಸಂಪರ್ಕಿಸಿದರೆ ಸಮಿತಿ ರಚನೆ ಮಾಡಿ, ಚರ್ಚಿಸಿ ಅಸೋಸಿಯೇಶನ್ ರಚನೆ ಮಾಡಲಾಗುವದೆಂದು ಹೇಳಿದರು. ಗೋಷ್ಠಿಯಲ್ಲಿ ಟಿ.ಕೆ. ಪೊನ್ನಣ್ಣ, ಲಲಿತಾ ರಾಘವೇಂದ್ರ ಇದ್ದರು.