ಶ್ರೀಮಂಗಲ, ಅ. ೮: ಕೋವಿ ನಮ್ಮ ಸಂಸ್ಕöÈತಿಯ ಅವಿಭಾಜ್ಯ ಅಂಗವಾಗಿದ್ದು, ಕೊಡವ ಸಂಸ್ಕöÈತಿ ಉಳಿಯಬೇಕಾದರೆ ಇಲ್ಲಿನ ಭೂಮಿ ಉಳಿಯಬೇಕು. ಭೂಮಿಯನ್ನು ಎಂದಿಗೂ ಮಾರಾಟ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಕರೆ ನೀಡಿದರು.

ಪೊನ್ನಂಪೇಟೆಯ ಕ್‌ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ವತಿಯಿಂದ ಚಿಕ್ಕಮುಂಡೂರು ಅಪ್ಪಚ್ಚಕವಿ ವಿದ್ಯಾಸಂಸ್ಥೆ ಮೈದಾನದಲ್ಲಿ ಏರ್ಪಡಿಸಿದ್ದ ತೋಕ್ ನಮ್ಮೆ-ಶೂಟಿಂಗ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಂತಹ ಕಾರ್ಯಕ್ರಮದಲ್ಲಿ ಜನಾಂಗದ ಎಲ್ಲರಿಗೂ ತಮ್ಮ ಪ್ರತಿಮೆ ಅನಾವರಣ ಗೊಳಿಸಲು ಅವಕಾಶವಾಗಲಿದೆ. ಕ್ರೀಡಾ ಮನೋಭಾವದಿಂದ ಉತ್ಸುಕತೆಯಲ್ಲಿ ಜಿಲ್ಲೆಯ ಎಲ್ಲಾ ಭಾಗದಿಂದ ಸ್ಪರ್ದಾರ್ಥಿಗಳು ಪಾಲ್ಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕ್‌ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗು ಪುಣ್ಯ ಭೂಮಿ, ತಪೋಭೂಮಿ ಇದನ್ನು ಉಳಿಸಿಕೊಳ್ಳಬೇಕು. ತಮ್ಮ ಮಕ್ಕಳು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕು. ಆದಷ್ಟು ಮಹಿಳೆಯರು-ಹೆಣ್ಣು ಮಕ್ಕಳು ಸಹ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದರು.

ವೇದಿಕೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಜಬ್ಭೂಮಿ ಸಂಘಟನೆಯ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಅಪ್ಪಚ್ಚ ಕವಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ ಮತ್ತು ಬಹುಮಾನ ಪ್ರ‍್ರಾಯೋಜಕರು ಉಪಸ್ಥಿತರಿದ್ದರು.

ಫಲಿತಾಂಶ: ಸಾಮಾನ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ನಾಪೋಕ್ಲುವಿನ ಕೇಲೇಟಿರ ಪವಿತ್ ಪೂವಯ್ಯ ರೂ. ೨೦ ಸಾವಿರ ನಗದು ಮತ್ತು ಪಾರಿತೋಷಕ, ದ್ವಿತೀಯ ಸ್ಥಾನ ಪಡೆದ ಚೆಟ್ಟಳ್ಳಿಯ ಪುತ್ತÀರೀರ ನಂಜಪ್ಪ ಅವರು ರೂ. ೧೫ ಸಾವಿರ ನಗದು ಮತ್ತು ಪಾರಿತೋಷಕ, ತೃತೀಯ ಸ್ಥಾನ ಪಡೆದ ಸುಂಟಿಕೊಪ್ಪ ಅಂದಗೋವೆಯ ಕೇಚಿರ ವಿಜು ಬೆಳ್ಯಪ್ಪ ಅವರು ರೂ. ೧೦ ಸಾವಿರ ನಗದು ಮತ್ತು ಪರಿತೋಷಕವನ್ನು ಪಡೆದರು.

ಮಹಿಳೆಯ ವಿಭಾಗ: ಬಲ್ಲಮಾವಟಿ ಗ್ರಾಮದ ಚಿಯಕ್‌ಪೂವಂಡ ಶ್ವೇತನ್ ಚಂಗಪ್ಪ ಪ್ರಥಮ ಸ್ಥಾನ ಪಡೆದು ರೂ.೩ ಸಾವಿರ ನಗದು ಮತ್ತು ಪಾರಿತೋಷಕ ಪಡೆದರು. ಅಮ್ಮತ್ತಿಯ ಪಟ್ಟಡ ಐರಾ ಬೋಪಣ್ಣ ದ್ವಿತೀಯ ಸ್ಥಾನ ಪಡೆದು ರೂ.೨ ಸಾವಿರ ನಗದು ಮತ್ತು ಪಾರಿತೋಷಕ ಪಡೆದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮತ್ತು ಬಹುಮಾನ ಪ್ರಯೋಜಕರು ಬಹುಮಾನ ವಿತರಿಸಿದರು.

ಪ್ರಥಮ ಬಹುಮಾನವನ್ನು ಕೊಣಿಯಂಡ ದಿವಂಗತ ವಿಟ್ಟ ದೇವಯ್ಯ ಅವರ ಜ್ಞಾಪಕಾರ್ಥವಾಗಿ ಪತ್ನಿ ರೋಹಿಣಿ ದೇವಯ್ಯ ಮತ್ತು ಪುತ್ರ ಚೇತನ್ ಚಂಗಪ್ಪ ಪ್ರಾಯೋಜನೆ ಮಾಡಿದ್ದರು. ದ್ವಿತೀಯ ಬಹುಮಾನವನ್ನು ದೇಯಂಡ ದಿವಂಗತ ಲಲಿತ್ ಕುಮಾರ್-ಮುತ್ತುರಾಣಿ ಅವರ ಜ್ಞಾಪಕಾರ್ಥವಾಗಿ ಪುತ್ರ ನಿತಿನ್ ದೇವಯ್ಯ ಪ್ರಾಯೋಜನೆ ಮಾಡಿದ್ದರು. ತೃತೀಯ ಬಹುಮಾನ ಮತ್ತು ಮಹಿಳೆಯರ ವಿಭಾಗದ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಸ್ವಾತಂತ್ರö್ಯ ಹೋರಾಟಗಾರ ಮಲಚೀರ ದಿವಂಗತ ಚಂಗಪ್ಪ -ದೇವಮ್ಮ ಅವರ ಜ್ಞಾಪಕಾರ್ಥವಾಗಿ ಪುತ್ರ ಪೊನ್ನಪ್ಪ (ಅರಸು)-ಬೋಜಮ್ಮ ಅವರು ಪ್ರಾಯೋಜನೆ ಮಾಡಿದ್ದರು. ಸ್ಪರ್ದಾರ್ಥಿಗಳಿಗೆ ಊಟೋಪಚಾರ ವನ್ನು ಅಜ್ಜಿಕುಟ್ಟಿರ ಭೀಮಯ್ಯ ಅವರು ಪ್ರಾಯೋಜನೆ ಮಾಡಿದ್ದರು.

ಇದಕ್ಕೂ ಮೊದಲು ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ತೋಕ್ ನಮ್ಮೆಯನ್ನು ತೆಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ಸರ್ವೆ ಇಲಾಖೆಯ ನಿವೃತ್ತ ಎ.ಡಿ.ಎಲ್.ಆರ್ ಅಜ್ಜಿಕುಟ್ಟಿರ ಭೀಮಯ್ಯ ಅವರನ್ನು ಸನ್ಮಾನಿಸಲಾಯಿತು.

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಪುರುಷರು, ಮಹಿಳೆಯರು ಸೇರಿ ೧೭೧ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಕಿರಿಯರಾದ ೪ನೇ ತರಗತಿಯ ಕಳ್ಳಿಚಂಡ ದ್ರುವ್ ಕಾರ್ಯಪ್ಪ ಮತ್ತು ೯ನೇ ತರಗತಿಯ ಅಪ್ಪಂಡೇರAಡ ಚರಣ್ ಚಂಗಪ್ಪ ಅವರು ಸಾಮಾನ್ಯ ವಿಭಾಗದಲ್ಲಿ ೨ನೇ ಸುತ್ತಿಗೆ ಅರ್ಹತೆ ಪಡೆದು ಪ್ರವೇಶಿಸುವ ಮೂಲಕ ಗಮನ ಸೆಳೆದರು. ಸಂಘಟನೆಯ ಉಪಾಧ್ಯಕ್ಷ ಚೆಕ್ಕೆರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ಸದಸ್ಯರುಗಳಾದ ಅಡ್ಡಂಡ ಸುನಿಲ್ ಸೋಮಯ್ಯ, ಅಜ್ಜಿಕುಟ್ಟಿರ ಶುಭ, ಅಡ್ಡಂಡ ಡಾಲಿ ಜನಾರ್ಧನ, ಮುದ್ದಿಯಡ ಮಂಜು ಗಣಪತಿ, ಕಳ್ಳಿಚಂಡ ಚಿಪ್ಪ ದೇವಯ್ಯ, ಕಡೇಮಾಡ ಸತೀಶ್, ಚೆಪ್ಪುಡೀರ ಸುನಿಲ್, ಅಪ್ಪೇಂಗಡ ರನ್ನು, ಗ್ರಾ.ಪಂ.ಸದಸ್ಯ ಪೆಮ್ಮಂಡ ಭರತ್, ಮೂಕಳೆೆÃರ ಮಧು ಕುಮಾರ್ ಹಾಜರಿದ್ದರು. ನೆಲ್ಲೀರ ಧನು, ಕುಪ್ಪುಡೀರ ಪೊನ್ನು ಮುತ್ತಪ್ಪ, ಕಳ್ಳಂಗಡ ನವೀನ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಮೂಕಳೆÉÃರ ಮಧುಕುಮಾರ್ ಸ್ವಾಗತಿಸಿ, ಮುದ್ದಿಯಡ ಮಂಜು ಗಣಪತಿ ನಿರೂಪಿಸಿ, ಮಂಡೇಚAಡ ದಿನೇಶ್ ಚಿಟ್ಟಿಯಪ್ಪ ವಂದಿಸಿದರು.