ಮಡಿಕೇರಿ, ಅ. ೮: ನಲ್ವತ್ತೋಕ್ಲು ಚೋಕಂಡಳ್ಳಿ ಕಂದೂರಿ ಹಜ್ರತ್ ಮುಹಮ್ಮದ್ ಪೈಗಂಬರ ಮುಹಜ್ಜಿ ಸತ್ತಿನೊಂದಿಗೆ ಪ್ರಸಿದ್ಧಿ ಹೊಂದಿರುವ ಈದ್ ಮಿಲಾದ್ ಕಂದೂರಿ ಈ ಬಾರಿ ತಾ. ೧೫ ಮತ್ತು ೧೬ ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ಈದ್ಮಿಲಾದ್ ಸಂರಕ್ಷಣಾ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಕೆ.ಎಂ.ರಫಿ ಹಾಗೂ ಕಾರ್ಯದರ್ಶಿ ಪಿ.ಎ.ಸಿರಾಜುದ್ದೀನ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ತಾ. ೧೫ ರಂದು ಅಸರ್ ನಮಾಜಿನ ಬಳಿಕ ಈದ್ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ರಫಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ ೭ ಗಂಟೆಗೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪ್ರಾರ್ಥನೆಯ ನೇತೃತ್ವವನ್ನು ಜ.ಸೈಯ್ಯದ್ ಮೆಹದಿ (ಆಂದ್ರೋತ್ ಲಕ್ಷದ್ವೀಪ) ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಜ.ಕೆ.ಎಸ್.ಶಾದುಲಿ ಫೈಜಿ ಉದ್ಘಾಟಿಸಲಿದ್ದಾರೆ.
ರಾತ್ರಿ ೮ ಗಂಟೆಗೆ ಬುರ್ದಾ ಆಲಾಪನೆ ಮತ್ತು ನಹತೇ ಶರೀಫ್ ನೇತೃತ್ವವನ್ನು ಬೆಂಗಳೂರಿನ ಜ.ಮುಹಿನುದ್ಧೀನ್ ಮತ್ತು ಸಂಗಡಿಗರು ವಹಿಸಲಿದ್ದಾರೆ.
ತಾ. ೧೬ ರಂದು ಸುಬಹಿ ನಮಾಜಿನ ಬಳಿಕ ಮೌಲೂದ್ ಪಾರಾಯಣ ನಡೆಯಲಿದ್ದು, ೮ ಗಂಟೆಗೆ ರಿಫಾಯಿ ರಾತೀಬ್ ಸಂಘದ ವತಿಯಿಂದ ಮನೆಗಳ ಸಂದರ್ಶನ, ನಂತರ ಬೆಳಿಗ್ಗೆ ೯.೩೦ಕ್ಕೆ ಮಿಲಾದ್ ಸಂದೇಶ ರ್ಯಾಲಿಯನ್ನು ಆಯೋಜಿಸಲಾಗಿದೆ.
೧೧ ಗಂಟೆಗೆ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಅಧ್ಯಕ್ಷತೆಯನ್ನು ಈದ್ಮಿಲಾದ್ ಸಂರಕ್ಷಣಾ ಸಮಿತಿ ಕೆ.ಎಂ.ರಫಿ ವಹಿಸಲಿದ್ದಾರೆ.
ಸೆಯ್ಯದ್ ಮೆಹದಿ ಆಂದ್ರೋತ್ ಪ್ರಾರ್ಥಿಸಲಿದ್ದು, ಸ್ವಾಗತವನ್ನು ಕಾರ್ಯದರ್ಶಿ ಪಿ.ಎ.ಸಿರಾಜುದ್ಧೀನ್ ಮಾಡಲಿದ್ದಾರೆ.
ಕಾರ್ಯಕ್ರಮವನ್ನು ಮೊಹಿದ್ದೀನ್ ಪಾರಾಯಣ ನಡೆಯಲಿದ್ದು, ೮ ಗಂಟೆಗೆ ರಿಫಾಯಿ ರಾತೀಬ್ ಸಂಘದ ವತಿಯಿಂದ ಮನೆಗಳ ಸಂದರ್ಶನ, ನಂತರ ಬೆಳಿಗ್ಗೆ ೯.೩೦ಕ್ಕೆ ಮಿಲಾದ್ ಸಂದೇಶ ರ್ಯಾಲಿಯನ್ನು ಆಯೋಜಿಸಲಾಗಿದೆ.
೧೧ ಗಂಟೆಗೆ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಅಧ್ಯಕ್ಷತೆಯನ್ನು ಈದ್ಮಿಲಾದ್ ಸಂರಕ್ಷಣಾ ಸಮಿತಿ ಕೆ.ಎಂ.ರಫಿ ವಹಿಸಲಿದ್ದಾರೆ.
ಸೆಯ್ಯದ್ ಮೆಹದಿ ಆಂದ್ರೋತ್ ಪ್ರಾರ್ಥಿಸಲಿದ್ದು, ಸ್ವಾಗತವನ್ನು ಕಾರ್ಯದರ್ಶಿ ಪಿ.ಎ.ಸಿರಾಜುದ್ಧೀನ್ ಮಾಡಲಿದ್ದಾರೆ.
ಕಾರ್ಯಕ್ರಮವನ್ನು ಮೊಹಿದ್ದೀನ್ ಜುಮ್ಮಾ ಮಸೀದಿ ಖದೀಬರು ಜಿಯಾದ್ ದಾರಿಮಿ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ೧೨ ಗಂಟೆಗೆ ಕಾಸರಗೋಡಿನ ನಿಜಾಮಿ ಯು.ಕೆ. ಮುಹಮ್ಮದ್ ಹನೀಫ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ವಿವಿಧ ಗಣ್ಯರು ಈ ಸಂದರ್ಭ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗು ನಿವೃತ್ತ ಖಜಾನಾಧಿಕಾರಿ ಕೆ.ಎ.ಅಲಿ, ಡಿ.ಎಂ. ಉಸ್ಮಾನ್ ಹಾಜಿ, ಚೋಕಂಡಳ್ಳಿ ನಿವೃತ್ತ ಸೈನಿಕರಾದ ಎಂ.ಎA. ಮಮ್ಮದ್, ಡಿ.ಎಂ. ಮೊಹಮ್ಮದ್ ಮಮ್ಮಿ, ಪಿ.ಎಂ. ಶಾದುಲಿ, ಹೆಚ್.ಎಸ್. ಅಬ್ದುಲ್ಲ, ಡಿ.ಹೆಚ್. ಸಮ್ಮದ್, ಡಿ.ಎ. ಸಜೀರ್, ಪೊಲೀಸ್ ಇಲಾಖೆಯ ಪಿ.ಹೆಚ್. ಇಸ್ಮಾಯಿಲ್ ಹಾಗೂ ಕಂದಾಯ ಇಲಾಖೆಯ ಡಿ.ಎ. ಮುಸ್ತಫ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಮಧ್ಯಾಹ್ನ ೨ ಗಂಟೆಗೆ ಅನ್ನದಾನ ನಡೆಯಲಿದ್ದು, ಅಲ್ಆಮೀನ್ ಕೊಳಕೇರಿ ದಫ್ ತಂಡದಿAದ ದಫ್ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.