ಸೋಮವಾರಪೇಟೆ, ಅ. ೮: ಜಿಲ್ಲಾ ಮೊಗೇರ ಸಮಾಜದ ಸಭೆ ಅಧ್ಯಕ್ಷ ಗೌತಮ್ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದು ತಾಲೂಕು ಸಮಿತಿಯನ್ನು ಪುನರ್ರಚಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷರಾಗಿ ಕೆ.ಎ. ದಿನೇಶ್, ಗೌರವಾಧ್ಯಕ್ಷರಾಗಿ ದಾಮೋದರ್, ಉಪಾಧ್ಯಕ್ಷರುಗಳಾಗಿ ಕೆ.ಬಿ. ನಂದ ಹಾಗೂ ಮುತ್ತಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಶಿವಪ್ಪ, ಸಹಕಾರ್ಯದರ್ಶಿಯಾಗಿ ಎನ್. ಶಿವಾನಂದ, ಖಜಾಂಚಿಯಾಗಿ ಕೆ.ಬಿ. ಜಯಪ್ರಕಾಶ್, ಸಂಚಾಲಕರಾಗಿ ರೋಹಿತ್ ಸೇರಿದಂತೆ ೨೨ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.