ಮಡಿಕೇರಿ, ಅ. ೮: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರಸಾರಂಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳೂರು ಇವರ ವತಿಯಿಂದ ಇತ್ತೀಚೆಗೆ “ಎರಡನೇ ಚತುರ್ಮಾಸದ ಕೊಡವ ಪಠ್ಯಪುಸ್ತಕ ಲೋಕಾರ್ಪಣಾ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಾಣಿಜ್ಯ ಕಾವೇರಿ-೨, ವಿಜ್ಞಾನ ಕಾವೇರಿ-೨, ಕಲಾ ಕಾವೇರಿ-೨, ಕಂಪ್ಯೂಟರ್ ಕಾವೇರಿ-೨, ವ್ಯವಹಾರ ಕಾವೇರಿ-೨ನ್ನು ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರು ೨ನೇ ಚತುರ್ಮಾಸದ ಕೊಡವ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. “ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಪಾರ್ವತಿ ಅಪ್ಪಯ್ಯ ಅವರ ಪರಿಶ್ರಮದಿಂದ ಇವತ್ತು ಪದವಿ ಮಟ್ಟದಲ್ಲಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಕೊಡವ ಭಾಷೆಯನ್ನು ಅಳವಡಿಸಲು ಸಾಧ್ಯವಾಗಿದೆ” ಎಂದರು. ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ “ಒಂದು ಪಠ್ಯಪುಸ್ತಕವನ್ನು ತಯಾರಿಸಲು ತಜ್ಞರ ಪರಿಶ್ರಮ ಬಹಳ ಇದೆ. ಇದು ಒಂದು ದೊಡ್ಡ ಕೆಲಸ ವಾಗಿದೆ. ನಮ್ಮ ಅವಧಿಯಲ್ಲಿ ನಾವು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಇದೀಗ ಕಾಲೇಜಿನಲ್ಲಿ ಪಿ.ಜಿ ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳು ಪ್ರಾರಂಭವಾಗಿವೆ. ಕೊಡವ ಭಾಷೆ ಇಲ್ಲಿಯವರೆಗೆ ಸಾಂಸ್ಕೃತಿಕ ಭಾಷೆಯಾಗಿದ್ದು ಅದು ಈಗ ಓದುವ ಭಾಷೆಯಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಶಾಲಾ ಮಟ್ಟದಿಂದ ಹಿಡಿದು ಸ್ನಾತಕೋತ್ತರ ವಿಭಾಗದವರೆಗೆ ಮಕ್ಕಳಿಗೆ ಕೊಡವ ಭಾಷೆ ಕಲಿಯಲು ಕೊಡವ ಪಠ್ಯಪುಸ್ತಕಗಳನ್ನು ತಯಾರಿಸಿದೆ. ಚತುರ್ಮಾಸದ ಪುಸ್ತಕದಲ್ಲಿ ಪದ್ಯ, ಗದ್ಯ, ದೀರ್ಘಗದ್ಯ, ಸಣ್ಣಕಥೆ, ನಾಟಕ, ಪ್ರಬಂಧ, ವೈಚಾರಿಕ ವಿಷಯವನ್ನು ಒಳಗೊಂಡಿದೆ. ಈ ಪುಸ್ತಕ ತಯಾರಿಗೆ ಬಾಚರಣಿಯಂಡ ಪಿ.ಅಪ್ಪಣ್ಣ, ಬಾಚರಣಿಯಂಡ, ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಶ್ರಮಪಟ್ಟಿದ್ದಾರೆ” ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ, ಕೊಡವ ಮುಲ್ಲೇಂಗಡ ರೇವತಿ ಪೂವಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಶ್ರಮಪಟ್ಟಿದ್ದಾರೆ” ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ, ಕೊಡವ