*ಗೋಣಿಕೊಪ್ಪ, ಅ. ೯: ಶಿವಾಜಿ ಯುವ ಸೇನೆ ೪೪ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಆಯೋಜಿಸಿದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಅಕ್ಷಯ್ ಮಾಲೀಕತ್ವದ ವಿ ಸವೆನ್ ಸಿದ್ದಾಪುರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮುಕ್ಕಾಟಿ ಗಗನ್ ಅವರ ವಿರಾಟ್ ಕೈಕೇರಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ವೀರಾಜಪೇಟೆ ಫ್ರೆಂಡ್ಸ್ ಮೂರನೇ ಸ್ಥಾನವನ್ನು ಗಳಿಸಿದೆ. ಕಾವೇರಿ ಕಲಾ ವೇದಿಕೆಯ ಮುಂಭಾಗದಲ್ಲಿರುವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾಟದಲ್ಲಿ ೧೮ ತಂಡಗಳು ಭಾಗವಹಿಸಿದವು.
ಅಂತಿಮ ಹಣಾಹಣಿಯಲ್ಲಿ ಸಿದ್ದಾಪುರದ ವಿ೭ ತಂಡ ೧೯ ಪಾಯಿಂಟ್ ಗಳಿಸಿ ೧೩ ಪಾಯಿಂಟ್ ಗಳಿಸಿದ ಕೈಕೇರಿಯ ವಿರಾಟ್ ತಂಡದ ವಿರುದ್ಧ ಜಯ ಸಾಧಿಸಿತು. ವಿಜೇತರಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ.ಜಿ ಬೋಪಯ್ಯ ಅವರು ನೆನಪಿನ ಕಾಣಿಕೆ ಹಾಗೂ ನಗದನ್ನು ಶಿವಾಜಿ ಯುವ ಸೇನೆಯ ಪರವಾಗಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಜಗದೀಶ್ ಜೋಡುಬೀಟಿ, ಕಿಶೋರ್ ನಾಚಪ್ಪ, ಎಚ್ .ಕೆ ಜಗದೀಶ್, ಕೇಶವ ಕಾಮತ್ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಎನ್. ಪ್ರಕಾಶ್, ನರೇನ್ ಕಾರ್ಯಪ್ಪ, ಕೊಲ್ಲೀರ ಕಾವೇರಪ್ಪ, ಎಂ.ಜಿ. ಮೋಹನ್, ಮೇಘನಾ, ಜಮ್ಶಾದ್, ಮಂಜುರೈ, ಸಿಂಗಿ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ, ರೈತ ಸಂಘ ಜಿಲ್ಲಾಧ್ಯಕ್ಷ ಮನುಸೋಮಯ್ಯ, ಕಾವೇರಿ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟಿರ ಬಿದ್ದಪ್ಪ, ತಾಲೂಕು ಯುವಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ, ಕಾರ್ಯಾಧ್ಯಕ್ಷ ಸಿಂಗಿ, ಪ್ರ. ಕಾರ್ಯದರ್ಶಿ ಸುರೇಶ್, ಗೌರವ ಅಧ್ಯಕ್ಷ ಕೊಲ್ಲಿರ ಕಾವೇರಪ್ಪ, ಖಜಾಂಚಿ ಸ್ವಾಮಿ, ಸಂಘಟನಾ ಕಾರ್ಯದರ್ಶಿ ವಿನೋದ್, ನಿರ್ದೇಶಕರುಗಳಾದ ಅಕ್ಷಯ್, ವಿದ್ವಾನ್, ಶ್ರೀಕಾಂತ್, ಶೀಜು, ಯೋಗೇಶ್, ಕಾನೂನು ಸಲಹೆಗಾರರು ಪ್ರದೀಪ್ ಕುಮಾರ್, ಗೌರವ ಸಲಹೆಗಾರರು ನಾಗೇಶ್ ಮತ್ತು ಯೋಗೇಶ್, ಶ್ರೀಕಾಂತ್, ಯೋಗೇಶ್ ರಾಜೇಶ್ ರೈ ಇದ್ದರು.
-ಎನ್.ಎನ್. ದಿನೇಶ್