ಮಡಿಕೇರಿ, ಅ. ೯: ಮುಸಲ್ಮಾನ ಬಾಂಧವರ ಪವಿತ್ರ ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಅನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಈ ಪ್ರಯುಕ್ತ ಜಾಮೀಯಾ ಮಸೀದಿ ಹಾಗೂ ಬದ್ರಿಯಾ ಜಮಾಅತ್ ಆಶ್ರಯದಲ್ಲಿ ನಗರದ ಎ.ವಿ. ಶಾಲೆ ಬಳಿಯಿಂದ ಕಾವೇರಿ ಹಾಲ್‌ವರೆಗೆ ಮಕ್ಕಳ ದಫ್ ಕುಣಿತವನ್ನು ಒಳಗೊಂಡು ಮೆರವಣಿಗೆ ನಡೆಯಿತು. ಬಳಿಕ ಕಾವೇರಿ ಹಾಲ್ ಸಭಾಂಗಣದಲ್ಲಿ ನಗರದ ಎಲ್ಲಾ ಶಾಫಿ ಹಾಗೂ ಹನಫಿ ಮಸೀದಿಗಳ ಮುಖ್ಯಸ್ಥರನ್ನೊಳಗೊಂಡು ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಅನ್ನದಾನ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅವರು ಮಾತನಾಡಿ ಪ್ರವಾದಿ ಮಹಮ್ಮದ್ ಪೈಗಂಬರರು ನೀಡಿರುವ ಸಂದೇಶಗಳನ್ನು ಪಾಲಿಸುವ ಮೂಲಕ ಇಸ್ಲಾಂ ಸಮುದಾಯದ ಮಂದಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂದು ಹೇಳಿದರು.

ವರುಷಕ್ಕೊಮ್ಮೆ ಪ್ರವಾದಿ ಅವರನ್ನು ಸ್ಮರಿಸಿ ಅಭಿಮಾನ ಮೆರೆದರೆ ಸಾಲದು; ಅವರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರವಾದಿಯವರ ಅನುಯಾಯಿ ಗಳಾದರೆ ಮಾತ್ರ ಬದುಕು ಹಸನಾಗಲು ಸಾಧ್ಯ.

ಧರ್ಮವನ್ನು ಬೆಂಬಲಿಸುವುದು ಕೋಮುವಾದವಲ್ಲ; ಧರ್ಮದವರು ಮಾಡುವ ತಪ್ಪುಗಳನ್ನು ಬೆಂಬಲಿಸುವುದು ನಿಜವಾದ ಕೋಮುವಾದ ಎಂದು ಅಭಿಪ್ರಾಯಪಟ್ಟ ಬಾಲಸುಬ್ರಮಣ್ಯ ಕಂಜರ್ಪಣೆ ದ್ವೇಷವನ್ನು ಪ್ರೀತಿಯಿಂದ ಗೆಲ್ಲಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಇಬ್ರಾಹಿಂ ಬಾತಿಷಾ ಶಂಶಿ ಅವರು ಮಾತನಾಡಿ, ಇಸ್ಲಾಂ ಎಂದಿಗೂ ಅಶಾಂತಿ, ದ್ವೇಷವನ್ನು ಪ್ರೋತ್ಸಾಹಿಸುವುದಿಲ್ಲ ಇಸ್ಲಾಂ ಧರ್ಮವನ್ನು ಗೌರವಿಸುವವರು ಎಂದಿಗೂ ಇಸ್ಲಾಂನ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾರರು ಎಂದು ಹೇಳಿದರಲ್ಲದೆ, ಇಸ್ಲಾಂನ ನೈಜ ಸಿದ್ಧಾಂತ, ಆಚರಣೆ ಇತ್ಯಾದಿ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬದ್ರಿಯಾ ಜಮಾಅತ್ ಅಧ್ಯಕ್ಷ ಅಮಿನ್ ಮೊಯ್ಸಿನ್, ಪ್ರವಾದಿ ಮಹಮ್ಮದ್ ಪೈಗಂಬರರ ಬದುಕು ನಮಗೆ ಮಾದರಿಯಾಗಬೇಕು. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ಹೇಳಿದರು. ಖಿರಾಅತ್ ಅನ್ನು ಬದ್ರಿಯಾ ಮಸೀದಿಯ ಹಾಫಿಝ್ ಫಜಲರ‍್ರಹ್ಮಾನ್ ಸಖಾಫಿ ನೆರವೇರಿಸಿದರು.

ಅತಿಥಿಗಳಾಗಿ ಜಾಮೀಯಾ ಮಸೀದಿಯ ಇಮಾಂ, ಹಾಫಿಝ್ ಉಬೈದರ‍್ರಹ್ಮಾನ್,

(ಮೊದಲ ಪುಟದಿಂದ) ಜಾಮೀಯಾ ಮಸೀದಿ ಅಧ್ಯಕ್ಷ ಇಮ್ರಾನ್, ಎಂ.ಎA. ಮಸೀದಿ ಕಾರ್ಯದರ್ಶಿ ಎಂ.ಎA. ಹಾರೂನ್, ಲಷ್ಕರ್ ಮಸೀದಿಯ ಸಯ್ಯದ್ ಇಲ್ಯಾಸ್, ಮಸ್ಜಿದರ‍್ರಹ್ಮದ ಸಿ.ಹೆಚ್. ಅಫ್ಸರ್, ಮಸ್ಜೀದ್ ಹಲೀಂನ ಎಫ್.ಎ. ಇಲ್ಯಾಸ್, ಎಂ.ಎA. ಮಸೀದಿಯ ರಫೀಕ್ ಸಅದಿ, ಮದೀನಾ ಮಸೀದಿಯ ಹಾಫಿಜ್ ಪರ್ವೆಜ್, ಮಕ್ಕಾ ಮಸೀದಿಯ ಮೌಲಾನ ಹಕೀಂ, ಬಟ್ಕಳ್‌ಮಸೀದಿಯ ಮೊಹಮದಾಲಿ ಲತೀಫಿ, ಲಷ್ಕರ್ ಮಸೀದಿಯ ಮೌಲಾನ ಇಸಾಕ್, ಮಸ್ಜಿದುರಹ್ಮಾದ ಉಮರ್ ಮೌಲವಿ, ಮಸ್ಜೀದ್ ಹಲೀಂನ ಮೌಲಾನ ಜಂಶೀದ್, ಬದ್ರಿಯಾ ಮಸೀದಿಯ ಸದರ್ ಮುಅಲ್ಲಿಂ ಅಶ್ರಫ್ ವಿಸ್ಬಾಯ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ಸೇವೆಯಲ್ಲಿ ಪಿಡಿಓ ಅಬ್ದುಲ್ಲಾ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕ ಮೆಹಬೂಬ್ ಸಾಬ್, ಆರೋಗ್ಯ ಕ್ಷೇತ್ರದಲ್ಲಿ ವೈದ್ಯ ಡಾ. ಅಬ್ದುಲ್ ಅಜೀಜ್, ಕ್ರೀಡಾಕ್ಷೇತ್ರದಲ್ಲಿ ಜಂಶದ್ ಇವರುಗಳನ್ನು ಹಾಗೂ ಕೊರೊನಾ ವಾರಿಯರ್ಸ್ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಂ.ಇ. ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.