ಪೊನ್ನಂಪೇಟೆ, ಅ. ೯: ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಕೇವಲ ಸರಕಾರದ ಅಥವಾ ಸಂಘ-ಸAಸ್ಥೆಗಳ ಆದ್ಯತೆಯಾಗಬಾರದು. ಈ ಕುರಿತು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿ ಹೊರುವ ಮೂಲಕ ಪರಿಸರ ಸಂರಕ್ಷಣೆ ಸಾಮೂಹಿಕ ಹೊಣೆಗಾರಿಕೆ ಯಾಗಬೇಕು ಎಂದು ವೀರಾಜಪೇಟೆ ಮಂಡಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ ಅಭಿಪ್ರಾಯಪಟ್ಟಿದ್ದಾರೆ.

ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿ. ಬಾಡಗದ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ನಡೆದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ತೆಂಗಿನ ಮರವೊಂದನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಕುರಿತ ಜಾಗೃತಿ ವ್ಯಾಪಕವಾಗಬೇಕು. ಪರಿಸರ ಉಳಿಯದಿದ್ದಲ್ಲಿ ನಾಗರಿಕ ಸಮಾಜದ ಅಸ್ತಿತ್ವವೇ ಇರುವುದಿಲ್ಲ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖರಾದ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ದೇಶ ವ್ಯಾಪ್ತಿ ನಡೆಯುತ್ತಿರುವ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಬಿಟ್ಟಂಗಾಲ ಶಕ್ತಿ ಕೇಂದ್ರದ ವತಿಯಿಂದಲೂ ವಿವಿಧ ಕಾರ್ಯಕ್ರಮಗಳೊಂದಿಗೆ ಹಂತ ಹಂತವಾಗಿ ಆಚರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.

ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಕುರಿತ ಪ್ರತಿಜ್ಞೆ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬಿ. ಬಾಡಗ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕುಪ್ಪಂಡ ಮೋಹನ್ ಮೊಣ್ಣಪ್ಪ, ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ಪದಾಧಿಕಾರಿಗಳಾದ ನಂಬುಡುಮಾಡ ಮುತ್ತಪ್ಪ, ಕುಪ್ಪಂಡ ಜಯ ಕರುಂಬಯ್ಯ, ಕುಪ್ಪಂಡ ನಾಣಯ್ಯ, ಪಕ್ಷದ ಪ್ರಮುಖರಾದ ಕೋಲತಂಡ ಸುಬ್ರಮಣಿ, ತೀತಿಮಾಡ ಮುತ್ತಣ್ಣ, ಕೊಂಗAಡ ಅಚ್ಚಯ್ಯ ಕೊಂಗAಡ ಅರುಣ್ ಮೊಣ್ಣಪ್ಪ, ನಂಬುಡುಮಾಡ ಸುಬ್ರಮಣಿ, ಕುಪ್ಪಂಡ ಹರೀಶ್, ಅಮ್ಮುಣಿಚಂಡ ರೋಹಿತ್, ಅಮ್ಮುಣಿಚಂಡ ಕುಟ್ಟಪ್ಪ, ದೇವಸ್ಥಾನದ ಅರ್ಚಕರಾದ ಗೋಪಾಲಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.