ಕಡಂಗ, ಅ. ೮: ದೇಶದ ಅತ್ಯುನ್ನತ ವಿದ್ಯಾಸಂಸ್ಥೆಯಾದ ಮರ್ಕಝ್ ಅಧೀನದ ನಾಲೇಡ್ಜ್ ಸಿಟಿಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕೊಡಗು ಜಿಲ್ಲಾ ಪ್ರಚಾರ ಸಮಾವೇಶ ವಿವಿಧ ಸ್ಥಳಗಳಲ್ಲಿ ನಡೆಯಿತು. ವೀರಾಜಪೇಟೆ ಸರ್ಕಲ್ ಕಾರ್ಯಕ್ರಮ ಅನ್ವಾರುಲ್ ಹುದಾದಲ್ಲಿ ನಡೆಯಿತು. ಸಯ್ಯದ್ ಖಾಸಿಂ ತಂಙಳ್ ಅವರ ದುಆದೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವು ಮರ್ಕಝ್ ಡೈರೆಕ್ಟರ್ ಸಯ್ಯದ್ ಶರಫುದ್ದೀನ್ ಜಮಲುಲ್ಲೆöÊಲಿ ತಂಙಳ್ ಉದ್ಘಾಟಿಸಿದರು.
ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನೀ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ಕೊಡಗು ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಡಿ.ಹೆಚ್. ಸೂಫಿ ಹಾಜಿ ಹಾಗೂ ಶಂಸುಲ್ ಉಲಮಾ ಎಜುಕೇಷನ್ ಟ್ರಸ್ಟ್ ಪೆರುಂಬಾಡಿ ಇದರ ಡೈರೆಕ್ಟರ್ ಬಶೀರ್ ಹಾಜಿ ಎಡಪ್ಪಲಂ ಶುಭ ಹಾರೈಸಿದರು.
ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಶಾದುಲಿ ಫೈಝಿ ಉಸ್ತಾದ್, ಎಸ್ವೈಎಸ್ ಜಿಲ್ಲಾಧ್ಯಕ್ಷ ಸಯ್ಯದ್ ಇಲ್ಯಾಸ್ ತಂಙಳ್, ನಾಲೆಡ್ಜ್ ಸಿಟೀ ಉದ್ಘಾಟನಾ ಸ್ವಾಗತ ಸಮಿತಿ ಕನ್ವೀನರ್ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಸಲಾಂ ಗೋಣಿಕೊಪ್ಪ, ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಫಿ ವೀರಾಜಪೇಟೆ ಉಪಸ್ಥಿತರಿದ್ದರು. ಅಹ್ಮದ್ ಮದನಿ ಸ್ವಾಗತಿಸಿ, ಯಾಕೂಬ್ ಮಾಸ್ಟರ್ ನಿರೂಪಿಸಿ, ವಂದಿಸಿದರು.