ಮಡಿಕೇರಿ, ಅ. ೮ : ಜೂನಿಯರ್ ಮೆನ್ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು ತಂಡದಲ್ಲಿ ಕೊಡಗಿನ ಯುವ ಆಟಗಾರ ಚಂದೂರ ಬಿ. ಪೂವಣ್ಣ ಸ್ಥಾನ ಪಡೆದಿದ್ದಾರೆ. ಮಲೇಷಿಯಾದ ಜೋಹಾಕ್‌ಬರುವಿನಲ್ಲಿ ಅ. ೨೨ ರಿಂದ ಆರಂಭಗೊಳ್ಳಲಿರುವ ಸುಲ್ತಾನ್

ಆಫ್ ಜೋಹಾರ್ ಕಪ್ ಹಾಕಿ ಪಂದ್ಯಾವಳಿಗಾಗಿ ಈ ತಂಡವನ್ನು ಪ್ರಕಟಿಸಲಾಗಿದೆ. ಮೂಲತಃ ಕಂಡAಗಾಲ ಗ್ರಾಮದ ಚಂದೂರ ಎಸ್. ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ-ಮಲ್ಲೇಂಗಡ) ದಂಪತಿಯ ಪುತ್ರ ಪೂವಣ್ಣ ಭಾರತ ತಂಡದಲ್ಲಿದ್ದಾರೆ. ಕರ್ನಾಟಕದಿಂದ ಇಬ್ಬರು ಆಟಗಾರರು ಮಾತ್ರ ತಂಡದಲ್ಲಿದ್ದು ಈ ಪೈಕಿ ಪೂವಣ್ಣ ಓರ್ವ ಸದಸ್ಯರಾಗಿದ್ದಾರೆ. ಹಾಸನದ ಮೋಹಿತ್ ಕೆ.ಎಸ್. ರಾಜ್ಯದ ಮತ್ತೊಬ್ಬ ಆಟಗಾರ.

ಈ ಹಿಂದೆ ರಾಷ್ಟಿçÃಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಪೂವಣ್ಣ ೨೦೨೩ರ ಡಿಸೆಂಬರ್‌ನಲ್ಲಿ ಮಲೇಷಿಯಾದಲ್ಲೇ ನಡೆಯಲಿರುವ ಜೂನಿಯರ್

(ಮೊದಲ ಪುಟದಿಂದ) ವಿಶ್ವಕಪ್ ತನಕ ಆಯ್ಕೆ ಮಾಡಲಾಗಿರುವ ಭಾರತ ತಂಡ ೩೩ ಸದಸ್ಯರ ಕೋರ್ ಕ್ಯಾಂಪ್‌ನಲ್ಲಿ ಸ್ಥಾನ ಪಡೆದಿದ್ದು, ಇದೀಗ ಸುಲ್ತಾನ್ ಆಫ್ ಜೋಹಾರ್ ಕಪ್ ಪಂದ್ಯಾವಳಿಗೆ ಆಯ್ಕೆ ಮಾಡಿರುವ ೧೮ ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯದವರಾದ ಮೋಹಿತ್ ಕೆ.ಎಸ್. ಕೂಡ ಈ ಕ್ಯಾಂಪ್‌ನಲ್ಲಿದ್ದಾರೆ.

ಪAದ್ಯಾವಳಿಯಲ್ಲಿ ಗ್ರೇಟ್‌ಬ್ರಿಟನ್, ಆಸ್ಟೆçÃಲಿಯಾ, ಜಪಾನ್, ದಕ್ಷಿಣ ಆಫ್ರಿಕಾ ಹಾಗೂ ಅತಿಥೇಯ ಮಲೇಷಿಯಾ ರಾಷ್ಟçಗಳು ಪಾಲ್ಗೊಳ್ಳುತ್ತಿವೆ. ತಂಡದ ನಾಯಕರಾಗಿ ಉತ್ತಮ್ ಸಿಂಗ್ ಭಾರತವನ್ನು ಮುನ್ನಡೆಸಲಿದ್ದಾರೆ. ಪೂವಣ್ಣ ಆಯ್ಕೆಯ ಬಗ್ಗೆ ಪ್ರತಿಕ್ರ‍್ರಿಯಿಸಿರುವ ಹಾಕಿ ಕರ್ನಾಟಕದ ಸೆಕ್ರ‍್ರೆಟರಿ ಜನರಲ್ ಡಾ. ಎ.ಬಿ. ಸುಬ್ಬಯ್ಯ ಅವರು ಹಲವು ವರ್ಷಗಳ ಅಂತರದ ಬಳಿಕ ಜೂನಿಯರ್ ಇಂಡಿಯಾ ತಂಡಕ್ಕೆ ಕೊಡಗಿನ ಒಬ್ಬರು ಆಟಗಾರರು ಹಾಗೂ ಹಾಸನದಿಂದ ಮತ್ತೊಬ್ಬರು ರಾಜ್ಯದ ಪರವಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ. ಇವರ ಆಯ್ಕೆ ಇನ್ನಷ್ಟು ಯುವ ಪ್ರತಿಭೆಗಳಿಗೆ ಉತ್ತೇಜನಕಾರಿಯಾಗಲಿ ಎಂದು ಆಶಿಸಿದ್ದಾರೆ. ಅಲ್ಲದೆ ಈ ಯುವ ಆಟಗಾರರಿಂದ ಉತ್ತಮ ಪ್ರದರ್ಶನ ಬಯಸುವುದಾಗಿ ಅವರು ತಿಳಿಸಿದ್ದಾರೆ.