ಮಡಿಕೇರಿ, ಅ. ೯: ಜಿಲ್ಲೆಯ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನುಮದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಆಚರಿಸಿದರು. ಈದ್ ಮಿಲಾದ್ ಪ್ರಯುಕ್ತ ಎಲ್ಲ ಜಮಾಅತ್ ಗಳ ವ್ಯಾಪ್ತಿಯಲ್ಲೂ ಅರಬಿ ಮದರಸದ ಮಕ್ಕಳಿಗೆ ವಿವಿಧ ಭಾಷೆಗಳಲ್ಲಿ ಪೈಗಂಬರರ ಕುರಿತು ಹಾಡುಗಾರಿಕೆ, ಭಾಷಣ, ಸಂಭಾಷಣೆ, ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇಂದು ಬೆಳಿಗ್ಗೆ ಎಲ್ಲೆಡೆ ಆಕರ್ಷಕ ದಫ್ ಪ್ರದರ್ಶನದೊಂದಿಗೆ ಮೆರವಣಿಗೆ ಕೂಡ ನಡೆಯಿತು.
ಕೂಡಿಗೆ: ಕೂಡಿಗೆಯ ಮೊಯುದ್ದೀನ್ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಪ್ರಮುಖ ಬೀದಿಗಳಲ್ಲಿ ಮಿಲಾದ್ ರ್ಯಾಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹಮೀರ್ ಆಲಿ, ಕಾರ್ಯದರ್ಶಿ ನೌಫಲ್, ಕೂಡಿಗೆ ಗ್ರಾ.ಪಂ. ಸದಸ್ಯ ಟಿ.ಪಿ. ಹಮೀದ್ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಸಮುದಾಯದ ಬಾಂಧವರು ಭಾಗವಹಿಸಿದ್ದರು.
ಚೆಟ್ಟಳ್ಳಿ: ಚೆಟ್ಟಳ್ಳಿ ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಹಾಗೂ ಈದ್ ಮಿಲಾದ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನವನ್ನು ಸಂಭ್ರಮದಿAದ ಆಚರಿಸಲಾಯಿತು.
ಕಂಡಕರೆಯಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಿತು. ಕಂಡಕರೆ ಹಯಾತುಲ್ ಇಸ್ಲಾಂ ಮದರಸ ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಸೀದಿಯಲ್ಲಿ ಪ್ರವಾದಿ ಜನ್ಮದಿನದ ಅಂಗವಾಗಿ ಮೌಲಿದ್ ಪಾರಾಯಣ ಕಾರ್ಯಕ್ರಮ ನಡೆಯಿತು. ಮೌಲಿದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಫಿ ವಹಿಸಿದ್ದರು.
ಧ್ವಜಾರೋಹಣವನ್ನು ಹಯಾತುಲ್ ಇಸ್ಲಾಂ ಮುಖ್ಯೋಪಾಧ್ಯಾಯ ಖಾತಿಮ್ ತಂಙಲ್ ನೆರವೇರಿಸಿದರು. ಕಂಡಕರೆಯ ಮಸೀದಿಯಿಂದ ಕಾಫಿ ಬೋರ್ಡ್ವರೆಗೆ ಈದ್ ಮಿಲಾದ್ ರ್ಯಾಲಿ ನಡೆಯಿತು. ರ್ಯಾಲಿಯಲ್ಲಿ ಓಲ್ಡ್ ಸ್ಟೂಡೆಂಟ್ಸ್ ಹಾಗೂ ಮದರಸ ವಿದ್ಯಾರ್ಥಿಗಳು ಧಪ್ ಪ್ರದರ್ಶನ ಸರ್ವಧರ್ಮಿಯರ ಮನಗೆದ್ದಿತ್ತು.
ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧೆಡೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಈದ್ ಮಿಲಾದ್ ಅನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿAದ ಆಚರಿಸಲಾಯಿತು.
ಇಲ್ಲಿನ ಮುಹಿಯದ್ದೀನ್ ಜುಮ್ಮಾ ಮಸೀದಿ ವತಿಯಿಂದ ಮುಸ್ಲಿಂ ಸಾಂಪ್ರದಾಯಿಕ ದಫ್ ಹಾಗೂ ಪೈಗಂಬರ್ ಅವರ ಸಂದೇಶಗಳನ್ನು ಸಾರುವ ಬಾವುಟ ಘೋಷಣೆಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ತೆರಳಿದ ಮುಸ್ಲಿಂ ಬಾಂಧವರು ಸಂತೆ ಮೈದಾನದಲ್ಲಿ ಜಮಾವಣೆಗೊಂಡು ಸಭಾ ಕಾರ್ಯಕ್ರಮದಲ್ಲಿ ದಿನದ ಮಹತ್ವದ ಬಗ್ಗೆ ಜನಾಂಗದ ಪ್ರಮುಖರು ಮಾತನಾಡಿದರು.
ಕಲಾ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು . ಜಮಾಯತ್ ಮತ್ತು ಮದರಸ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಮಾಯತ್ ಆಡಳಿತ ಮಂಡಳಿ ಪದಾಧಿಕಾರಿಗಳು , ಸದಸ್ಯರು , ಮದರಸದ ಬೋಧಕ ವರ್ಗ, ಪೋಷಕರು ಸೇರಿದಂತೆ ಅಧಿಕ ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಈ ಸಂದರ್ಭ ಮಕ್ಕಳು ಹಿರಿಯರು ಹೊಸ ಬಟ್ಟೆ ಧರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಸಂಭ್ರಮಿಸಿದರು.
ನಾಪೋಕ್ಲು ಸೇರಿದಂತೆ ಹಳೆ ತಾಲೂಕು, ಚೆರಿಯಪರಂಬು, ಕೊಟ್ಟಮುಡಿ, ಎಮ್ಮೆಮಾಡು ,ಪಡಿಯಾಣಿ, ಕುಂಜಿಲ, ಕೊಳಕೇರಿ, ಹೊದವಾಡ , ಬೆಟ್ಟಗೇರಿ ಮತ್ತಿತರ ಭಾಗಗಳಲ್ಲಿ ಜಮಾಯತ್ಗೆ ಒಳಪಟ್ಟ ಮಸೀದಿಗಳಿಗೆ ವಿಶೇಷ ದೀಪಾಲಂಕಾರ ಹಾಗೂ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಸಡಗರ ಸಂಭ್ರಮದಿAದ ಈದ್ ಮಿಲಾದ್ದನ್ನು ಆಚರಿಸಲಾಯಿತು.ಕಡಂಗ: ಕಡಂಗ ಬದ್ರಿಯಾ ಸುನ್ನಿ ಮದರಸ ವತಿಯಿಂದ ಈದ್ ಮಿಲಾದ್ ಅಂಗವಾಗಿ ಕೊಕ್ಕಂಡ ಬಾಣೆ ದರ್ಗಾ ಶರೀಫನಲ್ಲಿ ಖತೀಬ್ ಉಸ್ತಾದ್ ಶಝಾನ್ ಸಕಾಫಿ ಪ್ರಾರ್ಥನೆ ನಡೆಸುವ ಮೂಲಕ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳು ದಫ್ ಪ್ರದರ್ಶನವನ್ನು ಕಡಂಗ ಪಟ್ಟಣದಲ್ಲಿ ಪ್ರದರ್ಶಿಸಿ ಗಮನ ಸೆಳೆದರು. ಮದರಸ ವಠಾರದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪ್ರವಾದಿಯವರ ಜೀವನ ಚರಿತ್ರೆ ಮತ್ತು ಸಂದೇಶವನ್ನು ಸಂಕ್ಷಿಪ್ತವಾಗಿ ಭಾಷಣ ಮುಖಾಂತರ ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಲೈಮಾನ್, ಆಚರಣೆಯ ಪ್ರಮುಖರಾದ ಹಸೈನಾರ್, ಮದರಸದ ಮುಖ್ಯ ಉಪಾಧ್ಯಾಯರಾದ ಹಾರಿಸ್ ಬಯಾನಿ, ಇಸ್ಮಾಯಿಲ್ ಉಸ್ತಾದ್, ರಜಾಕ್ ಉಸ್ತಾದ್, ಆಶಿಕ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ಪೊನ್ನಂಪೇಟೆ: ಪೊನ್ನಂಪೇಟೆ ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮ್ಮಾ ಮಸೀದಿ, ಕಾಟ್ರಕೊಲ್ಲಿ ಮುಹಿಯದ್ದೀನ್ ಜುಮ್ಮಾ ಮಸೀದಿ ಮತ್ತು ಅನಫಿ ಜುಮ್ಮಾ ಮಸೀದಿ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯಲ್ಲಿ ಮಿಲಾದ್ ರ್ಯಾಲಿ ನಡೆಸಲಾಯಿತು.
ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದ ಸಮೀಪದಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ರ್ಯಾಲಿಯಲ್ಲಿ ಪಾಲ್ಗೊಂಡರು. ರ್ಯಾಲಿಯುದ್ದಕ್ಕೂ ಪ್ರವಾದಿ ಮಹಮ್ಮದ್ ಪೈಗಂಬರರ ಸಂದೇಶಗಳನ್ನು ಸಾರುತ್ತಾ ಸಾಗಿದರು. ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕಿದರು.
ಈ ಸಂದರ್ಭ ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಆಲಿರ ಅಬ್ದುಲ್ ರಶೀದ್, ಆಲಿರ ಎರ್ಮು ಹಾಜಿ, ಗ್ರಾ.ಪಂ.ಸದಸ್ಯ ಅಜೀಜ್, ಶಾಫಿ ಜುಮ್ಮ ಮಸೀದಿ ಅಧ್ಯಕ್ಷ ಅಹಮದ್ ಹಾಜಿ, ಉಪಾಧ್ಯಕ್ಷ ಸಿ.ಎಂ.ಆಶ್ರಫ್, ಕಾರ್ಯದರ್ಶಿ ಅಜೀಜ್, ಮೌಲ್ವಿಗಳಾದ ನಾಸಿರ್ ಫೈಜಿ, ಅನಫಿ ಜುಮ್ಮ ಮಸೀದಿ ಕಾರ್ಯದರ್ಶಿ ಮುಹಿಸಿನ್, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಮುಸ್ತಫ, ಮೂರು ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು. ರ್ಯಾಲಿಯ ನಂತರ ಮಸೀದಿಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಮುಸ್ಲಿಂ ಸಮುದಾಯದವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಅಂಗವಾಗಿ ಈದ್ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ಪಟ್ಟಣದ ಜಲಾಲಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಂತರ ಪಟ್ಟಣದಲ್ಲಿ ಈದ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಕ್ಕಳಿಂದ ಮೂಡಿಬಂದ ದಫ್ ನೃತ್ಯ ಗಮನ ಸೆಳೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಈ ಸಂದರ್ಭ ಜಲಾಲಿಯಾ ಮಸೀದಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ಧರ್ಮ ಗುರುಗಳಾದ ಅಬ್ದುಲ್ ಅಜೀಜ್ ಸಖಾಫಿ, ಮಾಜೀ ಅಧ್ಯಕ್ಷ ಕೆ.ಎ. ಆದಂ, ಪ್ರಮುಖರಾದ ಅಶ್ರಫ್, ಅಬ್ದುಲ್ ಸಮದ್ ಇತರರು ಹಾಜರಿದ್ದರು.
ಬಜೆಗುಂಡಿಯ ಖಿಳಾರಿಯಾ ಮಸೀದಿಯಲ್ಲಿ ಈದ್ ಮಿಲಾದ್ ಅಂಗವಾಗಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಸೀದಿ ಅಧ್ಯಕ್ಷ ಕೆ.ಎ. ಯಾಕೂಬ್ ಸೇರಿದಂತೆ ಪ್ರಾರ್ಥನಾ ಮಂದಿರಕ್ಕೆ ಒಳಪಡುವ ಗ್ರಾಮಗಳ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.
ಇದರೊಂದಿಗೆ ತಣ್ಣೀರುಹಳ್ಳ, ಕಲ್ಕಂದೂರು, ಹೊಸತೋಟ, ಕಾಗಡಿಕಟ್ಟೆ ಗ್ರಾಮದಲ್ಲಿರುವ ಮಸೀದಿಗಳಲ್ಲಿ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಜುಮ್ಮಾ ಮಸೀದಿಯ ವತಿಯಿಂದ ಈದ್ ಮಿಲಾದ್ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಹಬ್ಬ ಆಚರಣೆ ಪ್ರಯುಕ್ತ ನಗರದ ಬಸ್ ನಿಲ್ದಾಣದ ಬಳಿ ಇರುವ ಶಾಫಿ ಜುಮ್ಮಾ ಮಸೀದಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೆರವಣಿಗೆ ಹಾಡು, ಮೇಳೈಸಿದವು.
ಶಾಂತಿ, ಸೌಹಾರ್ದ, ಸಾಮರಸ್ಯ, ದೇಶಪ್ರೇಮ, ಮಾನವೀಯತೆ ಮೊದಲಾದ ಸಂದೇಶಗಳನ್ನು ಹೊತ್ತ ಫಲಕಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಉಮಾಮಹೇಶ್ವರಿ ದೇವಸ್ಥಾನದವರೆಗೆ ಸಾಗಿದ ಮೆರವಣಿಗೆ ಬಳಿಕ ಕಿತ್ತಳೆ ಸಹಕಾರಿ ಸಂಘದ ರಸ್ತೆಗೆ ತಿರುಗಿ ಅಲ್ಲಿನ ಖಾಸಗಿ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಧಪ್ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಹಲವು ಮೌಲ್ವಿಗಳು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳ ಬಗ್ಗೆ ಪ್ರವಚನ ನೀಡಿದರು. ಮಕ್ಕಳು ಹಾಗೂ ಯುವಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಮಾಜದಲ್ಲಿ ಅಶಾಂತಿ, ಮೌಡ್ಯತೆ, ಕಂದಾಚಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರವಾದಿ ಪೈಗಂಬರರು ಜನ್ಮ ತಾಳಿ ಬಂದರು. ಅವರು ಹುಟ್ಟಿದ ದಿನವನ್ನು ಈದ್ಮಿಲಾದ್ ಆಗಿ ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ಜುಮ್ಮಾ ಕಾರ್ಯದರ್ಶಿ ಹಕೀಮ್ ಹೇಳಿದರು. ಮಸೀದಿಯ ಅಧ್ಯಕ್ಷ ಬಷೀರ್. ಸೇರಿದಂತೆ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಈದ್ ಆಚರಣೆ ಸಮಿತಿ ಅಧ್ಯಕ್ಷ ಶಮ್ಮು ಕಾರ್ಯದರ್ಶಿ ಸಲಾಂ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಕುಶಾಲನಗರ: ಈದ್ ಮಿಲಾದ್ ಕಾರ್ಯಕ್ರಮದ ಅಂಗವಾಗಿ ಕುಶಾಲನಗರ ಹಿಲಾಲ್ ಮಸೀದಿ ಮತ್ತು ದಾರುಲ್ ಉಲೂಂ ಮದರಸ ಆಶ್ರಯದಲ್ಲಿ ಕುಶಾಲನಗರದಲ್ಲಿ ಮೆರವಣಿಗೆ ನಡೆಯಿತು.
ಬೈಚನಹಳ್ಳಿ ಸಮೀಪದಿಂದ ಹೊರಟ ಮೆರವಣಿಗೆ ಕುಶಾಲನಗರದ ಮುಖ್ಯ ರಸ್ತೆಯಲ್ಲಿ ಸಾಗಿ ದಂಡಿನಪೇಟೆ ಮೂಲಕ ಬಂದು ಮದರಸದ ಸಭಾಂಗಣಕ್ಕೆ ತೆರಳಿತು.
ಈ ಸಂದರ್ಭ ಹಿಲಾಲ್ ಮಸೀದಿಯ ಅಧ್ಯಕ್ಷರಾದ ಎಂ. ವೈ. ಇಸ್ಮಾಯಿಲ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದಾರುಲ್ ಉಲೂಂ ಮದರಸದ ಪ್ರಾಂಶುಪಾಲರಾದ ಎಂ ತಮ್ಲಿಕ್ ದಾರಿಮಿ ಮತ್ತು ವಿವಿಧ ಮಸೀದಿಗಳ ಪ್ರಮುಖರು ಇದ್ದರು.ಕುಶಾಲನಗರ: ಇಸ್ಲಾಂ ಧರ್ಮವು ಶಾಂತಿ, ಸಮಾನತೆ, ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ ಎಂದು ಕುಶಾಲನಗರ ದಾರುಲ್ ಉಲೂಂ ಮದ್ರಸ ಹಾಗೂ ಪಾಳಿಲಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಎಂ. ತಮ್ಲೀಕ್ ದಾರಿಮಿ ಹೇಳಿದರು.
ಪ್ರವಾದಿ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಕುಶಾಲನಗರದ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಗಳನ್ನು ಅವಹೇಳನ ಮಾಡುವ ಕೆಲಸ ಆಗಬಾರದು. ಪ್ರತಿಯೊಂದು ಧರ್ಮಗಳನ್ನು ಗೌರವಿಸುವಂತಾಗಬೇಕು. ಪ್ರವಾದಿಯವರು ಎಲ್ಲರನ್ನೂ ಪ್ರೀತಿಸುವ ಮತ್ತು ಶಾಂತಿ ಸಹಬಾಳ್ವೆಯಿಂದ ಜೀವಿಸಲು ತಿಳಿಸಿದ್ದಾರೆ. ಅನ್ಯರಿಗೆ ತೊಂದರೆ ನೀಡುವವನು ನೈಜ ಮುಸಲ್ಮಾನನಲ್ಲಾ ಎಂದು ಸಾರುವ ಇಸ್ಲಾಂ ಧರ್ಮ, ದುಷ್ಕೃತ್ಯಗಳನ್ನು ನಡೆಸುವವರನ್ನು ವಿರೋಧಿಸುತ್ತದೆ ಎಂದರು.
ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕರೀಂ ಮಾತನಾಡಿ, ಪ್ರವಾದಿಯವರು ವಿಶ್ವ ಶ್ರೇಷ್ಟ ಮಾನವರಾಗಿದ್ದಾರೆ. ಅವರ ಜೀವನ ಸಂದೇಶಗಳು ಎಲ್ಲರಿಗೆ ಮಾದರಿ ಎಂದರು.
ನಿವೃತ್ರ ಶಿಕ್ಷಕ ಎಂ.ಎಚ್. ನಜೀರ್ ಅಹಮದ್ ಮಾತನಾಡಿ, ಪ್ರವಾದಿಯವರು ಜೀವನ ಸಂದೇಶಗಳನ್ನು ಸಾರಿದರು. ಪ್ರಸ್ತುತ ಕಾಲಘಟ್ಟದಲ್ಲಿ ಮಾನವೀಯತೆ ಮರೆಯಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಜಾಮಿಯಾ ಮಸೀದಿ ಅಧ್ಯಕ್ಷ ಮುಜೀಬ ರೆಹಮಾನ್ ಮಾತನಾಡಿದರು. ಕಾರ್ಯಕ್ರಮವನ್ನು ದಾರುಲ್ ಉಲೂಂ ಮದ್ರಸ ಧರ್ಮಗುರುಗಳಾದ ಸೂಫಿ ದಾರಿಮಿ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಮಿಟಿ ಅಧ್ಯಕ್ಷರಾದ ಎಂ.ವೈ. ಇಸ್ಮಾಯಿಲ್ ಹಾಜಿ ವಹಿಸಿದ್ದರು.
ಅಧ್ಯಾಪಕ ಉನೈಸ್ ಫೈಜಿಯವರು ಪ್ರಾರ್ಥನೆ ಮಾಡಿದರು. ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಸ್ವಾಗತಿಸಿದರು.
ಈ ಸಂದರ್ಭ ಹಿಲಾಲ್ ಮಸೀದಿಯ ಮಾಜಿ ಅಧ್ಯಕ್ಷರಾದ ಎಂ. ಸಲೀಂ, ಪ್ರಮುಖ ಎಂ.ಎA.ಎಸ್. ಹುಸೇನ್, ಎಂ.ಈ ಮೋಯಿದೀನ್, ಮುಸ್ತಫ, ಹಂಸ, ಫಾರೂಕ್, ಪಿಎಂ ಅಬ್ದುಲ್ಲಾ, ಹಂಸ ಹಾಜಿ, ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ಊರಿನ ಪ್ರಮುಖರು ಇದ್ದರು.