ಶ್ರೀಮಂಗಲ, ಅ. ೯: ಕೊಡವ ಭಾಷೆಯನ್ನು ಬೆಳೆಸುವ ಮತ್ತು ಕೊಡವ ಭಾಷೆಯನ್ನು ಕಲಿಸುವ ಉದ್ದೇಶದಿಂದ ಚಿಕ್ಕ ಮಕ್ಕಳಲ್ಲಿ ಎರಡರಿಂದ ಐದನೇ ತರಗತಿವರೆಗೆ ಪಠ್ಯಪುಸ್ತಕ ಹೊರತಂದಿದ್ದು ಇದೊಂದು ಕೊಡವ ಭಾಷೆ ಬೆಳವಣಿಗೆಗೆ ಅತ್ಯಂತ ದೊಡ್ಡ ಪ್ರಯತ್ನ ಎಂದು ಕೊಡವ ಜಾನಪದ ತಜ್ಞ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಡ ಮೋಟಯ್ಯ ಅವರು ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ನಡೆದ ಕೊಡವ ಪಠ್ಯಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಬಿಡುಗಡೆ ಮಾಡಿದರೆ ಸಾಲದು. ಇದು ಶಾಲೆಯ ಪಠ್ಯಕ್ರಮದಲ್ಲಿ ಮುಂದುವರಿಯಬೇಕು, ಮಾತೃ ಭಾಷೆಯನ್ನು ಬೆಳೆಸಲು ಅಕಾಡೆಮಿ ಮತ್ತು ಕೆಲವು ಶಾಲೆಗಳು ಸ್ವಯಂ ಪ್ರೇರಿತರಾಗಿ ಪಠ್ಯಕ್ರಮದಲ್ಲಿ ಅಳವಡಿಸಿ ಕೊಂಡಿವೆ. ಇದು ಸಣ್ಣ ವಯಸ್ಸಿನಲ್ಲಿ ಕೊಡವ ಭಾಷೆಯನ್ನು ಮಾತನಾಡಲು ಹಾಗೂ ಬರೆಯಲು ಸಹಕಾರವಾಗಲಿದೆ ಎಂದು ಹೇಳಿದರು.
ಕಳೆದ ವರ್ಷ ಒಂದನೇ ತರಗತಿಗೆ ಪಠ್ಯ ಪುಸ್ತಕವನ್ನು ಬಿಡುಗಡೆ ಮಾಡಿ ಕೆಲವು ಶಾಲೆಗಳು ಅದನ್ನು ಒಂದನೇ ತರಗತಿಯಲ್ಲಿ ಅಳವಡಿಸಿಕೊಂಡಿವೆ, ಕಳೆದ ಸಾಲಿನ ಶಿಕ್ಷಕರ ವೇತನವನ್ನು ಅಕಾಡೆಮಿ ಭರಿಸಿತ್ತು ಮುಂದುವರಿದ ಸಾಲಿನ ಶಿಕ್ಷಕರ ವೇತನವನ್ನು ಭರಿಸಲು ಮುಂದಾಗುವ ಮೂಲಕ ಕೊಡವ ಭಾಷೆಯನ್ನು ಉಳಿಸಿ ಬೆಳೆಸಲು ಉತ್ತೇಜನ ನೀಡಬೇಕು ಎಂದು ಹೇಳಿದರು. ಪಾಠ ಪುಸ್ತಕ ಸಮಿತಿ ಸದಸ್ಯ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ ಬಿಡುಗಡೆಯಾದ ಪುಸ್ತಕದ ವಿವರಣೆಯನ್ನು ನೀಡಿ ಅಕಾಡೆಮಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಕ್ಷೇತ್ರ, ಸಂಶೋಧನಾ ಗ್ರಂಥಗಳಿಗೆ ವಿಶೇಷ ಒತ್ತು ನೀಡಿರುವುದು ಶ್ಲಾಘನೀಯ, ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಕೊಡವ ಭಾಷೆಯನ್ನು ಕಲಿಯಲು ಪಠ್ಯ ಪುಸ್ತಕ ಹೊರ ತಂದು ಉತ್ತಮವಾದ ಕೆಲಸ ಮಾಡಿದೆ. ಕಪ್ಪು ಬಿಳುಪು ಬದಲು ರಂಗಿನಲ್ಲಿ ಪಠ್ಯಪುಸ್ತಕವನ್ನು ಹೊರತಂದಿರುವುದು ಆಕರ್ಷಣೀಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೊಡವ ಭಾಷೆಯನ್ನು ಪಠ್ಯದಲ್ಲಿ ಅಳವಡಿಸಿ ಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಕೊಡವ ಭಾಷೆಯ ಅಭಿವೃದ್ಧಿಗೆ ಅವಕಾಶವಾಗಲಿದೆ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಅವರು ಮಾತನಾಡಿ ಕೊಡವ ಭಾಷೆಯ ಅಭಿವೃದ್ಧಿಗೆ ಪ್ರಸ್ತುತ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಚಾರಿತ್ರಾರ್ಹ ಕೆಲಸವನ್ನು ಮಾಡಿದೆ. ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿ ಪದ್ಧತಿ ಪರಂಪರೆ ಜಾನಪದಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕೊಡವ ಪಠ್ಯ ಕ್ರಮ ಅನುಷ್ಠಾನ ಮತ್ತು ಬೋಧನಾ ಸಮಿತಿಯ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಮಾತನಾಡಿ ಅಲ್ಪಸಂಖ್ಯಾತ ಕೊಡವ ಭಾಷೆಯನ್ನು ಪಠ್ಯಕ್ರಮದಲ್ಲಿ ಕಲಿಯುವ ಮೂಲಕ ವಿದ್ಯಾರ್ಥಿಗಳು ಭಾಷೆಯನ್ನು ಉಳಿಸುವುದರ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಉದ್ದೇಶ-ಗುರಿ ಸರಿ ಇದ್ದರೆ ಪ್ರತಿಫಲ ಕಾಣುತ್ತೇವೆ. ಪ್ರಸ್ತುತ ಅನ್ಯ ಭಾಷೆಗಳ ಪ್ರಭಾವದಿಂದ ಕೊಡವ ಭಾಷೆ ಕ್ಷೀಣಿಸುತ್ತಿದ್ದು ಮಾತನಾಡಿ ಬಿಡುಗಡೆಯಾದ ಪುಸ್ತಕದ ವಿವರಣೆಯನ್ನು ನೀಡಿ ಅಕಾಡೆಮಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಕ್ಷೇತ್ರ, ಸಂಶೋಧನಾ ಗ್ರಂಥಗಳಿಗೆ ವಿಶೇಷ ಒತ್ತು ನೀಡಿರುವುದು ಶ್ಲಾಘನೀಯ, ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಕೊಡವ ಭಾಷೆಯನ್ನು ಕಲಿಯಲು ಪಠ್ಯ ಪುಸ್ತಕ ಹೊರ ತಂದು ಉತ್ತಮವಾದ ಕೆಲಸ ಮಾಡಿದೆ. ಕಪ್ಪು ಬಿಳುಪು ಬದಲು ರಂಗಿನಲ್ಲಿ ಪಠ್ಯಪುಸ್ತಕವನ್ನು ಹೊರತಂದಿರುವುದು ಆಕರ್ಷಣೀಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೊಡವ ಭಾಷೆಯನ್ನು ಪಠ್ಯದಲ್ಲಿ ಅಳವಡಿಸಿ ಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಕೊಡವ ಭಾಷೆಯ ಅಭಿವೃದ್ಧಿಗೆ ಅವಕಾಶವಾಗಲಿದೆ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಅವರು ಮಾತನಾಡಿ ಕೊಡವ ಭಾಷೆಯ ಅಭಿವೃದ್ಧಿಗೆ ಪ್ರಸ್ತುತ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಚಾರಿತ್ರಾರ್ಹ ಕೆಲಸವನ್ನು ಮಾಡಿದೆ. ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿ ಪದ್ಧತಿ ಪರಂಪರೆ ಜಾನಪದಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕೊಡವ ಪಠ್ಯ ಕ್ರಮ ಅನುಷ್ಠಾನ ಮತ್ತು ಬೋಧನಾ ಸಮಿತಿಯ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಮಾತನಾಡಿ ಅಲ್ಪಸಂಖ್ಯಾತ ಕೊಡವ ಭಾಷೆಯನ್ನು ಪಠ್ಯಕ್ರಮದಲ್ಲಿ ಕಲಿಯುವ ಮೂಲಕ ವಿದ್ಯಾರ್ಥಿಗಳು ಭಾಷೆಯನ್ನು ಉಳಿಸುವುದರ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಉದ್ದೇಶ-ಗುರಿ ಸರಿ ಇದ್ದರೆ ಪ್ರತಿಫಲ ಕಾಣುತ್ತೇವೆ. ಪ್ರಸ್ತುತ ಅನ್ಯ ಭಾಷೆಗಳ ಪ್ರಭಾವದಿಂದ ಕೊಡವ ಭಾಷೆ ಕ್ಷೀಣಿಸುತ್ತಿದ್ದು ಮಾತನಾಡುವ ಭಾಷೆಯಾಗಿ ರೂಪುಗೊಳ್ಳಬೇಕು. ಒಂದರಿAದ ಐದನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಸ್ವ-ಇಚ್ಛೆಯಿಂದ ಕಲಿಯಲು ಅವಕಾಶವಿದೆ ಆದರೆ ಇದು ಕಡ್ಡಾಯವಲ್ಲ. ನಮ್ಮ ಅವಧಿಯಲ್ಲಿ ಸಾಹಿತಿಗಳ ಪುಸ್ತಕ, ಶಬ್ದಕೋಶ, ವ್ಯಾಕರಣ, ಪಠ್ಯಪುಸ್ತಕ ಸೇರಿ ೨೦ ಪುಸ್ತಕ ಹೊರತರಲಾಗಿದೆ ಎಂದು ವಿವರಿಸಿದರು. ವೇದಿಕೆಯಲ್ಲಿ ಪಠ್ಯಪುಸ್ತಕ ಸಮಿತಿಯ ಸದಸ್ಯ ಪಡಿಞರಂಡ ಪ್ರಭುಕುಮಾರ್ ಉಪಸ್ಥಿತರಿದ್ದರು. ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ಅಕಾಡೆಮಿ ಸದಸ್ಯ ಕುಡಿಯರ ಮುತ್ತಪ್ಪ ಸ್ವಾಗತಿಸಿ, ಪಡಿಞರಂಡ ಪ್ರಭುಕುಮಾರ್ ವಂದಿಸಿದರು.
ಅಕಾಡೆಮಿ ಸದಸ್ಯರುಗಳಾದ ಮಾಚಿಮಾಡ ಜಾನಕಿ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಪಠ್ಯಪುಸ್ತಕ ಸಮಿತಿ ಸದಸ್ಯ ಧರ್ಮಶೀಲ ಅಜಿತ್, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕರುಗಳಾದ ಮೂಕಳಮಾಡ ಅರಸುನಂಜಪ್ಪ, ಕೊಣಿಯಂಡ ಸಂಜು ಸೋಮಯ್ಯ, ಮೂಕಳೇರ ಕಾವ್ಯ, ಮಧುಕುಮಾರ್ ಉಪಸ್ಥಿತರಿದ್ದರು. ಕಳ್ಳಿಚಂಡ ದೀನಾಕೃಷ್ಣ ಮತ್ತು ಕುಡಿಯರ ಮುತ್ತಪ್ಪ ಕೊಡವ ಗೀತೆಯನ್ನು ಹಾಡಿದರು.