ಸಚಿವ ರಾಜೇಂದ್ರ ಪಾಲ್ ರಾಜೀನಾಮೆ

ನವದೆಹಲಿ, ಅ. ೯: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದಾದ ಬಳಿಕ ಬಿಜೆಪಿ ಮತ್ತು ಎಎಪಿ ನಡುವೆ ಸಾಕಷ್ಟು ವಾಗ್ವಾದಗಳು ನಡೆದಿದ್ದವು. ಇನ್ನು ಬಿಜೆಪಿ ಸಹ ರಾಜೇಂದ್ರ ಪಾಲ್‌ರನ್ನು ಸಂಪುಟದಿAದ ಕೈಬಿಡುವಂತೆ ಒತ್ತಾಯಿಸಿತ್ತು. ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಮಹರ್ಷಿ ವಾಲ್ಮೀಕಿ ಅವರ ದ್ಯೋತಕ ದಿನ. ಮತ್ತೊಂದೆಡೆ ಇದು ಮಾನ್ಯವರ್ ಕಾನ್ಶಿರಾಮ್ ಸಾಹೇಬ್ ಅವರ ಪುಣ್ಯತಿಥಿ. ಇದು ಕಾಕತಾಳೀಯವೋ ಏನು. ಇಂದು ನಾನು ಅನೇಕ ಸಂಕೋಲೆಗಳಿAದ ಬಿಡುಗಡೆ ಹೊಂದಿದ್ದೇನೆ. ಇಂದು ನಾನು ಮತ್ತೆ ಹುಟ್ಟಿದ್ದೇನೆ. ಈಗ ನಾನು ಯಾವುದೇ ನಿರ್ಬಂಧವಿಲ್ಲದೆ ಹೆಚ್ಚು ದೃಢವಾಗಿ ಸಮಾಜದ ಮೇಲಿನ ಹಕ್ಕುಗಳು ಮತ್ತು ದೌರ್ಜನ್ಯಗಳ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಜೆಡಿಎಸ್ ಜೊತೆಗೆ ಮೈತ್ರಿ ಇಲ್ಲ - ರಾಹುಲ್

ತುರುವೇಕೆರೆ, ಅ. ೯: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಅವಕಾಶವನ್ನು ತಳ್ಳಿಹಾಕಿದರು. ಅಂತಹ ಪರಿಸ್ಥಿತಿ ಉದ್ಬವಿಸುವುದಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು. ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ರೈತರು, ಕಾರ್ಮಿಕರು, ಉದ್ಯಮಿಗಳ ಜೊತೆಗೆ ಸಂವಾದ ನಡೆಸಿದ್ದು, ಎಲ್ಲರೂ ಭ್ರಷ್ಟಾಚಾರ ಮತ್ತು ಎಲ್ಲಾಕಡೆ ಬಿಜೆಪಿ ಸರ್ಕಾರದ ಶೇ.೪೦ ಕಮೀಷನ್ ಬಗ್ಗೆ ದೂರಿದ್ದಾರೆ. ಜನರು ನಿರುದ್ಯೋಗದೊಂದಿಗೆ ಹೋರಾಟದ ಬದುಕು ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷ ಅತ್ಯಂತ ಹಳೆಯ ಪಕ್ಷವಾಗಿದ್ದು, ೨೦೨೩ ವಿಧಾನಸಭಾ ಚುನಾವಣೆಯ ಫಲಿತಾಂಶ ಆಧಾರದ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿ ಪ್ರಕ್ರಿಯೆ ನಡೆಸಲಿದೆ. ನಮ್ಮಲ್ಲಿ ಸಮರ್ಥವಾದ ತಂಡವಿದ್ದು, ಮುಖಂಡರು ಬುದ್ದಿವಂತರಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ನಂತರ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ ವಿವರಿಸಿದರು.

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಸಿಪಿಐ ಅಮಾನತು

ಬಾಗಲಕೋಟೆ, ಅ. ೯: ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರೆಪ್ಪ ಬನ್ನೆಯವರನ್ನು ಬಾಗಲಕೋಟೆ ಎಸ್ ಪಿ ಜಯಪ್ರಕಾಶ್ ಅಮಾನತು ಮಾಡಿದ್ದಾರೆ. ಸೆಪ್ಟೆಂಬರ್ ೬ ರಂದು ಕೆರೂರಿನಲ್ಲಿ ಗಣೇಶ್ ವಿಸರ್ಜನೆ ವೇಳೆ ಘರ್ಷಣೆ ನಡೆದಿತ್ತು. ಗಲಾಟೆ ಬಳಿಕ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ಚಿತ್ರಹಿಂಸೆ ನೀಡಿದ್ದರು ಎನ್ನಲಾಗಿದೆ. ಈ ಘಟನೆ ಬಳಿಕ ಜಗದೀಶ್ ಕಾರಂತ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಿಪಿಐ ವಿರುದ್ಧ ಕೆರೂರು ಚಲೋ ನಡೆಸಿದ್ದರು. ಇದರ ಬೆನ್ನಲ್ಲೇ ಬಾಗಲಕೋಟೆ ಎಸ್.ಪಿ. ಜಯಪ್ರಕಾಶ್ ಸಿಬಿಐ ಅನ್ನು ಅಮಾನತುಗೊಳಿಸಿದ್ದಾರೆ.

ಡಿಎಂಕೆ ಅಧ್ಯಕ್ಷರಾಗಿ ಸ್ಟಾಲಿನ್

ಚೆನ್ನೆöÊ, ಅ. ೯: ಡಿಎಂಕೆ ಪಕ್ಷದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹೊಸದಾಗಿ ರಚನೆಯಾದ ಜನರಲ್ ಕೌನ್ಸಿಲ್ ಸಭೆಯಲ್ಲಿ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷ ಘೋಷಿಸಿತು. ನಾಮಪತ್ರ ಸಲ್ಲಿಸುವ ಮುನ್ನ ಸ್ಟಾಲಿನ್ ಅವರು ತಮ್ಮ ತಂದೆ ಹಾಗೂ ಡಿಎಂಕೆ ಮಾಜಿ ಅಧ್ಯಕ್ಷ ಎಂ. ಕರುಣಾನಿಧಿ ಅವರ ಗೋಪಾಲಪುರಂ ನಿವಾಸಕ್ಕೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಮರೀನಾದಲ್ಲಿರುವ ಕರುಣಾನಿಧಿ ಮತ್ತು ಮಾಜಿ ಮುಖ್ಯಮಂತ್ರಿ ಅರಿಗ್ನಾರ್ ಅಣ್ಣಾ ಅವರ ಸ್ಮಾರಕಗಳಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಕರುಣಾನಿಧಿ ಅವರ ನಿಧನದ ನಂತರ ೨೦೧೮ರ ಆಗಸ್ಟ್ ೨೮ ರಂದು ಸ್ಟಾಲಿನ್ ಡಿಎಂಕೆ ಅಧ್ಯಕ್ಷರಾದರು.

ಕಾಂಗ್ರೆಸ್ ಶಾಸಕನ ಮೇಲೆ ಹಲ್ಲೆ - ಎಫ್‌ಐಆರ್

ನವಸಾರಿ, ಅ. ೯: ಜಿಲ್ಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕ ಮತ್ತು ಬುಡಕಟ್ಟು ಜನಾಂಗದ ಮುಖಂಡ ಅನಂತ್ ಪಟೇಲ್ ಅವರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಭಾನುವಾರ ನಸುಕಿನಲ್ಲಿ ಖೇರ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿರುವ ಸ್ಥಳೀಯ ಬಿಜೆಪಿ ಮುಖಂಡ ಬಾಬು ಅಹಿರ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಟೇಲ್ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ‘ಪರ್-ತಾಪಿ ನದಿ ಜೋಡಣೆ ಯೋಜನೆ' ವಿರುದ್ಧ ಬುಡಕಟ್ಟು ಜನಾಂಗಕ್ಕಾಗಿ ಹೋರಾಡಿದ ನಮ್ಮ ಶಾಸಕ ಅನಂತ್ ಪಟೇಲ್ ಅವರ ಮೇಲೆ ಬಿಜೆಪಿ ನಡೆಸಿದ ಹೇಡಿತನದ ದಾಳಿ ಖಂಡನೀಯ. ಇದು ಬಿಜೆಪಿ ಸರ್ಕಾರದ ಸಿಟ್ಟು. ಆದಿವಾಸಿಗಳ ಹಕ್ಕುಗಳಿಗಾಗಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೊನೆಯ ಉಸಿರು ಇರುವವರೆಗೂ ಹೋರಾಡುತ್ತಾರೆ ಎಂದಿದ್ದಾರೆ.

ಗರ್ಭಿಣಿಯಾಗಿದ್ದ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಆರೋಪಿಯ ತಾಯಿ

ಮೈನ್‌ಪುರಿ, ಅ. ೯: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ಅತ್ಯಾಚಾರಕ್ಕೊಳಗಾದ ಗರ್ಭಿಣಿ ಬಾಲಕಿಯನ್ನು ಸಜೀವ ದಹನ ಮಾಡಲು ಯತ್ನಿಸಲಾಗಿದೆ. ಈ ಸಂಬAಧ ಪೊಲೀಸರು ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಾಲಕಿಯ ತಾಯಿಯ ಪ್ರಕಾರ, ಮೂರು ತಿಂಗಳ ಹಿಂದೆ ಅದೇ ಗ್ರಾಮದಲ್ಲಿ ವಾಸಿಸುವ ಅಭಿಷೇಕ್ ಎಂಬಾತ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ, ಆದರೆ ಸಂತ್ರಸ್ತೆ ಈ ವಿಚಾರವನ್ನು ಕುಟುಂಬದೊAದಿಗೆ ಬಹಿರಂಗಪಡಿಸಿರಲಿಲ್ಲ. ಬಳಿಕ ಬಾಲಕಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ. ಈ ಸಂಬAಧ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದು, ಬಾಲಕಿಯನ್ನು ಮದುವೆಯಾಗುವಂತೆ ಅಕ್ಟೋಬರ್ ೬ ರಂದು ಪಂಚಾಯಿತಿ ಆರೋಪಿಗೆ ತಿಳಿಸಿತ್ತು. ನಂತರ ಆರೋಪಿಯ ತಾಯಿ ಸಂತ್ರಸ್ತೆಯನ್ನು ತಮ್ಮ ಮನೆಗೆ ಕರೆದೊಯ್ದು ಆಕೆಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಬಾಲಕಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಮೈನ್‌ಪುರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡಿಕ್ಕಿ ರೈತನ ಹತ್ಯೆ

ಕೊಯಮತ್ತೂರು, ಅ. ೯: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೇಟ್ಟುಪಾಳ್ಯಂ ಬಳಿ ಭಾನುವಾರ ಮೇಕೆಗಳು ಕಾಣೆಯಾದ ವಿಚಾರದ ಬಗ್ಗೆ ನಡೆದ ಜಗಳದ ನಂತರ ರೈತ ಚಿನ್ನಸಾಮಿ ಎಂಬುವವರಿಗೆ ಗುಂಡು ಹಾರಿಸಲಾಗಿದೆ. ಪೊಲೀಸರ ಪ್ರಕಾರ, ಚಿನ್ನಸಾಮಿ ಅವರಿಗೆ ಸೇರಿದ ಕೆಲವು ಮೇಕೆಗಳು ಶನಿವಾರ ಸಂಜೆ ಇಲ್ಲಿಗೆ ಸಮೀಪದ ಮಂಧರೈಕ್ಕಾಡು ಪ್ರದೇಶದಲ್ಲಿನ ಅವರ ಜಮೀನಿನಲ್ಲಿ ಕಾಣೆಯಾಗಿವೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ರಂಜಿತ್ ಕುಮಾರ್ (೨೮) ಮೇಕೆ ಕಳವು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ರಂಜಿತ್ ತನ್ನ ಮನೆಯಿಂದ ಹೊರ ಹೋಗುತ್ತಿರುವುದನ್ನು ಗಮನಿಸಿದ ಚಿನ್ನಸಾಮಿ, ತಕ್ಷಣವೇ ಆತನನ್ನು ತಡೆದು ಕೇಳಿದ್ದಾನೆ, ಬಳಿಕ ಜಗಳವಾಡಿದ್ದಾನೆ. ಬಳಿಕ ಸ್ಥಳದಿಂದ ಹೊರಟ ರಂಜಿತ್, ಮಧ್ಯರಾತ್ರಿಯ ಸಿಂಗಲ್ ಬ್ಯಾರೆಲ್ ಗನ್‌ನೊಂದಿಗೆ ಹಿಂತಿರುಗಿ ಚಿನ್ನಸಾಮಿಯ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.