ಮಡಿಕೇರಿ, ಅ. ೮: ಗೋವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ. ಕೆ. ನಿಡುಗಣೆಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಗೋ ಶಾಲೆಯ ಉದ್ಘಾಟನೆ ತಾ. ೧೦ರಂದು (ನಾಳೆ) ನೆರವೇರಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ, ಅ. ೮: ಗೋವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ. ಕೆ. ನಿಡುಗಣೆಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಗೋ ಶಾಲೆಯ ಉದ್ಘಾಟನೆ ತಾ. ೧೦ರಂದು (ನಾಳೆ) ನೆರವೇರಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ, ಅ. ೮: ಗೋವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ. ಕೆ. ನಿಡುಗಣೆಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಗೋ ಶಾಲೆಯ ಉದ್ಘಾಟನೆ ತಾ. ೧೦ರಂದು (ನಾಳೆ) ನೆರವೇರಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೈಗೊಳ್ಳುವುದಕ್ಕಾಗಿ ಕಾಯ್ದಿರಿಸಲಾಗಿದೆ. ಸುಮಾರು ೫೦ ಗೋವುಗಳನ್ನು ಸಾಕಿ ಸಲಹುವ ನಿಟ್ಟಿನಲ್ಲಿ
(ಮೊದಲ ಪುಟದಿಂದ) ಗೋಶಾಲೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗೋವುಗಳಿಗೆ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ತೆಗೆಸುವುದರ ಜೊತೆಗೆ ೧೦ ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ೨೦೦೦ ಚದರ ಅಡಿಯ ಕಟ್ಟಡವನ್ನು ನಿರ್ಮಿಸ ಲಾಗಿದ್ದು, ಬೀಡಾಡಿ ದನಗಳಿಗೆ, ಅಕ್ರಮ ಸಾಗಾಟದ ವೇಳೆ ರಕ್ಷಿಸಲ್ಪಡುವ ಗೋವುಗಳಿಗೆ, ಮಾಲೀಕರಿಗೆ ಸಾಕಲಾಗದಂತಹ ಜಾನುವಾರುಗಳಿಗೆ ಈ ಗೋಶಾಲೆ ಕಟ್ಟಡದಲ್ಲಿ ಆಸರೆ ಕಲ್ಪಿಸಲಾಗುತ್ತದೆ.
ಈ ಗೋಶಾಲೆಯನ್ನು ಸದ್ಯದ ಮಟ್ಟಿಗೆ ಪಶುಪಾಲನಾ ಇಲಾಖೆ ನಿರ್ವಹಣೆ ಮಾಡಲಿದ್ದು, ಯಾವುದಾದರೂ ಸಂಘ - ಸಂಸ್ಥೆಗಳು ಅಥವಾ ಟ್ರಸ್ಟ್ಗಳು ನಿರ್ವಹಣೆಗೆ ಮುಂದೆ ಬಂದರೆ ಅದಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುವ ಪ್ರಾಣಿ ದಯಾ ಸಂಘ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ. ಯಾವುದೇ ಸಂಘ - ಸಂಸ್ಥೆ ಅಥವಾ ಟ್ರಸ್ಟ್ಗಳು ನಿರ್ವಹಣೆಗೆ ಮುಂದೆ ಬರದಿದ್ದಲ್ಲಿ ಇಲಾಖೆಯೇ ಗೋಶಾಲೆಯನ್ನು ಮುನ್ನಡೆಸಿಕೊಂಡು ಹೋಗಲಿದೆ ಎಂದು ಪಶುಪಾಲನಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಡಾ. ಕೆ.ಎ. ಪ್ರಸನ್ನ ಮಾಹಿತಿ ನೀಡಿದ್ದಾರೆ. ಪುಣ್ಯಕೋಟಿ ದತ್ತು ಯೋಜನೆಯಡಿ ಗೋಶಾಲೆಯಲ್ಲಿನ ಗೋವುಗಳನ್ನು ಆಸಕ್ತರು ದತ್ತು ಪಡೆದುಕೊಂಡು ಸಾಕಲು ಅವಕಾಶವಿದ್ದು, ಒಂದು ಗೋವಿಗೆ ೬ ತಿಂಗಳಿಗಾದರೆ ಐದೂವರೆ ಸಾವಿರ, ೧ ವರ್ಷಕ್ಕಾದರೆ ೧೧ ಸಾವಿರ ಹಣವನ್ನು ಪಾವತಿಸಬೇಕಾಗುತ್ತದೆ. ಗೋಶಾಲೆಗೆ ಬೇಕಾದ ಹುಲ್ಲನ್ನು ದಾನಿಗಳು ನೀಡಬಹುದಾಗಿದ್ದು, ಇಲ್ಲವಾದರೆ ಇಲಾಖೆಯೆ ಹುಲ್ಲನ್ನು ಖರೀದಿ ಮಾಡಲಿದೆ. ಪ್ರಾಣಿ ದಯಾ ಸಂಘದ ಅಧೀನದಲ್ಲಿ ಗೋಶಾಲೆಯ ನಿರ್ವಹಣೆ ನಡೆಯಲಿದ್ದು, ಆಸಕ್ತರು ನಿಗದಿತ ಸದಸ್ಯತ್ವ ಶುಲ್ಕ ಪಾವತಿಸಿ ಪ್ರಾಣಿ ದಯಾ ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.
ಉದ್ಘಾಟನೆ : ತಾ. ೧೦ರಂದು (ನಾಳೆ) ಬೆಳಿಗ್ಗೆ ೯.೩೦ ಗಂಟೆಗೆ ಗೋಶಾಲೆಯ ಉದ್ಘಾಟನೆ ನೆರವೇರಲಿದ್ದು, ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪಶುಸಂಗೋಪನಾ ಇಲಾಖಾ ಸಚಿವ ಪ್ರಭು ಚೌಹಾಣ್, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷ ಮುದ್ದಂಡ ಡೀನ್ ಬೋಪಣ್ಣ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.