ಕುಶಾಲನಗರ, ಅ. ೮: ಈದ್ ಮಿಲಾದ್ ಪ್ರಯುಕ್ತ ಕುಶಾಲನಗರದ ದಾರುಲ್ ಉಲೂಂ ಮದ್ರಸದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ದಾರುಲ್ ಉಲೂಂ ಮದ್ರಸದಲ್ಲಿ ಈದ್ ಮಿಲಾದ್ ಆಚರಣೆ ನಡೆಸಲಾಗುತ್ತಿದ್ದು, ಮಕ್ಕಳ ಹಾಡು, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ತೀರ್ಪುಗಾರರಾಗಿ ಹಾಫಿಲಾ ಕಾಲೇಜಿನ ಪ್ರಾಂಶುಪಾಲರಾದ ತಮ್ಲೀಕ್ ದಾರಿಮಿಯವರು ಪಾಲ್ಗೊಂಡರು. ಈ ಸಂದರ್ಭ ಕುಶಾಲನಗರದ ಧರ್ಮಗುರುಗಳಾದ ಸೂಫಿ ದಾರಿಮಿ, ಕಮಿಟಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಗೂ ಕಮಿಟಿ ಬಾರವಾಹಿಗಳು, ದಾರುಲ್ ಉಲೂಂ ಮದ್ರಸದ ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ತಾ. ೯ ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ ಮೆರವಣಿಗೆ ನಡೆಯಲಿದ್ದು, ನಂತರ ಮದರಸ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.