ವೀರಾಜಪೇಟೆ, ಅ. ೭: ಆಯುಧ ಪೂಜೆ ಅಂಗವಾಗಿ ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಠಾಣೆಯನ್ನು ಮದುವಣಗಿತ್ತಿಯಂತೆ ಅಲಂಕಾರ ಮಾಡಲಾಗಿತ್ತು.

ಠಾಣೆಯಲ್ಲಿ ಆಯುಧ ಪೂಜೆ ಮತ್ತು ಚಾಮುಂಡೇಶ್ವರಿ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಠಾಣೆಯಲ್ಲಿ ಬಳಕೆಯಾಗುವ ವಾಹನಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ವೀರಾಜಪೇಟೆ ತಾಲೂಕು ಉಪ ವಿಭಾಗದ ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಮತ್ತು ಅವರ ಪತ್ನಿ, ವೃತ್ತ ನಿರೀಕ್ಷಕರಾದ ಶಿವರುದ್ರ ಹಾಗೂ ನಗರ ಠಾಣೆಯ ಠಾಣಾಧಿಕಾರಿಗಳಾದ ಸಿ.ಎ. ಶ್ರೀಧರ, ಅಪರಾಧ ವಿಭಾಗದ ಠಾಣಾಧಿಕಾರಿ ಎಂ.ಎ. ಮುತ್ತಣ್ಣ, ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ರವಿ ಕುಮಾರ್, ಸಹಾಯಕ ನಿರೀಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ