ಸೋಮವಾರಪೇಟೆ, ಅ. ೭: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತೋಳೂರುಶೆಟ್ಟಳ್ಳಿ-ಕೂತಿ ಮುಖ್ಯರಸ್ತೆಯಿಂದ ಹರಪಳ್ಳಿ ಗ್ರಾಮ ಸಂಪರ್ಕದ ರಸ್ತೆಯ ಬದಿಯಲ್ಲಿ ಸುಮಾರು ೩ ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಬಲಿಗಾಗಿ ಬಾಯ್ತೆರೆದಿರುವಂತೆ ಕಂಡುಬರುತ್ತಿದೆ.
ಹರಪಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆಯ ಅನತಿ ದೂರದಲ್ಲಿಯೇ ಈ ಗುಂಡಿ ನಿರ್ಮಾಣವಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಿಸಿದ ನಂತರ ರಸ್ತೆ ಬದಿಯ ಗುಂಡಿಗಳಿಗೆ ಸರಿಯಾಗಿ ಮಣ್ಣು ಹಾಕದೇ ಇರುವುದರಿಂದ ಕುಸಿತ ಉಂಟಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನ ಸವಾರರು ಆತಂಕದಿAದ ತೆರಳಬೇಕಿದೆ. ರಸ್ತೆ ಕಾಮಗಾರಿ ನಡೆಸಿದವರು ಇತ್ತ ಗಮನಹರಿಸಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.