ಕುಶಾಲನಗರ, ಅ.೭: ಮೈಸೂರು ದಸರಾಕ್ಕೆ ತೆರಳಿ ಕಳೆದ ೨ ತಿಂಗಳ ಕಾಲ ಮೈಸೂರು ಅರಮನೆಯ ಶಿಬಿರದಲ್ಲಿದ್ದ ದುಬಾರೆ ಸಾಕಾನೆ ಶಿಬಿರದ ಒಟ್ಟು ೭ ಆನೆಗಳು ಮೈಸೂರಿನಿಂದ ದುಬಾರೆಗೆ ಹಿಂತಿರುಗಿವೆ.
ಆಗಸ್ಟ್ ತಿಂಗಳಲ್ಲಿ ಗಜಪಯಣದಲ್ಲಿ ಪ್ರಥಮ ತಂಡದಲ್ಲಿ ತೆರಳಿದ ಆನೆಗಳಾದ ಕಾವೇರಿ, ಧನಂಜಯ ಮತ್ತು ೨ ನೇ ತಂಡದಲ್ಲಿ ತೆರಳಿದ ಪ್ರಶಾಂತ್, ಶ್ರೀ ರಾಮ್, ಸುಗ್ರೀವ, ವಿಜಯ ಶುಕ್ರವಾರ ಮೈಸೂರಿನಿಂದ ಲಾರಿ ಮೂಲಕ ಕುಶಾಲನಗರದ ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರಕ್ಕೆ ಆಗಮಿಸಿವೆ.
೬ ಆನೆಗಳು ಮಾಲ್ದಾರೆ ಮಾರ್ಗವಾಗಿ ದುಬಾರೆಗೆ ಮರಳಿದರೆ, ವಿಜಯ ಆನೆಯನ್ನು ಹಾರಂಗಿಯ ನೂತನ ಸಾಕಾನೆ ಶಿಬಿರಕ್ಕೆ ಬರಮಾಡಿಕೊಳ್ಳಲಾಯಿತು.
-ಚಂದ್ರಮೋಹನ್