ಪೊನ್ನಂಪೇಟೆ, ಅ. ೭: ಪೊನ್ನಂಪೇಟೆ ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕ ವೇದಿಕೆಯ ವಾರ್ಷಿಕ ಮಹಾಸಭೆಯು ಇಲ್ಲಿನ ಇಗ್ಗುತಪ್ಪ ಸೌಹಾರ್ದ ಬ್ಯಾಂಕ್ನ ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಮನ್ವೆಲ್ತ್ ಗೇಮ್ನಲ್ಲಿ ಭಾಗವಹಿಸಿದ್ದ ಅಂರ್ರಾಷ್ಟಿçÃಯ ಕರಾಟೆ ಪಟು, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಕಾಕಮಾಡ ಅರ್ಜುನ್, ಐನಂಡ ಮಂದಣ್ಣ ಮತ್ತು ಕೊಟ್ಟುಕತ್ತೀರ ಸೋಮಣ್ಣ ಅವರುಗಳನ್ನು ಅವರ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಈ ಸಂದÀರ್ಭ ೭೫ನೇ ಸ್ವಾತಂತ್ರö್ಯ ಮಹೋತ್ಸವದ ಅಮೃತೋತ್ಸವದ ಅಂಗವಾಗಿ ಪೊನ್ನಂಪೇಟೆಯ ಸುತ್ತಮುತ್ತಲಿನ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಾತಂತ್ರö್ಯ ಸಂಗ್ರಾಮ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರುಗಳಾದ ಚಕ್ಕೇರ ಸನ್ನಿ ಸುಬ್ಬಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಉಪಾಧ್ಯಕ್ಷ ಮಂಡೇಚAಡ ಗಣೇಶ್, ಖಜಾಂಚಿ ಹಾಗೂ ಸಲಹೆಗಾರ ಐನಂಡ ಮಂದಣ್ಣ, ಹಿರಿಯ ಸದಸ್ಯರಾದ ಅಜ್ಜಮಾಡ ಕಟ್ಟಿ ಮಂದಯ್ಯ, ನಿರ್ದೇಶಕರಾದ ಕಳ್ಳಿಚಂಡ ಕಟ್ಟಿ ಪೂಣಚ್ಚ, ಕಳ್ಳಿಚಂಡ ಶಂಭು ಪೂವಯ್ಯ, ಮಲ್ಲಂಡ ರಾಜ ಸುಬ್ಬಯ್ಯ, ಕೊಳ್ಳಿಮಾಡ ಸೋಮಯ್ಯ, ಕೊಳ್ಳಿಮಾಡ ಕಾರ್ಯಪ್ಪ, ಹೆಚ್.ಬಿ. ಬೋಜಮ್ಮ, ಮಾಣಿಪಂಡ ಪಾರ್ವತಿ, ಕೇಚೆಟ್ಟಿರ ಕಾಮುಣಿ ಪೂಣಚ್ಚ, ದೇಯಂಡ ಕಾವೇರಮ್ಮ, ಮಾಚಿಮಾಡ ಲೌಲಿ ಸೋಮಯ್ಯ, ಮದ್ರೀರ ಕರುಂಬಯ್ಯ ಹಾಗೂ ಇನ್ನಿತರ ಸದಸ್ಯರು ಇದ್ದರು.
ಚೇಂದಿರ ನಿರ್ಮಲ ಬೋಪಣ್ಣ ಪ್ರಾರ್ಥಿಸಿ, ವೇದಿಕೆಯ ಕಾರ್ಯದರ್ಶಿ ಚೇಂದಿರ ಎಂ. ಬೋಪಣ್ಣ ಸ್ವಾಗತಿಸಿ, ನಿರೂಪಿಸಿದರು. ಮಂಡಚAಡ ಗಣೇಶ್ ಗಣಪತಿ ವಂದಿಸಿದರು.