ಮಡಿಕೇರಿ, ಅ. ೮: ವರ್ಷದ ಹಿಂದೆ ಶಿರಾಡಿಯ ಶಿಶಿಲ ಮೀಸಲು ಅರಣ್ಯದಿಂದ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ಕಡಿದು ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ವಾಹನವನ್ನು ಮಡಿಕೇರಿಯಲ್ಲಿ ವಶಕ್ಕೆ ಪಡೆಯಲಾಗಿದೆ.
೨೦೨೧ರ ಆಗಸ್ಟ್ ೧೮ರಂದು ಶಿಶಿಲ ಮೀಸಲು ಅರಣ್ಯದಿಂದ ಭಾರೀ ಗಾತ್ರದ ಮೂರು ಹೆಬ್ಬಲಸು ಮರಗಳು ಕಳವಾಗಿದ್ದವು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ನೆಲ್ಯಾಡಿ ಸಮೀಪದ ಕೋಲ್ಪೆಯ ಮನೆಯೊಂದರಲ್ಲಿ ಮರಮುಟ್ಟು ಸಹಿತ ಆರೋಪಿಗಳಾದ ರಜಾಕ್, ಸಿದ್ದಿಕ್, ಷರೀಫ್ ಎಂಬವರನ್ನು ಬಂಧಿಸಿದ್ದರು.
ಆದರೆ, ಸಾಗಣೆಗೆ ಉಪಯೋಗಿಸಿದ ಪಿಕಪ್ ವಾಹನ ಪತ್ತೆಯಾಗಿರಲಿಲ್ಲ. ಈ ಸಂಬAಧ ತನಿಖೆಯಲ್ಲಿ ವಾಹನವನ್ನು ತಿತಿಮತಿಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಬಳಿಕ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ.