ಕಣಿವೆ, ಅ. ೭ : ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯ ನಿರ್ವಹಿಸಲು ಮನೆಯ ಮಗನಿಗೆ ಅವಕಾಶ ಲಭಿಸಿದ ಸಂತಸಕ್ಕೆ ಮನೆ ದೇವರಿಗೆ ಗುಡಿ ಕಟ್ಟಿದ ಪ್ರಸಂಗ ಕುಶಾಲನಗರ ತಾಲೂಕಿನ ಕಣಿವೆ ಬಳಿಯ ಹಕ್ಕೆ ರಾಂಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೃಷಿಕರಾದ ರಮೇಶ ಹಾಗೂ ಜ್ಯೋತಿ ಎಂಬ ದಂಪತಿಗಳಿಗೆ ಇಬ್ಬರು ಮಕ್ಕಳು. ಈ ಪೈಕಿ ಮಗ ಪೃಥ್ವಿ ಎಂಬಾತನಿಗೆ ಸೇನೆಗೆ ಸೇರುವ ಹಂಬಲ. ಹಾಗಾಗಿ ಮನೆ ದೇವರು ವೀರಭದ್ರೇಶ್ವರನಲ್ಲಿ ಮೊರೆ ಇಟ್ಟು ಪ್ರಾರ್ಥಿಸಿದ ಪರಿಗೆ ಮಗ ಅಂದುಕೊAಡ ಆಸೆ ಈಡೇರಿದೆ. ಇದು ದೇವರ ಕೃಪೆ ಅಲ್ಲದೇ ಮತ್ತೇನು ? ಎಂಬುದು ಹೆತ್ತವರ ಆಶಯ.

ನಾವು ಕೃಷಿ ಕಾರ್ಮಿಕರಾದರೂ ಕೂಡ ದೇವರ ಅನುಗ್ರಹದಿಂದ ಅಂದುಕೊAಡದ್ದು ಸಿದ್ದಿಸಿದೆಯಲ್ಲಾ, ಹೇಗಾದರೂ ಮಾಡಿ ದೇವರ ಕೃಪೆಗೆ ಯಾವ ರೀತಿ ಪಾತ್ರರಾಗುವುದು ಎಂಬ ಆಲೋಚನೆಯಲ್ಲಿ ದಂಪತಿಗಳು ಮಗ್ನರಾಗುತ್ತಾರೆ.

ಜೊತೆಗೆ ಈ ಕುಟುಂಬದ ಮೂಲಸ್ಥಾನದಲ್ಲಿ ಮನೆ ದೇವರಾದ ಶ್ರೀ ವೀರಭದ್ರೇಶ್ವರ ಹಾಗೂ ಲಕ್ಷಿö್ಮದೇವಿ ಆಲಯ ಕಳೆದ ಅನೇಕ ವರ್ಷಗಳಿಂದ ಅಶುದ್ದಿಯಾಗಿತ್ತು. ಹಾಗಾಗಿ ನಾವು ಪೂಜೆ ಪುನಸ್ಕಾರ ಮಾಡಲು ಅದರದ್ದೇ ಆದ ಪ್ರತ್ಯೇಕ ದೈವ ಸನ್ನಿಧಿಯನ್ನು ನಿರ್ಮಿಸಬೇಕೆಂಬ ಹಂಬಲವಿದ್ದರೂ ಕೂಡ ಅದಕ್ಕೆ ಲಕ್ಷಾಂತರ ರೂ.ಗಳು ವಿನಿಯೋಗವಾಗುವುದರಿಂದ ಅದಕ್ಕೆ ಕಾಲ ಕೂಡಿ ಬರಲಿ ಎಂದು ಕಾಯುತ್ತಿದ್ದೆವು.

ಕಳೆದ ಮೂರು ತಿಂಗಳ ಹಿಂದೆ ನನ್ನ ಪತ್ನಿ ಜ್ಯೋತಿಯ ಮೈಮೇಲೆ ಆವಾಹನೆಗೊಂಡ ದೇವರು ನನಗಾಗಿ ಪ್ರತ್ಯೇಕ ಗುಡಿಯನ್ನು ಕಟ್ಟು ಎಂದು ನನ್ನಲ್ಲಿ ಕೋರಿಕೆ ಇಟ್ಟಿತ್ತು. ಇದರಿಂದಾಗಿ ನಾನು ಹಾಗೂ ನನ್ನ ಇಬ್ಬರು ಸೋದರರು ಸೇರಿ ಚರ್ಚಿಸಿದೆವು. ನನಗೆ ಸೇರಿದ ಎತ್ತರದ ಗುಡ್ಡದ ಮೇಲೆ ಚಿಕ್ಕದಾದ ಹಾಗೂ ಚೊಕ್ಕದಾದ ಗುಡಿಯನ್ನು ಎರಡು ಲಕ್ಷ ವೆಚ್ಚ ಮಾಡಿ ಕಟ್ಟಿದೆವು.

ಅಲ್ಲದೇ ಗುಡಿಯಲ್ಲಿ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿಗಳನ್ನು ಪೂರೈಸಲು ಒಂದು ಲಕ್ಷ ಖರ್ಚಾಯಿತು. ಏನೇ ಖರ್ಚು ಆಗಲಿ ನನ್ನ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಿರುವ ಸಂತಸಕ್ಕೆ ನಾನು ಸಂಭ್ರಮದಿAದ ಗುಡಿ ಕಟ್ಟಿ ಪೂಜಿಸುತ್ತಿರುವೆ ಎನ್ನುತ್ತಾರೆ ರಮೇಶ ಹಾಗೂ ಜ್ಯೋತಿ.

(ವಿಶೇಷ ವರದಿ : ಕೆ.ಎಸ್. ಮೂರ್ತಿ)