ಶನಿವಾರಸಂತೆ, ಅ. ೮: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶನಿವಾರಸಂತೆ ಶಾಖೆಯ ೧೫ನೇ ಎಟಿಎಂ ಕೇಂದ್ರವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಬಾಂಡ್ ಗಣಪತಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಹಕರ ಉಪಯೋಗಕ್ಕಾಗಿ ಶನಿವಾರಸಂತೆಯಲ್ಲಿ ೧೫ನೇ ಎಟಿಎಂ ಕೇಂದ್ರ ತೆರೆಯಲಾಗಿದ್ದು, ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಮತ್ತು ಬ್ಯಾಂಕು ವ್ಯವಹಾರದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಬ್ಯಾಂಕಿನ ಹಿರಿಯ ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ ಪ್ರಾಸ್ತಾವಿಕವಾಗಿ ಮಾತ ನಾಡಿದರು. ನಿರ್ದೇಶಕಿ ಜಲಜಾ ಶೇಖರ್ ಮಾತನಾಡಿದರು. ಕಾರ್ಯ ಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರು ಗಳಾದ ಎಸ್.ಬಿ. ಭರತ್ಕುಮಾರ್, ಕಿಮ್ಮುಡಿರ ಜಗದೀಶ್, ಎ.ಎಸ್. ಪಾರ್ವತಿ, ಬ್ಯಾಂಕ್ನ ವ್ವವಸ್ಥಾಪಕ ಎಸ್.ಎಂ. ಭರತ್ ಶಾಖೆಯ ಸಿಬ್ಬಂದಿಗಳು ಸಹಕಾರ ಸಂಘಗಳ ಅಧ್ಯಕ್ಷರುಗಳು ನಿರ್ದೇಶಕರುಗಳು, ಸಿಬ್ಬಂದಿಗಳು ಮತ್ತು ಶಾಖೆಯ ಗ್ರಾಹಕರುಗಳು ಉಪಸ್ಥಿತರಿದ್ದರು.