ಮಡಿಕೇರಿ, ಅ. ೭: ಮೂರ್ನಾಡು ಕೊಡವ ಸಮಾಜದ ಕೈಲುಮುಹೂರ್ತ ಒತ್ತೋರ್ಮೆ ಕೂಟ ತಾ. ೯ ರಂದು (ನಾಳೆ) ನಡೆಯಲಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ನೂತನವಾಗಿ ನಿರ್ಮಿಸಲಾದ ತಡೆಗೋಡೆಯನ್ನು ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಉದ್ಘಾಟಿಸಿ, ನಂತರ ವಿವಿಧ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಪತ್ನಿ ಪಾರ್ವತಿ ಕುಶಾಲಪ್ಪ ಭಾಗವಹಿಸಲಿದ್ದಾರೆ.

ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು ಪ್ರಾಂಶುಪಾಲ ಡಾ|| ಚೌರೀರ ಜಗತ್ ತಿಮ್ಮಯ್ಯ, ಅಂತರ‍್ರಾಷ್ಟಿçÃಯ ಹಾಕಿಪಟು, ಏಕಲವ್ಯ ಪ್ರಶಸ್ತಿ ವಿಜೇತ ಕಂಬೀರAಡ ಪೊನ್ನಮ್ಮ ಬೋಪಣ್ಣ, ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ವಿಜೇತರಿಗೆ ಬಹುಮಾನ, ದತ್ತಿನಿಧಿ ವಿತರಣೆ ನಡೆಯಲಿದೆ ಎಂದು ಸಮಾಜದ ಕಾರ್ಯದರ್ಶಿ ಕಂಬೀರAಡ ಗೌತಮ್ ತಿಳಿಸಿದ್ದಾರೆ.