ಸೋಮವಾರಪೇಟೆ, ಅ. ೭: ಉತ್ತಮ ಕಾರ್ಯನಿರ್ವಹಣೆ, ಸಾಲ ಮರುಪಾವತಿ, ಸದಸ್ಯರಿಗೆ ನೀಡಿದ ಉತ್ತಮ ಸೌಲಭ್ಯಗಳನ್ನು ಪರಿಗಣಿಸಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ದ್ವಿತೀಯ ಸ್ಥಾನದ ಪ್ರಶಸ್ತಿ ಪ್ರದಾನ ಮಾಡಲಾಯಿತು.

೨೦೨೧-೨೨ನೇ ಸಾಲಿನಲ್ಲಿ ಕೇಂದ್ರ ಸಹಕಾರ ಬ್ಯಾಂಕ್‌ನಿAದ ನೀಡಲಾಗುವ ಉತ್ತಮ ಸಹಕಾರ ಸಂಘಗಳ ದ್ವಿತೀಯ ಸ್ಥಾನದ ಪ್ರಶಸ್ತಿಗೆ ಗೌಡಳ್ಳಿ ವಿಎಸ್‌ಎಸ್‌ಎನ್ ಭಾಜನವಾಗಿದ್ದು, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಹಾಗೂ ಕೆಡಿಸಿಸಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಪ್ರಶಸ್ತಿಯೊಂದಿಗೆ ರೂ. ೧೫ ಸಾವಿರ ಬಹುಮಾನ ವಿತರಿಸಿದರು.

ಮಡಿಕೇರಿ ಕೊಡವ ಸಮಾಜದಲ್ಲಿ ನಡೆದ ಡಿಸಿಸಿ ವಾರ್ಷಿಕ ಮಹಾಸಭೆಯಲ್ಲಿ ಗೌಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ಉಪಾಧ್ಯಕ್ಷ ಎನ್.ಎಸ್. ಪರಮೇಶ್ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಡಿಸಿಸಿ ನಿರ್ದೇಶಕರಾದ ಎಸ್.ಬಿ. ಭರತ್‌ಕುಮಾರ್, ಬಿ.ಡಿ. ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗೌಡಳ್ಳಿ ಸಹಕಾರ ಸಂಘವು ಈ ಹಿಂದೆಯೂ ಎರಡು ಬಾರಿ ತೃತೀಯ ಬಹುಮಾನ ಪಡೆದಿದೆ.