ಮಡಿಕೇರಿ, ಅ. ೭: ಮಡಿಕೇರಿ ದಸರಾದಲ್ಲಿ ವಿಜಯದಶಮಿ ದಿನದಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಕೊಡಗಿನ ಕಲಾವಿದರಾದ ಚಿತ್ರನಟ- ನಟಿಯರಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಹಾಗೂ ತಂಡದಿAದ ಕನ್ನಡ ಸ್ಟಾರ್ ನೈಟ್ಸ್ ಕಾರ್ಯಕ್ರಮ ನಡೆಯಿತು. ಸುಮಾರು ೪೦ ನಿಮಿಷಗಳ ಕಾಲ ಈತಂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತು.
ಹರ್ಷಿಕಾ, ಭುವನ್‌ರೊಂದಿಗೆ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟಿ ಸುಕೃತಾನಾಗ್, ಬಾಲಿವುಡ್ ನಟಿ ಹಾಗೂ ಪಂಜಾಬಿ ಭಾಷಾ ತಾರೆ ರಿಯಾ ಮೊಹಂತಿ ಹಾಡು, ನೃತ್ಯ ಪ್ರದರ್ಶನ ನೀಡಿದರು. ಡಿ.ಜೆ. ನಿರ್ವಾನ್ ಡಿ.ಜೆ. ಮೂಲಕ ರಂಜಿಸಿದರು. ಈ ಸಂದರ್ಭ ವಿವಿಧ ಹಾಡು, ವಾಲಗ ಸೇರಿದಂತೆ, ಅಗಲಿರುವ ನಟ ಪುನೀತ್ ರಾಜ್‌ಕುಮಾರ್‌ಗೆ ಗೌರವಾರ್ಪಣೆಯೂ ನಡೆಯಿತು.