ಮಡಿಕೇರಿ, ಅ. ೭: ಭಾರತದ ಬಾಹ್ಯಾಕಾಶ ಸಂಸ್ಥೆಯ (ISಖಔ) ಸಾಧನೆಗಳಲ್ಲಿ ಪ್ರಮುಖ ಸಾಧನೆಯಾಗಿರುವ ಭಾರತದ ಮೊದಲ ಅಂತರ ಗ್ರಹ ಯೋಜನೆಯಾಗಿರುವ ಮಂಗಳಯಾನವು ೮ ವರ್ಷಗಳ ಸುದೀರ್ಘ ಸೇವೆಯ ಬಳಿಕ ISಖಔ ಗ್ರೌಂಡ್ ಸ್ಟೇಷನ್ನಿಂದ ಅಕ್ಟೋಬರ್ ೨ ರಂದು ಸಂಪರ್ಕ ಕಳೆದುಕೊಂಡಿದ್ದು, ಅಧಿಕೃತವಾಗಿ ಈ ಮಿಷನ್ ಅಂತ್ಯಗೊAಡಿರುವುದಾಗಿ ISಖಔ ಪ್ರಕಟಿಸಿದೆ. ಪ್ರಸ್ತುತ ವರ್ಷ ಏಪ್ರಿಲ್ನಲ್ಲಿ ಸಂಭವಿಸಿದ ಸುದೀರ್ಘ ಕಾಲದ ಸೂರ್ಯಗ್ರಹಣದಿಂದಾಗಿ ಮಂಗಳಯಾನದ ಚಲನ-ವಲನಕ್ಕೆ ಅಗತ್ಯವಿರುವ ಸೌರಶಕ್ತಿ ಆಧಾರಿತ ಬ್ಯಾಟರಿಗಳನ್ನು ಜೀವಂತ ಉಳಿಸಲು ಅಸಾಧ್ಯವಾಯಿತು. ಈ ಮೂಲಕ ಗ್ರೌಂಡ್ ಸ್ಟೇಷನ್ನಿಂದ ಸಂಪರ್ಕ ಕಳೆದುಕೊಂಡಿತು. ಅದಾಗ್ಯೂ ಕೇವಲ ೬ ತಿಂಗಳ ಕಾಲಾವಧಿಗಷ್ಟೇ ಚಲನದಲ್ಲಿ ಇರಬೇಕಿದ್ದ ಈ ಮಂಗಳಯಾನವು ೮ ವರ್ಷಗಳು ಮಂಗಳ ಗ್ರಹವನ್ನು ಪ್ರದಕ್ಷಿಸಿ ಆಶ್ಚರ್ಯ ಮೂಡಿಸಿತು.
೨೦೧೩ರ ನವೆಂಬರ್ ೫ ರಂದು ಮಂಗಳಕ್ಕೆ ಪಯಣ ಬೆಳೆಸಿದ ಬಾಹ್ಯಾಕಾಶ ನೌಕೆಯಾಗಿರುವ ಮಂಗಳಯಾನವು ೨೦೧೪ರ ಸೆಪ್ಟೆಂಬರ್ ೨೪ ರಂದು ಮಂಗಳ ಗ್ರಹದ ಕಕ್ಷೆಯನ್ನು ಸುತ್ತಲಾರಂಭಿಸಿತು. ಈ ಮೂಲಕ ಭಾರತದ ಮೊದಲನೆಯ ಅಂತರ ಗ್ರಹ ಮಿಷನ್ ಎಂಬ ಹೆಗ್ಗಳಿಕೆಗೆ ಮಂಗಳಯಾನ ಮಿಷನ್ ಪಾತ್ರವಾಯಿತು. ರಷ್ಯಾ, ಅಮೇರಿಕಾ, ಯೂರೋಪಿನ್ ಸ್ಪೇಸ್ ಏಜನ್ಸಿ ಬಳಿಕ ಮಂಗಳ ಗ್ರಹದ ಕಕ್ಷೆ ಪ್ರದಕ್ಷಿಣೆ (ಒಚಿಡಿs ಔಡಿbiಣಣeಡಿ ಒissioಟಿ) ನಡೆಸಲು ೪ನೇ ರಾಷ್ಟç ಎಂಬ ಖ್ಯಾತಿಗಳಿಸಿತು. ಮೊದಲನೆಯ ಪ್ರಯತ್ನದಲ್ಲಿಯೇ ಸಂಪೂರ್ಣ ಯಶಸ್ಸು ಕಾಣುವಲ್ಲಿ ಮೊದಲ ರಾಷ್ಟç ಎಂಬ ಹೆಗ್ಗಳಿಕೆ ಭಾರತ ISಖಔ ಮೂಲಕ ಪಡೆಯಿತು.
ಮಿಷನ್ ಉದ್ದೇಶ
ತಾಂತ್ರಿಕತೆಯ ಪ್ರದರ್ಶನ: ಮುಂಬರುವ ವರ್ಷಗಳಲ್ಲಿ ಅಂತರ ಗ್ರಹ ಪಯಣವು ಸಾಮಾನ್ಯವಾಗಬಹುದಾದರಿಂದ ಇಂತಹ ಒಂದು ಯೋಜನೆಗಳ ನಿರ್ವಹಣೆ ಯಾವ ರೀತಿ ಕೈಗೊಳ್ಳಬಹುದೆಂಬ ಅಂಶಗಳನ್ನು ಮಂಗಳಯಾನ ಮಿಷನ್ ಮೂಲಕ ಗ್ರಹಿಸಿಕೊಳ್ಳುವುದೇ ಈ ಮಿಷನ್ನ ಮುಖ್ಯ ಉದ್ದೇಶವಾಗಿತ್ತು. ೮ ವರ್ಷಗಳ ಕಾಲ ಮಂಗಳ ಗ್ರಹದಲ್ಲಿನ ತನ್ನ ಪ್ರದಕ್ಷಿಣೆಯಲ್ಲಿ ಗ್ರಹದ ಗುಣಲಕ್ಷಣಗಳನ್ನೂ ಸೂಕ್ಷö್ಮ ರೀತಿಯಲ್ಲಿ ಅಧ್ಯಯನ ನಡೆಸಿದೆ. ISಖಔ ಅಧಿಕೃತ ವೆಬ್ಪೋರ್ಟಲ್ನಿಂದ ಸದರಿ ಮಿಷನ್ನಿಂದ ದೊರೆತಿರುವ ವಿಜ್ಞಾನ ಸಂಬAಧಿಸಿದ ಸುಮಾರು ೨೭,೦೦೦ ಲೇಖನಗಳನ್ನು ಡೌನ್ಲೋಡ್ ಮಾಡಲಾಗಿದೆ ಎಂದು ISಖಔ ಪ್ರಕಟಣೆ ತಿಳಿಸಿದೆ.