ಕಣಿವೆ, ಅ. ೬ : ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡಗಳ ಸ್ವಚ್ಛತೆಗೆ ಮುಂದಾಗಿದ್ದ ತೊರೆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಿಗೆ ಅಡ್ಡಿಪಡಿಸಿದ ಪ್ರಸಂಗ ಬುಧವಾರ ನಡೆದಿದೆ.
ಸ್ನಾತಕೋತ್ತರ ಕೇಂದ್ರದ ಓಳಾವರಣದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಕಾಡು ಗಿಡಗಳಿಂದಾಗಿ ಸ್ಥಳೀಯರಿಗೆ ಚಿರತೆ ಮೊದಲಾದ ವನ್ಯ ಮೃಗಗಳು ಸೇರಿಕೊಳ್ಳುವ ಆತಂಕ ಉಂಟಾಗಿದ್ದ ಪರಿಣಾಮ ಸ್ಥಳೀಯರ ದೂರಿನ ಮೇರೆಗೆ ಪಂಚಾಯಿತಿಯ ಉಪಾಧ್ಯಕ್ಷರೂ ಆಗಿರುವ ಆಲೂರು ಸಿದ್ದಾಪುರ ರೋಟರಿ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಪುರದ ಎಂ.ಟಿ.ಬೇಬಿ ಅವರು ಸ್ಥಳೀಯರ ಹಿತಾಸಕ್ತಿಯಿಂದಾಗಿ ಸ್ವತಃ ಹಣ ವ್ಯಯಿಸಿ ಜೆಸಿಬಿ ಯಂತ್ರ ತಂದು ಸ್ವಚ್ಛತೆ ಮಾಡಿ ಸಹಕರಿಸಲು ಮುಂದಾಗಿದ್ದರು.
ಆದರೆ ಇದನ್ನು ಸಹಿಸದ ಸ್ಥಳೀಯ ಕೆಲವು ವ್ಯಕ್ತಿಗಳು ರಾಜಕೀಯ ದುರುದ್ದೇಶದಿಂದ ಸ್ವಚ್ಛತೆಗೆ ಅಡ್ಡಿಪಡಿಸಿದ್ದರ ಕುರಿತು ತೊರೆನೂರು ಗ್ರಾ.ಪಂ. ಅಧ್ಯಕ್ಷೆ ರೂಪ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಹಾಗೂ ಸ್ನಾತಕೋತ್ತರ ಕೇಂದ್ರದ ಅಧಿಕಾರಿಗಳ ಕಡೆಯಿಂದ ಸ್ವಚ್ಛತೆಗೆ ಮನವಿ ಪತ್ರಗಳು ಬಂದಿದ್ದವು. ಇದನ್ನು ಪಂಚಾಯಿತಿ ವತಿಯಿಂದ ಮಾಡಲು ಕನಿಷ್ಟ ಎಂದರು ಎರಡು ಲಕ್ಷ ರೂಗಳು ತಗಲುವ ಸಂಭವವಿತ್ತು. ಆದರೆ ಪಂಚಾಯಿತಿ ಯಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆ ಇದ್ದ ಕಾರಣ ಸ್ವತಃ ಪಂಚಾಯಿತಿಯ ಬಂದಿದ್ದವು. ಇದನ್ನು ಪಂಚಾಯಿತಿ ವತಿಯಿಂದ ಮಾಡಲು ಕನಿಷ್ಟ ಎಂದರು ಎರಡು ಲಕ್ಷ ರೂಗಳು ತಗಲುವ ಸಂಭವವಿತ್ತು. ಆದರೆ ಪಂಚಾಯಿತಿ ಯಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆ ಇದ್ದ ಕಾರಣ ಸ್ವತಃ ಪಂಚಾಯಿತಿಯ ಉಪಾಧ್ಯಕ್ಷ ಎಂ.ಟಿ.ಬೇಬಿ ಸಾಮಾಜಿಕ ಕಾಳಜಿಯಿಂದ ಸ್ವತಃ ತಾವೇ ಹಣ ವ್ಯಯಿಸಿ ಸ್ವಚ್ಛತೆ ಮಾಡುವುದಾಗಿ ಮುಂದೆ ಬಂದಿದ್ದರು. ಇದನ್ನು ಸಹಿಸದ ಸ್ಥಳೀಯ ಕೆಲವು ರಾಜಕಾರಣಿಗಳು ಅಡ್ಡಿಪಡಿಸಿದ್ದನ್ನು ಖಂಡಿಸಲಾಗುವುದು ಎಂದು ರೂಪ ಮಹೇಶ್ ತಿಳಿಸಿದ್ದಾರೆ.