ಸೋಮವಾರಪೇಟೆ, ಅ. ೬: ಇಲ್ಲಿನ ಶ್ರೀ ಬಸವೇಶ್ವರ ಮತ್ತು ಶ್ರೀ ಸೋಮೇಶ್ವರ ದೇವಾಲಯದಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ನವರಾತ್ರಿ ಉತ್ಸವ ವಿಜಯದಶಮಿಯಂದು ಸಂಪನ್ನಗೊAಡಿತು.

ಇಲ್ಲಿನ ಬಸವೇಶ್ವರ ದೇವಾಲಯ ದಲ್ಲಿ ಜರುಗಿದ ಉತ್ಸವದಲ್ಲಿ ದುರ್ಗಾದೇವಿಗೆ ಪ್ರತಿನಿತ್ಯ ವಿವಿಧ ಅಲಂಕಾರ, ಅರ್ಚನೆ, ಅಭಿಷೇಕ ನಡೆದು ವಿಜಯದಶಮಿಯಂದು ಬೆಳಗ್ಗಿನಿಂದ ವಿಶೇಷ ಪೂಜೆಗಳು ನಡೆದವು.

ರಾತ್ರಿ ಅರ್ಚಕ ಹಿರೇಮಠ್ ನೇತೃತ್ವದ ಪುರೋಹಿತರ ತಂಡ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಮೂರ್ತಿಯನ್ನು ಹೊತ್ತು ಪಂಚ ಕಳಸಗಳೊಂದಿಗೆ ಬಾಳೆ ಕಡಿದು, ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಭಕ್ತರಿಗೆ ವಿತರಿಸಿದರು. ದುರ್ಗಾದೇವಿಗೆ ಉಯ್ಯಾಲೆ ಸೇವೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭ ಸಂಕನಳ್ಳಿಯ ಮಲ್ಲೇಶ್ ಮತ್ತು ತಂಡದ ವೀರಗಾಸೆ ತಂಡದಿAದ ದೇವಿಗೆ ನೃತ್ಯ ಸೇವೆ ನಡೆಯಿತು. ವೀರಶೈವ ಸಮಾಜದ ಯಜಮಾನರಾದ ಬಿ.ಪಿ. ಶಿವಕುಮಾರ್, ಶೆಟ್ರು ಮೃತ್ಯುಂಜಯ ಸೇರಿದಂತೆ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಸೋಮೇಶ್ವರ ದೇವಾಲಯ: ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವದಲ್ಲಿ ೯ ದಿನಗಳ ಕಾಲ ಶ್ರೀ ಪಾರ್ವತಿಗೆ ವಿಶೇಷ ಪೂಜೆ ನಡೆದು ಬುಧವಾರ ವಿಧ್ಯುಕ್ತ ತೆರೆ ಕಂಡಿತು.

ದೇವಿಯ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಯಿತು. ಮಹಿಳೆಯರಾದಿಯಾಗಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ, ಡೊಳ್ಳುಕುಣಿತ, ಗೊಂಬೆ ಕುಣಿತ ನಡೆಯಿತು. ಸಂಜೆ ಆನೆಕೆರೆ ಬಳಿ ಬನ್ನಿ ಹಂಚಿ, ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.

ಈ ಸಂದರ್ಭ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ಸತೀಶ್, ಎಸ್.ಆರ್. ಸೋಮೇಶ್, ಎಲ್.ಎಂ. ಪ್ರೇಮಾ, ಅರ್ಚನಾ, ಲಕ್ಷಿö್ಮÃ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.