ಕೂಡಿಗೆ, ಅ. ೭: ತಾಲೂಕು ಪಂಚಾಯಿತಿ ವತಿಯಿಂದ ಕುಶಾಲನಗರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮೂರು ದಿನಗಳ ದೂರದೃಷ್ಟಿಯ ಯೋಜನೆ ಅಡಿಯಲ್ಲಿ ಹಂತ ಹಂತವಾಗಿ ಸದಸ್ಯರುಗಳಿಗೆ ತರಬೇತಿಯನ್ನು ನೀಡುವ ಕಾರ್ಯಾಗಾರ ಕೂಡುಮಂಗಳೂರು ಗ್ರಾ.ಪಂ. ಸಭಾಂಗಣದಲ್ಲಿ ಆರಂಭಗೊAಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಆಯಾ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾ.ಪಂ. ಸದಸ್ಯರುಗಳಿಗೆ ಗ್ರಾಮ ಪಂಚಾಯಿತಿ ಆರೋಗ್ಯ ಯೋಜನೆ, ಶಿಕ್ಷಣ, ಮಹಿಳಾ ಅಭಿವೃದ್ಧಿ ಯೋಜನೆ, ಮಕ್ಕಳ ಅಭಿವೃದ್ಧಿ ಯೋಜನೆ, ಸೇರಿದಂತೆ ಎಂಟು ಗ್ರಾಮದ. ಪ್ರಗತಿಗೆ ಸಂಬAಧಿಸಿದ ಮತ್ತು ಗ್ರಾಮದಲ್ಲಿ ಪಂಚಾಯಿತಿ ಮಾಸಿಕ ಸಭೆಯಲ್ಲಿ ಕೈಗೊಳ್ಳುವ ದೂರದೃಷ್ಟಿಯ ವಿಷಯಗಳ ಆಧಾರಿತ ತರಬೇತಿಯನ್ನು ಸದಸ್ಯರುಗಳಿಗೆ ನೀಡಲಾಗುತ್ತಿದೆ. ಇದರ ಮೂಲಕ ಸದಸ್ಯರು ತಮ್ಮ ತಮ್ಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಪೂರಕವಾಗುವ ವಿಷಯಗಳನ್ನು ತಿಳಿಸುವ ಕಾರ್ಯಾಗಾರವಾಗಿರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕು ಪಂಚಾಯಿತಿ ವತಿಯಿಂದ ಮನವಿಯನ್ನು ಮಾಡಲಾಗಿದೆ. ತರಬೇತಿಯಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ಸುರೇಶ್, ಸಂಪನ್ಮೂಲಗಳ ವ್ಯಕ್ತಿಯಾಗಿ ರವಿ, ಶೋಭಾ ಹಾಜರಿದ್ದರು.