ವೀರಾಜಪೇಟೆ, ಅ. ೩: ನವರಾತ್ರಿಯ ಅಂಗವಾಗಿ ಇಲ್ಲಿನ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು. ತೆಲುಗರ ಬೀದಿಯ ಶ್ರೀ ದಕ್ಷಿಣಾ ಮಾರಿಯಮ್ಮ ದೇವಾಲಯದಲ್ಲಿ ನವರಾತ್ರಿಯ ಆಚರಣೆಯ ಅಂಗವಾಗಿ ದೇವಾಲಯ ಆವರಣದಲ್ಲಿ ಪುರೋಹಿತರಾದ ಶ್ರೀವಾತ್ಸ ಪುದುಮಾರು ನೇತೃತ್ವದಲ್ಲಿ ಆರ್ಚಕ ವೃಂದ ಅವರಿಂದ ಚಂಡಿಕಾ ಹೋಮ ನೆರವೇರಿತು. ಗಣಪತಿ ಹೋಮ, ಚಂಡಿಕಾ ಹೋಮ, ಕಲಶ ಪ್ರತಿಷ್ಟೆ ಮತ್ತು ಕಲಶಾಭಿಶೇಕ ಪೂಜೆ, ಸಂಕಲ್ಪ ಪೂಜೆ, ಮಂಡಲ ಪೂಜೆಗಳು ನಡೆದವು. ಸುಮಾರು ೩೦೦ ಅಧಿಕ ಮಂದಿ ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದ್ದರು. ದೇವಾಲಯದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.