ಮಡಿಕೇರಿ, ಅ. ೪: ಪ್ರಸಕ್ತ ವರ್ಷ ದಸರಾ ಉತ್ಸವ ಹೊಸ ಹುರುಪಿನೊಂದಿಗೆ ನಡೆಯುತ್ತಿದ್ದು, ಸಂಭ್ರಮದ ವಿಜಯ ದಶಮಿ ಆಚರಣೆಗೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಗೋಣಿಕೊಪ್ಪಲು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ತಾ. ೫ ರಂದು (ಇಂದು) ವಿಜಯ ದಶಮಿಯೊಂದಿಗೆ ಮಡಿಕೇರಿಯ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆ ಯನ್ನು ಸಾವಿರಾರು ಮಂದಿ ಕಣ್ತುಂಬಿಸಿಕೊಳ್ಳಲಿದ್ದಾರೆ.

ದಸರಾದ ಅಂತಿಮ ದಿನದ ವೈವಿಧ್ಯಮಯ ಕಾರ್ಯಕ್ರಮಗಳ ಯಶಸ್ಸಿಗೆ ದಸರಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ನಗರಸಭೆ, ದಶಮಂಟಪ ಸಮಿತಿಯವರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲಾ ಅಗತ್ಯ ಪ್ರಯತ್ನಗಳನ್ನು ನಡೆಸಿದೆ. ಅತ್ತ ಗೋಣಿಕೊಪ್ಪದಲ್ಲೂ ಅಲ್ಲಿನ ದಸರಾ ಸಮಿತಿ ಪದಾಧಿಕಾರಿಗಳು, ಗ್ರಾಮ ಸಭೆ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.

ಈಗಾಗಲೇ ಮಡಿಕೇರಿಯಲ್ಲಿ ದಶಮಂಟಪಗಳು ಹೊರಡುವ ದೇವಾಲಯದ ಸನಿಹದಲ್ಲಿ ಆಕರ್ಷಕ ಮಂಟಪಗಳು ಅಂತಿಮ ತಯಾರಿಯಲ್ಲಿವೆ. ಇಡೀ ನಗರ ವಿದ್ಯುತ್ ಅಲಂಕಾರಗೊAಡಿದ್ದು, ಈಗಾಗಲೇ ನಗರ ಜನರಿಂದ ಭರ್ತಿಯಾಗಿವೆ. ವಾಹನ-ಜನ ಸಂದಣಿ ಹೆಚ್ಚಾಗಿದ್ದು, ವ್ಯವಸ್ಥಿತವಾದ ಹಾಗೂ ಶಾಂತಿಯುತವಾದ ಹಬ್ಬ ಆಚರಣೆಗೆ ವಿಶೇಷವಾಗಿ ಪೊಲೀಸ್ ಇಲಾಖೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಪೊಲೀಸರೊಂದಿಗೆ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಸಿಬ್ಬಂದಿಗಳನ್ನು ಜಿಲ್ಲೆಗೆ ಕರೆಸಲಾಗಿದೆ.

ಎಸ್ಪಿ ಅಯ್ಯಪ್ಪ ಅವರ ಉಸ್ತುವಾರಿಯಲ್ಲಿ ೩ ಡಿವೈಎಸ್ಪಿ, ೧೦ ವೃತ್ತ ನಿರೀಕ್ಷಕರು, ೨೨ ಸಬ್ ಇನ್ಸ್ಪೆಕ್ಟರ್‌ಗಳು, ೫೦ ಸಹಾಯಕ ಸಬ್‌ಇನ್ಸ್ಪೆಕ್ಟರ್‌ಗಳು, ೩೫೦ ಪೊಲೀಸ್ ಸಿಬ್ಬಂದಿ, ೨೦೦ ಹೋಂಗಾರ್ಡ್ಗಳು, ೪ ಕೆಎಸ್‌ಆರ್‌ಪಿ ತುಕಡಿ, ೮ ಡಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಸುಮಾರು ೮೮ ಸಿಸಿ ಕ್ಯಾಮರಾಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ ವಿವಿಧ ವ್ಯಾಪಾರ ಮಳಿಗೆಗಳು ತಲೆ ಎತ್ತಿದ್ದು, ವ್ಯಾಪಾರದ ಭರಾಟೆಯೂ ಹೆಚ್ಚಾಗಿದೆ.

ಇಂದಿನ ಕಾರ್ಯಕ್ರಮ

ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ತಾ. ೫ರಂದು (ಇಂದು) ಸಂಜೆ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ಸುಬ್ರಹ್ಮಣ್ಯ ಪ್ರಸ್ತುತಿ ನೃತ್ಯ ವೈಭವ, ಯುವ ಗಾಯಕ ಶರಣ್ ಅಯ್ಯಪ್ಪ, ವೈಷ್ಣವಿ ಅವರಿಂದ ಸಂಗೀತ ರಸಮಂಜರಿ, ಅನ್ವಿತ ಕುಮಾರ್ ತಂಡದಿAದ ಗೀತಾ ಗಾಯನ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಚೈತ್ರ ಮತ್ತು ತಂಡದಿAದ ಸಂಗೀತ ರಸಮಂಜರಿ ಮೂಡಿ ಬರಲಿದೆ. ರಾತ್ರಿ ೧೦ ಗಂಟೆಗೆ ದಸರಾ ಇಲ್ಲೂ ಕೂಡ ವಿವಿಧ ಮಂಟಪಗಳ ಶೋಭಾಯಾತ್ರೆ ರಾತ್ರಿಯನ್ನು ಬೆಳಗಾಗಿಸುವಂತೆ ಮಾಡಲಿದೆ. ಗೋಣಿಕೊಪ್ಪಲು ಪಟ್ಟಣವೂ ವಿದ್ಯುತ್ ಅಲಂಕೃತಗೊAಡಿದ್ದು, ಜಗಮಗಿಸುತ್ತಿದೆ.

ಸಂಚಾರ ವ್ಯವಸ್ಥೆಯಲ್ಲಿ

ಮಾರ್ಪಾಡು

ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ವಿಜಯದಶಮಿ ಪ್ರಯುಕ್ತ ಮಂಟಪಗಳ ಮೆರವಣಿಗೆ ಇರುವುದರಿಂದ, ತಾ. ೫ರ ಸಂಜೆ ೪ ಗಂಟೆಯಿAದ ತಾ. ೬ರ ಬೆಳಿಗ್ಗೆ ೮ ಗಂಟೆಯವರೆಗೆ ಮಡಿಕೇರಿ ನಗರ ಮತ್ತು ಗೋಣಿಕೊಪ್ಪದಲ್ಲಿ ತಾತ್ಕಾಲಿಕ ವಾಹನ ಸಂಚಾರದ ಮಾರ್ಗ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ಆದೇಶಿಸಿದ್ದಾರೆ.

ಮಡಿಕೇರಿ: ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮತ್ತು ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ. ಶಾಲೆ, ಮುತ್ತಪ್ಪ ದೇವಸ್ಥಾನ ಮುಂದೆ ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೊಳಿಸಬೇಕು. ಮುಂದುವರೆದು ಎಸ್.ಪಿ. ಕಚೇರಿ ಜಂಕ್ಷನ್, ಮುಂದೆ ಐಟಿಐ ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ. ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬೇಕು.

ಸಿದ್ದಾಪುರ, ವೀರಾಜಪೇಟೆ, ಮೂರ್ನಾಡು ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಆರ್.ಎಂ.ಸಿ ಯಾರ್ಡ್ ಮೈದಾನದಲ್ಲಿ ವಾಹನ ನಿಲುಗಡೆ ಮಾಡುವುದು. ಮುಂದುವರೆದು ಚೈನ್‌ಗೇಟ್ ಮೂಲಕ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ಗಾಳಿಬೀಡು ಅಬ್ಬಿಫಾಲ್ಸ್, ಕಾಲೂರು ಕಡೆಯಿಂದ ಬರುವ ವಾಹನಗಳು ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೊಟೇಲ್ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ನಗರದಲ್ಲಿರುವ ಗಣಪತಿ ಬೀದಿ, ಮಹದೇವಪೇಟೆ ನಿವಾಸಿಗಳು ತಮ್ಮ ವಾಹನಗಳನ್ನು ಕ್ರೆಸೆಂಟ್ ಶಾಲೆಯ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ಕಾಲೇಜು ರಸ್ತೆ, ಕೊಹಿನೂರು ರಸ್ತೆ ಮತ್ತು ನಗರದ ಮದ್ಯಭಾಗದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದೇ ಹಿಂದುಸ್ಥಾನಿ ಶಾಲೆಯ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಡಿಪೋವನ್ನೇ ಬಸ್ಸು ನಿಲ್ದಾಣವಾಗಿ ಮಾರ್ಪಾಡಿಸಿಕೊಳ್ಳುವುದು. ಅವಶ್ಯವಿದ್ದಲ್ಲಿ ಆರ್.ಎಂ.ಸಿ. ಯಾರ್ಡ್ನ್ನು ಬಳಸಿಕೊಳ್ಳುವುದು. ಮತ್ತು ನಗರದೊಳಗೆ ಸಂಚರಿಸದAತೆ ವ್ಯವಸ್ಥೆ ಮಾಡಿಕೊಳ್ಳುವುದು. ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಲಾಗಿದೆ.

ಖಾಸಗಿ ಬಸ್ಸುಗಳು ನಗರದೊಳಗೆ ಆಗಮಿಸದೇ ಜಿಟಿ ವೃತ್ತದಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ತೆರಳಬೇಕು. ಖಾಸಗಿ ಬಸ್ಸು ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ (ಮೊದಲ ಪುಟದಿಂದ) ವಾಹನ ನಿಲ್ಲಿಸಲು ಅನುವು ಮಾಡಲಾಗಿದೆ.

ತಾ. ೫ ರಂದು ಸಂಜೆ ೪ ಗಂಟೆಯಿAದ ತಾ. ೬ರ ಬೆಳಿಗ್ಗೆ ೮ ಗಂಟೆಯವರೆಗೆ ನಗರದೊಳಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಗರದೊಳಗೆ ಇರುವ ಎಲ್ಲಾ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

ಪಾರ್ಕಿಂಗ್ ವ್ಯವಸ್ಥೆ: ಎಫ್.ಎಂ.ಸಿ ಕಾಲೇಜು ಮೈದಾನ, ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಆರ್‌ಎಂ.ಸಿ ಮೈದಾನ, ಕ್ರೆಸೆಂಟ್ ಶಾಲಾ ಮೈದಾನ, ಹಿಂದುಸ್ಥಾನಿ ಶಾಲಾ ಮೈದಾನ, ಐಟಿಐ ಕಾಲೇಜು ಮೈದಾನ, ಶಾಂತಿ ಚರ್ಚ್ ಮೈದಾನ (ದ್ವಿಚಕ್ರ ಮೋಟಾರು ಸೈಕಲ್ ಮಾತ್ರ), ಮ್ಯಾನ್ಸ್ ಕಾಂಪೌAಡ್, ಜೂನಿಯರ್ ಕಾಲೇಜು ಮೈದಾನ.

ಗೋಣಿಕೊಪ್ಪ : ವೀರಾಜಪೇಟೆ ಕಡೆಯಿಂದ ಬರುವ ವಾಹನಗಳನ್ನು ಮೈಸೂರು ಕಡೆಗೆ ಹೋಗಲು ಕೈಕೇರಿ ಕಳತ್ಮಾಡ್ ಜಂಕ್ಷನ್‌ನಿAದ ಅತ್ತೂರು ಜಂಕ್ಷನ್‌ಗಾಗಿ ಪಾಲಿಬೆಟ್ಟ ರಸ್ತೆಗೆ ಬಂದು ಮೈಸೂರು ರಸ್ತೆಗೆ ಸೇರಿ ಹೋಗಬೇಕು.

ಮೈಸೂರು ಕಡೆಯಿಂದ ಬರುವ ವಾಹನಗಳನ್ನು ವೀರಾಜಪೇಟೆ ಕಡೆಗೆ ಹೋಗಲು ತಿತಿಮತಿಯಿಂದ ಪಾಲಿಬೆಟ್ಟ-ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ಹೋಗಬೇಕು.

ಪೊನ್ನಂಪೇಟೆ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಪೊನ್ನಂಪೇಟೆಯಿAದ ಪೊನ್ನಪ್ಪಸಂತೆ-ಕೋಣನಕಟ್ಟೆ-ತಿತಿಮತಿ ಮಾರ್ಗವಾಗಿ ಹೋಗಬೇಕು.

ಅದೇ ರೀತಿ ಮೈಸೂರಿನಿಂದ ಪೊನ್ನಂಪೇಟೆ, ಶ್ರೀಮಂಗಲ ಕಡೆ ಹೋಗುವ ವಾಹನಗಳು ತಿತಿಮತಿ- ಕೋಣನಕಟ್ಟೆ-ಪೊನ್ನಪ್ಪಸಂತೆ-ನಲ್ಲೂರು-ಕಿರುಗೂರು ಮಾರ್ಗವಾಗಿ ಹೋಗಬೇಕು.

ವೀರಾಜಪೇಟೆಯಿಂದ ಪೊನ್ನಂಪೇಟೆ, ಶೀಮಂಗಲ ಕಡೆಗೆ ಹೋಗುವ ವಾಹನಗಳು ಹಾತೂರು ಜಂಕ್ಷನ್‌ನಿAದ ಕುಂದಾ ಮಾರ್ಗವಾಗಿ ಪೊನ್ನಂಪೇಟೆ ಕಡೆಗೆ ಹೋಗಬೇಕು. ಪೊನ್ನಂಪೇಟೆ ಕಡೆಯಿಂದ ವೀರಾಜಪೇಟೆಗೆ ಹೋಗುವ ವಾಹನಗಳು ಕುಂದಾ, ಹಾತೂರು ಮಾರ್ಗವಾಗಿ ಹೋಗಬೇಕು.

ವಾಹನ ನಿಲುಗಡೆ ಸ್ಥಳಗಳು

ವೀರಾಜಪೇಟೆ ಕಡೆಯಿಂದ ಬರುವ ವಾಹನಗಳನ್ನು ಕಾವೇರಿ ಕಾಲೇಜು ಮೈದಾನದಲ್ಲಿ ನಿಲ್ಲಿಸುವುದು. ಮೈಸೂರು ಕಡೆಯಿಂದ ಬರುವ ವಾಹನಗಳನ್ನು ಆರ್.ಎಂ.ಸಿ ಆವರಣದ ಒಳಭಾಗದಲ್ಲಿ ನಿಲ್ಲಿಸಬೇಕು. ಪಾಲಿಬೆಟ್ಟ ರಸ್ತೆ ಕಡೆಯಿಂದ ಬರುವ ವಾಹನಗಳನ್ನು ಕಾಪ್ಸ್ ಶಾಲೆ ಎಂಟ್ರೆನ್ಸ್ ರಸ್ತೆಯಿಂದ ಹಿಂದಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಬೇಕು. ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳನ್ನು ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ ನಿಲ್ಲಿಸಬೇಕು.