ಮಡಿಕೇರಿ, ಅ. ೪: ವಿಜಯದಶಮಿಯ ಮುನ್ನಾ ದಿನದಂದು ನಡೆಯುವ ಆಯುಧಪೂಜಾ ಕಾರ್ಯಕ್ರಮ ಮಂಗಳವಾರದAದು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸ ಲ್ಪಟ್ಟಿತು. ಈ ಪ್ರಯುಕ್ತ ವಾಹನ, ಅಂಗಡಿ, ಯಂತ್ರೋ ಪಕರಣಗಳು, ಕೈಗಾರಿಕಾ ಸ್ಥಳಗಳು ಸೇರಿದಂತೆ ಕಚೇರಿಗಳಲ್ಲಿ ಕೈಂಕರ್ಯದೊAದಿಗೆ ಇನ್ನಿತರ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.

ಬಹುತೇಕ ಇಡೀ ಜಿಲ್ಲೆಯಾ ದ್ಯಂತ ಅಂಗಡಿ - ಮುಂಗಟ್ಟುಗಳು, ವಾಹನಗಳು ಅಲಂಕೃತಗೊAಡು ಆಯುಧಪೂಜಾ ಹಿನ್ನೆಲೆಗೆ ಮೆರುಗು ನೀಡಿತ್ತು. ವಿವಿಧ ಸಂಘ - ಸಂಸ್ಥೆಗಳ ಮೂಲಕ ವಾಹನ ಚಾಲಕರ ಸಂಘ,

(ಮೊದಲ ಪುಟದಿಂದ) ಬಸ್ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಮೂಲಕವೂ ವೈವಿಧ್ಯಮಯವಾದ ಕಾರ್ಯಕ್ರಮಗಳು ದಿನವಿಡೀ ಜರುಗಿದವು. ವಿವಿಧ ದೇವಾಲಯಗಳಲ್ಲೂ ವಾಹನಗಳಿಗೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಡಿಕೇರಿ ನಗರ ಹಾಗೂ ಗೋಣಿಕೊಪ್ಪಲುವಿನಲ್ಲಿ ತಾ. ೫ ರಂದು (ಇಂದು) ಜರುಗಲಿರುವ ದಸರಾ ಕಾರ್ಯಕ್ರಮಕ್ಕೆ ಆಯುಧ ಪೂಜಾ ಕಾರ್ಯ ಇನ್ನಷ್ಟು ಮೆರುಗು ನೀಡಿವೆ.

ಮಡಿಕೇರಿಯಲ್ಲಿ ಅಲಂಕೃತ ವಾಹನಗಳ ಸ್ಪರ್ಧೆಯೊಂದಿಗೆ ಸಂಜೆ ಗಾಂಧಿಮೈದಾನದಲ್ಲಿ ನಡೆದ ಕಾರ್ಯಕ್ರಮ ಗಮನ ಸೆಳೆಯಿತು. ಬಗೆ - ಬಗೆಯ ರೀತಿಯಲ್ಲಿ ಅಲಂಕೃತಗೊAಡಿದ್ದ ವಾಹನಗಳನ್ನು ನೋಡುವದೇ ವಿಶೇಷವಾಗಿತ್ತು. ಕಟ್ಟಡಗಳೂ ದೀಪಾಲಂಕಾರ ಗೊಂಡಿದ್ದು, ಕಳೆದೆರೆಡು ವರ್ಷಗಳ ಅಂತರದ ಬಳಿಕ ವೈಭವಯುತ ದೃಶ್ಯ ಜಿಲ್ಲೆಯಾದ್ಯಂತ ಕಂಡು ಬಂದವು.

ನಮ್ಮದೆನ್ನುವುದು ಎನೂ ಇಲ್ಲ. ನಾವು ಅದನ್ನು ಸದ್ಬಳಕೆ ಮಾಡಿಕೊಂಡ ನಂತರ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗ ಬೇಕಾಗುತ್ತದೆ. ರಾಜರ ಕಾಲದಲ್ಲಿ ಅರಸರು ತಮ್ಮ ಆಯುಧಗಳನ್ನು ಬಳಸಿ ದೇವರ ಮುಂದಿಟ್ಟು ಪೂಜಿಸುತ್ತಿದ್ದರು ಎಂದರು.

ಅರ್ಚಕ ಗಣೇಶ್ ಶರ್ಮ ಅವರು ಸಂಘದ ಕಚೇರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಮತ್ತು ಆಟೋಗಳಿಗೆ ಪೂಜೆಯನ್ನು ನೆÀರವೇರಿಸುವುದರ ಮೂಲಕ ಆಶೀರ್ವಚನ ನೀಡಿದರು. ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಫ್.ಸಭಾಸ್ಟೀನ್, ಸದಸ್ಯ ರಫೀಕ್, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ವಹಿಸಿದ್ದರು.

ಇದೇ ಸಂದರ್ಭ ಪಂಚಾಯಿತಿ ಸದಸ್ಯೆ ಶಾಂತಿ ಆಟೋ ಚಾಲಕರ ಸೇವೆಯನ್ನು ನೆನೆಸಿ ತಾವು ರಚಿಸಿದ ಕವನವನ್ನು ವಾಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗ್ರಾಮ ಪಂಚಾಯಿತಿ ಸದಸ್ಯ ಪಿ.ಆರ್. ಸುನಿಲ್ ಕುಮಾರ್, ಮಲೆಯಾಳಿ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಜೇಸಿ ಸಂಸ್ಥೆ ಅಧ್ಯಕ್ಷ ಸತೀಶ್ ಕುಮಾರ್, ವರ್ತಕರ ಸಂಘದ ನಿರ್ದೇಶಕ ಡಿ.ನರಸಿಂಹ ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷ ಸಂತೋಷ್, ಪಂಚಾಯಿತಿ ಸದಸ್ಯರುಗಳಾದ ರೇಷ್ಮ, ಗೀತಾ, ರಾಸಾತಿ ಮಂಜುಳ, ವಸಂತಿ, ಸೋಮನಾಥ, ಪ್ರಮುಖರಾದ ಎಂ.ಎ.ವಸAತ್, ಮಾಜಿ ಅಧ್ಯಕ್ಷ ಕರೀಂ, ಅಂಗನವಾಡಿ ಶಿಕ್ಷಕಿ ಪೂರ್ಣಿಮ ಹಾಗೂ ಶಾಂತಿ, ಆಟೋ ಚಾಲಕರ ಸಂಘದ |

ಅಧ್ಯಕ್ಷ ಕೆ.ಕೆ.ಪ್ರಕಾಶ್, ಸಂಘದ ಸದಸ್ಯರು, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ.ಪೂವಪ್ಪ, ಉದ್ಯಮಿಗಳಾದ ಹೇಮಂತ್, ಪಿ.ಸಿ.ಮೋಹನ್, ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ.ವಿನ್ಸೆAಟ್, ಎಂ.ಎಸ್.ಸುನೀಲ್, ಶಿವಣ,್ಣ

ರಾಜು ರೈ, ಬಿ.ಕೆ.ಶಶಿಕುಮಾರ್ ರೈ ಇತರರು ಇದ್ದರು. ಮೊದಲಿಗೆ ಪರಿಣಿತ ಪ್ರಾರ್ಥಿಸಿ,

ಸಂಘದ ಮಾಜಿ ಅಧ್ಯಕ್ಷ ಪ್ರಶಾಂತ್ ಸ್ವಾಗತಿಸಿ, ನಿರೂಪಿಸಿ,

ವಂದಿಸಿದರು.