*ಗೋಣಿಕೊಪ್ಪ, ಅ. ೪: ಕಾವೇರಿ ಕಲಾವೇದಿಕೆಯಲ್ಲಿ ಎಂಟನೇ ದಿನದ ಸಾಂಸ್ಕೃತಿಕ ಸಂಜೆ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳ ಕಲರವದಿಂದ ಕೂಡಿತ್ತು. ಹಾಡು, ಕುಣಿತದಿಂದ ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕಲಾ ಪ್ರಿಯರನ್ನು ರಂಜಿಸಿದರು.
ಸೈಕ್ಲೋನ್ ನೃತ್ಯ ಶಾಲೆಯ ರಮೇಶ್ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಕೊಡವ, ಹಿಂದಿ, ತಮಿಳು, ಮಲಯಾಳ ಚಿತ್ರಗೀತೆಗಳ ವಿವಿಧ ಹಾಡುಗಳಿಗೆ ನೃತ್ಯಗಳನ್ನು ಮಾಡುವ ಮೂಲಕ ಎಂಟನೇ ದಿನದ ಸಾಂಸ್ಕೃತಿಕ ಸಂಜೆಯನ್ನು ಪೂರ್ಣಗೊಳಿಸಿದರು.
ಮೊದಲಿಗೆ ಗಣಪನ ಪ್ರಾರ್ಥನೆಯ ನೃತ್ಯ ರೂಪಕÀಗಳಿಂದ ಪ್ರಾರಂಭಿಸಿದ ಕಾರ್ಯಕ್ರಮ ನಂತರ ಹದಿನೈದಕ್ಕು ಹೆಚ್ಚು ಆಕರ್ಷಣೆಯ ನೃತ್ಯಗಳಾಗಿ ಕಣ್ಮನ ಸೆಳೆದರು. ಒಂದರಿAದ ನಾಲ್ಕು ವರ್ಷದ ಮಕ್ಕಳ ಕುಣಿತದ ಹೆಜ್ಜೆ ನೆರೆದವರಿಗೆ ಮುದ ನೀಡಿದರೆ, ತಮ್ಮ ಮಕ್ಕಳು ವೇದಿಕೆಯಲ್ಲಿ ಹೆಜ್ಜೆ ಹಾಕುವುದನ್ನು ನೋಡಿ ಸಂಭ್ರಮಿಸಿದ ಪೋಷಕರು ಅಧಿಕವಾಗಿಯೇ ಇದ್ದರು.
ಇದರೊಂದಿಗೆ ಅಮ್ಮತ್ತಿಯ ಹೇಮಾವತಿ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಸಂಸ್ಥೆಯಿAದ ಭರತನಾಟ್ಯ ಮೂಡಿಬಂತು. ಗಣರಾಯನ ಸ್ತುತಿಯೊಂದಿಗೆ ಪುಷ್ಪಾಂಜಲಿ, ತೋಡಿಯ, ಸರಸ್ವತಿ ಸ್ತುತಿ, ಕೋಲಾಟ, ತುಳು ಜಾನಪದ ಜತೆಗೆ ಪುಟಾಣಿ ಮಕ್ಕಳ ನೃತ್ಯಗಳು ಶಾಸ್ತಿçÃಯ ಮತ್ತು ಪಾಶ್ಚಾತ್ಯ ನೃತ್ಯ ಸಮ್ಮಿಲನದೊಂದಿಗೆ ಕೂಡಿತ್ತು.
ಎಸ್.ಟಿ. ಗಿರೀಶ್ ಅವರ ಸಂಗೀತ ಮತ್ತು ಗದಗಿನ ಷಡಕ್ಷರಿ ತಂಡದಿAದ ಜಾನಪದ ಗಾಯನ ನಡೆಯಿತು.
ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಬಿ.ಎನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಹಲ್ಚೀರ ಜಿಮ್ಮ ಸುಬ್ಬಯ್ಯ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಉಮಾಮಹೇಶ್ವರಿ ದೇವಸ್ಥಾನದ ಟ್ರಸ್ಟಿ ಮನೆಯಪಂಡ ಮೇಜರ್ ಬೋಪಣ್ಣ, ಜಿಲ್ಲಾ ರಾಷ್ಟಿçÃಯ ಸ್ವಯಂ ಸೇವಾ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ, ಹಿರಿಯ ವೈದ್ಯರಾದ ಡಾ. ಶಿವಪ್ಪ, ಡಾ. ಚಂದ್ರಶೇಖರ್, ಮರ್ಚೆಂಟ್ ಬ್ಯಾಂಕ್ ನಿರ್ದೇಶಕಿ ಚೇಂದAಡ ಸುಮಿ ಸುಬ್ಬಯ್ಯ, ವೀರ ಮಹಿಳೆ ಪ್ರಶಸ್ತಿ ಪಡೆದ ಮಲ್ಚೀರ ಯಶೋಧ ಗಾಂಧಿ, ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ವಿಜುದೇವಯ್ಯ, ಭಾರತೀಯ ಸೀನಿಯರ್ ಅಸೋಸಿಯೇಷನ್ ನಿರ್ದೇಶಕ ನರೇನ್ ಕಾರ್ಯಪ್ಪ, ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚೈತ್ರಾ ಬಿ. ಚೇತನ್, ಗಣೇಶ್ ರೈ, ಶೀಲಾ ಬೋಪಣ್ಣ, ಟೀನಾ ಮಾಚಯ್ಯ, ಚಂದನ್ ಮಂಜುನಾಥ್, ಗೀತಾ ನಾಯ್ಡು, ಬೋಜಮ್ಮ, ಸುರೇಶ್. ಹೆಚ್., ಚಂದನ್ ಕಾಮತ್, ನವೀನ್ ಕಿರುಗೂರು, ಜ್ಯೋತಿ ಹೆಚ್.ಆರ್, ಗೀತಾ ಜಿ.ಕೆ, ಪುಷ್ಪಾಮನೋಜ್, ಧನಲಕ್ಷಿ÷್ಮ ಸುಬ್ರಮಣಿ ಇದ್ದರು.