ವೀರಾಜಪೇಟೆ, ಅ. ೩: ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರು ಸರ್ಕಾರ ನೀಡುತ್ತಿರುವ ಸೌಲಭ್ಯ ಗಳನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡು ವಂತಾಗಬೇಕು ಎಂದು ಮೈಸೂರು ಹಿರಿಯ ಕಾರ್ಮಿಕ ನಿರೀಕ್ಷಕ ಜಯಣ್ಣ ಹೇಳಿದರು.

ಓಂ ಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಟನೆ ವತಿಯಿಂದ ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಗುರುತಿನ ಚೀಟಿ ಮತ್ತು ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಫಲಾನುಭವಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕಾರ್ಮಿಕ ಮಂಡಳಿಯಿAದ ವಿದ್ಯಾರ್ಥಿವೇತನ ಹಾಗೂ ವಿವಾಹ ಸಹಾಯಧನ ಹೆಚ್ಚಿಸಲಾಗಿದ್ದು, ಕೆಲಸ ಮಾಡುತ್ತಿರುವ ಸಂದರ್ಭ ಘಟನೆಗಳು ನಡೆದಲ್ಲಿ ಆಸ್ಪತ್ರೆಯ ಖರ್ಚು ಮತ್ತು ಇತರ ಸಹಾಯಧನ ನೀಡಲಾಗುವುದು ಆದ್ದರಿಂದ ಕಾರ್ಮಿಕರು ತಮ್ಮ ಗುರುತಿನ ಚೀಟಿಯನ್ನು ಪ್ರತಿವರ್ಷ ನವೀಕರಣ ಗೊಳಿಸುವ ಮೂಲಕ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದರು.

ಜಿಲ್ಲಾ ಕಾರ್ಮಿಕ ನಿರೀಕ್ಷಕ ಎಂ.ಎA. ಯತ್ನಟ್ಟಿ ಅವರು ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಕಾರ್ಮಿಕರು ಬರಿ ಅರ್ಜಿ ಸಲ್ಲಿಸಿದರೆ ಸಾಲದು, ಅದಕ್ಕೆ ಸರಿಯಾದ ದಾಖಲಾತಿಗಳನ್ನು ಒದಗಿಸಬೇಕು. ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆಯಿಂದ ೧೮ ವರ್ಷ ತುಂಬಿದ ಎಲ್ಲಾ ಯುವಕ-ಯುವತಿ ಯರು ಗುರುತಿನ ಚೀಟಿ ಪಡೆದು ಕೊಳ್ಳಬೇಕು. ವಿಶೇಷಚೇತನರು, ಅಸಂಘಟಿತ ವಲಯದಲ್ಲಿರುವ ಬಡ ಕುಟುಂಬದವರು ಉದ್ಯೋಗದ ಅವಶ್ಯವಿದ್ದಲ್ಲಿ ಇ-ಶ್ರಾಮ್ ಕಾರ್ಡ್ ಪಡೆದುಕೊಳ್ಳಬೇಕು. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ದುಶ್ಚಟಗಳನ್ನು ದೂರಮಾಡಿ ಮಕ್ಕಳ ಭವಿಷ್ಯದ ಕಡೆಗೆ ಗಮನಹರಿಸುವಂತಾಗಬೇಕು ಎಂದರು. ಸಭೆಯಲ್ಲಿ ಕಾರ್ಮಿಕ ನಿರೀಕ್ಷಕ ಎಂ.ಎA. ಯತ್ನಟ್ಟಿ ಮತ್ತು ಜಯಣ್ಣ ಅವರುಗಳಿಗೆ ಸನ್ಮಾನಿಸ ಲಾಯಿತು. ಓಂ ಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ. ಸೇದು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಪೆರಿಯಸ್ವಾಮಿ, ಸದಸ್ಯರಾದ ಕುರಿಯಾಕೊಸ್, ರಾಣಿ, ರಾದಕೃಷ್ಣ, ಕರ್ಣ, ರಾಮಕೃಷ್ಣ, ವಿಶ್ವನಾಥ್, ರಾಮದಾಸ್, ಉಪಸ್ಥಿತರಿದ್ದರು.