ಭಾರತೀಯ ವಾಯುಪಡೆಗೆ ಲಘು ಯುದ್ಧ ಹೆಲಿಕಾಪ್ಟರ್ 'ಪ್ರಚಂಡ' ಸೇರ್ಪಡೆ

ನವದೆಹಲಿ, ಅ. ೩: ದೇಶೀಯ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್‌ನ್ನು ಸೋಮವಾರ ಭಾರತೀಯ ವಾಯುಪಡೆಗೆ ಸೇರಿಸಲಾಗಿದೆ. ೧೯೯೯ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅದರ ಅಗತ್ಯವನ್ನು ಮನಗಂಡ ನಂತರ ಮೂಲಭೂತವಾಗಿ ಪರ್ವತ ಯುದ್ಧಕ್ಕಾಗಿ ಅಭಿವೃದ್ಧಿಪಡಿಸಲಾದ ಸ್ಥಳೀಯವಾಗಿ ನಿರ್ಮಿಸಲಾದ ಲಘು ಯುದ್ಧ ಹೆಲಿಕಾಪ್ಟರ್ ಇದಾಗಿದೆ. ಪ್ರಚಂಡ ಎಂದು ಇದಕ್ಕೆ ಹೆಸರಿಡಲಾಗಿದೆ. ಸರ್ಕಾರಿ-ಚಾಲಿತ ವಾಯುಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ೫.೮ ಟನ್ ತೂಕದ ಅವಳಿ-ಎಂಜಿನ್ ಗನ್‌ಶಿಪ್ ಹೆಲಿಕಾಪ್ಟರ್ ಗಾಳಿಯಿಂದ ಗಾಳಿಗೆ ಕ್ಷಿಪಣಿಗಳು, ೨೦ ಎಂಎA ಟರ್ರೆಟ್ ಗನ್‌ಗಳು, ರಾಕೆಟ್ ಸಿಸ್ಟಮ್‌ಗಳು ಮತ್ತು ಇತರ ಶಸ್ತಾçಸ್ತçಗಳನ್ನು ಹೊಂದಿ ಶಸ್ತçಸಜ್ಜಿತವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ಇತರ ಹಿರಿಯ ಮಿಲಿಟರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜೋಧ್‌ಪುರ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳನ್ನು ಐಎಎಫ್‌ಗೆ ಸೇರ್ಪಡೆಗೊಳಿಸಲಾಯಿತು.

ಫಲ ಕೊಡದ ಸತ್ಯ ನಾರಾಯಣ ಪೂಜೆ; ಅರ್ಚಕರಿಗೆ ಥಳಿತ

ಇಂದೋರ್, ಅ. ೩: ಮಧ್ಯಪ್ರದೇಶದ ಇಂದೋರ್‌ನಲ್ಲಿ ಅರ್ಚಕರೊಬ್ಬರು ಸತ್ಯನಾರಾಯಣ ಪೂಜೆಯ ಸಮಯದಲ್ಲಿ ಮಾಡಿದ ಧಾರ್ಮಿಕ ಕ್ರಿಯೆಗಳು ತಪ್ಪು ಫಲಿತಾಂಶಗಳಿಗೆ ಕಾರಣವಾಗಿವೆ ಎಂಬ ಶಂಕೆಯ ಮೇಲೆ ಅಪ್ಪ-ಮಗ ಅವರನ್ನು ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರಿಗೆ ಪೂಜೆಯನ್ನು ಆಯೋಜಿಸಿದ್ದವರು ಮತ್ತು ಅವರ ಇಬ್ಬರು ಪುತ್ರರು ಥಳಿಸಿದ್ದಾರೆ ಎಂದು ಚಂದನನಗರ ಪೊಲೀಸ್ ಠಾಣೆ ಪ್ರಭಾರಿ ಅಭಯ್ ನೇಮಾ ಪಿಟಿಐಗೆ ತಿಳಿಸಿದ್ದಾರೆ. ಇಲ್ಲಿನ ಸ್ಕೀಮ್ ನಂಬರ್ ೭೧ ರ ನಿವಾಸಿಗಳು ಗಾಯಗೊಂಡಿದ್ದ ಅರ್ಚಕರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಲಕ್ಷ್ಮಿಕಾಂತ್ ಶರ್ಮಾ ಅವರ ಮನೆಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಆಹ್ವಾನಿಸಲಾಯಿತು ಮತ್ತು ಕಾರ್ಯಕ್ರಮ ಮುಗಿದ ನಂತರ ನಾನು ಮನೆಗೆ ತೆರಳಿದೆ. ಆದರೆ, ತಡರಾತ್ರಿ ಲಕ್ಷ್ಮೀಕಾಂತ್ ಮತ್ತು ಅವರ ಪುತ್ರರಾದ ವಿಫುಲ್ ಹಾಗೂ ಅರುಣ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ೬೦ ವರ್ಷದ ಅರ್ಚಕರು ತಿಳಿಸಿದ್ದಾರೆ. ಅರ್ಚಕರು ತಪ್ಪಾದ ರೀತಿಯಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿದ ನಂತರ ಅರುಣ್ ವಿಲಕ್ಷಣವಾಗಿ ವರ್ತಿಸಲು ಪ್ರಾರಂಭಿಸಿದ ಎಂದು ದಾಳಿಕೋರರು ತಿಳಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

ಮೈಸೂರು, ಅ. ೩: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆಯ ಮೂರನೇ ದಿನವಾದ ಸೋಮವಾರ ಇಲ್ಲಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಗಾಂಧಿ ಅವರೊಂದಿಗೆ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಇದ್ದರು. ಚಾಮುಂಡೇಶ್ವರಿ ದೇವಿಯು ಮೈಸೂರು ರಾಜಮನೆತನ ಮತ್ತು ಹಲವಾರು ಶತಮಾನಗಳಿಂದ ಮೈಸೂರಿನ ಅಧಿದೇವತೆ. ದೇವಾಲಯಕ್ಕೆ ಭೇಟಿ ನೀಡಿದ ನಂತರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಧಾರ್ಮಿಕ ಸಾಮರಸ್ಯವು ಭಾರತದ ಶಾಂತಿಯುತ ಮತ್ತು ಪ್ರಗತಿಪರ ಭವಿಷ್ಯದ ಅಡಿಪಾಯವಾಗಿದೆ' ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಭಾಷಣ ಮಾಡಿದ್ದು ಸುದ್ದಿಯೇ ಅಲ್ಲ: ರಮ್ಯಾ!

ಬೆಂಗಳೂರು, ಅ. ೩: ಭಾರತ ಜೋಡೋ ಯಾತ್ರೆಯಲ್ಲಿ ಕೈ ನಾಯಕ ರಾಹುಲ್ ಭಾನುವಾರ ಜಡಿ ಮಳೆ ಸುರಿಯುತ್ತಿದ್ದರೂ ಭಾಷಣ ಮಾಡಿದ್ದರು. ಮಳೆಯನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ಮಳೆಯಲ್ಲಿಯೇ ಭಾಷಣ ಮಾಡುತ್ತಿರುವ ವೀಡಿಯೋವನ್ನು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ಶೇರ್ ಮಾಡಿಕೊಂಡು ಕ್ಯಾಪ್ಷನ್ ಕೊಟ್ಟಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ, ಆ ಜಡಿ ಮಳೆಯಲ್ಲಿಯೂ ಭಾಷಣ ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನಸೆಳೆದಿದೆ ಎಂದು ಹೇಳುವ ಮೂಲಕ ರಮ್ಯಾ ಅವರು ಕೈ ನಾಯಕನನ್ನು ಹಾಡಿ ಹೊಗಳಿದ್ದಾರೆ.

ದುರ್ಗಾಪೂಜೆ ಆರತಿ ಮಾಡುತ್ತಿರುವಾಗ ಪೆಂಡಾಲ್‌ಗೆ ಬೆಂಕಿ; ಮೂವರ ದುರ್ಮರಣ

ಭದೋಹಿ, ಅ. ೩: ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯ ಔರಾಯ್ ಪಟ್ಟಣದಲ್ಲಿ ಹಾಕಲಾಗಿದ್ದ ದುರ್ಗಾ ಪೂಜೆ ಪೆಂಡಾಲ್‌ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದು, ಸುಮಾರು ೬೦ ಮಂದಿ ಗಾಯಗೊಂಡಿದ್ದಾರೆ. ರಾತ್ರಿ ೯.೩೦ರ ಸುಮಾರಿಗೆ ಆರತಿ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಸುಮಾರು ೩೦೦ ರಿಂದ ೪೦೦ ಮಂದಿ ಪೆಂಡಾಲ್ ಕೆಳಗಿದ್ದರು. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ‍್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಕಾಣಿಸುತ್ತದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಖನೌದಿಂದ ೨೮೦ ಕಿಮೀ ದೂರದಲ್ಲಿರುವ ಈ ಪಟ್ಟಣದಲ್ಲಿ ನವರಾತ್ರಿ ಪ್ರಾರಂಭವಾದಾಗಿನಿAದಲೂ ದುರ್ಗಾ ಪೂಜೆ ನಡೆಸಲಾಗುತ್ತಿತ್ತು. ದೊಡ್ಡ ಪೆಂಡಾಲ್ ಹಾಕಿ, ದುರ್ಗಾ ದೇವಿ ವಿಗ್ರಹ ಇಟ್ಟು ಪೂಜೆ, ಆರತಿ ನಡೆಸಲಾಗುತ್ತಿತ್ತು. ಹಾಗೇ ಅ.೨ ರಂದೂ ಅಲ್ಲಿ ಸುಮಾರು ೧೫೦ ಮಂದಿ ಸೇರಿದ್ದರು. ಸಪ್ತಮಿ ದಿನವಾಗಿದ್ದರಿಂದ ಕಾಳರಾತ್ರಿ ದೇವಿ ಪೂಜೆ ಅದ್ದೂರಿಯಾಗಿಯೇ ನಡೆದಿತ್ತು. ಕೊನೆಯಲ್ಲಿ ಆರತಿ ಮಾಡುವಾಗ ಪೆಂಡಾಲ್‌ಗೆ ಬೆಂಕಿ ತಗುಲಿದೆ. ಈ ಅವಘಡದಲ್ಲಿ ೧೨ ವರ್ಷದ ಅಂಕುಶ್ ಸೋನಿ ಮತ್ತು ೧೦ ವರ್ಷದ ನವೀನ್ ಕುಮಾರ್, ೪೭ವರ್ಷದ ಜಯಾ ದೇವಿ ಸಾವನ್ನಪ್ಪಿದ್ದಾರೆ. ಸುಮಾರು ೬೦ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ ೨೨ ಜನರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ಗೌರಾಂಗ್ ರಾಠಿ ಮಾಹಿತಿ ನೀಡಿದ್ದಾರೆ.

ಡ್ಯಾನ್ಸ್ ಮಾಡುತ್ತಿರುವಾಗಲೆ ವ್ಯಕ್ತಿ ಸಾವು : ಆಘಾತದಿಂದ ತಂದೆಯೂ ನಿಧನ!

ಪಾಲ್ಘರ್, ಅ. ೩: ಮನುಷ್ಯನ ಬದುಕಲ್ಲಿ ವಿಧಿಯಾಟ ಹೇಗಿರುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಇದು ಅಂಥದ್ದೇ ನೋವಿನ ಘಟನೆ. ಮಹಾರಾಷ್ಟçದ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ೩೫ ವರ್ಷದ ವ್ಯಕ್ತಿಯೊಬ್ಬರು ನೃತ್ಯ ಮಾಡುವಾಗಲೇ ಸಾವನ್ನಪ್ಪಿದ್ದು, ಬಳಿಕ ಅವರ ತಂದೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿ ವಿರಾರ್‌ನ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್ನಲ್ಲಿ ನಡೆದ ಗಾರ್ಭಾ ಕಾರ್ಯಕ್ರಮವೊಂದರಲ್ಲಿ ಮನೀಶ್ ನಾರಾಪ್ಜಿ ಸೋನಿಗ್ರಾ ಅವರು ನೃತ್ಯ ಮಾಡುವಾಗ ಕುಸಿದು ಬಿದ್ದಿದ್ದರು. ಆ ವ್ಯಕ್ತಿಯನ್ನು ಅವರ ತಂದೆ ನಾರಾಪ್ಜಿ ಸೋನಿಗ್ರಾ (೬೬) ಅವರು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿ ತಮ್ಮ ಮಗನ ಸಾವಿನ ಸುದ್ದಿ ತಿಳಿದ ಕೂಡಲೇ ಆಘಾತದಿಂದ ಅವರೂ ಕೂಡ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.