ಮಡಿಕೇರಿ, ಅ. ೨: ಚಿತ್ರರಂಗದ ತಾರೆಯರ ಸಮಾಗಮ, ಮನತಣಿಸಿದ ನೃತ್ಯಗಳು, ರ‍್ಯಾಪ್’, ‘ಡಿಜೆ’ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದ ಜನತೆ..

ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಕಿಂಬರ್ಲಿ ರಿಕ್ರಿಯೇಷನ್ಸ್ ವತಿಯಿಂದ ದಸರಾ ಅಂಗವಾಗಿ ಆಯೋಜಿಸಿದ್ದ ‘ಯುವಕಲೋತ್ಸವ ೨೦೨೨’ ರಲ್ಲಿ ಸಾವಿರಾರು ಮಂದಿ ಸಾಕ್ಷಿಯಾದರು. ಜಿಟಿಜಿಟಿ ಮಳೆ, ಮಂಜಿನ ವಾತಾವರಣ, ಮೈಕೊರೆಯುವ ಚಳಿಯ ನಡುವೆಯೂ ಜನರು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯತ್ತ ಬಂದು ಕಲೋತ್ಸವವನ್ನು ಸವಿದರು.

ಸಿನಿ ತಾರೆಯರ ದಂಡು

ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ಸಿನಿ ತಾರೆಯರು ಯುವಕಲೋತ್ಸವಕ್ಕೆ ಆಗಮಿಸಿ ಜನರನ್ನು ರಂಜಿಸಿದರು. ಕನ್ನಡ ಸಿನಿಮಾ, ಧಾರವಾಹಿ ನಟರನ್ನು ಜನರು ಕಣ್ತುಂಬಿಕೊAಡರು.

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ಗಾಯಕ ವಸಿಷ್ಠ ಸಿಂಹ ತಮ್ಮ ಹಾಡು, ಡೈಲಾಗ್ ಮೂಲಕ ಜನರ ಉತ್ಸಾಹವನ್ನು ದುಪ್ಪಟ್ಟುಗೊಳಿಸಿದರು. ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ‘ಬೊಂಬೆ ಹೇಳುತೈತೆ’ ಹಾಡು ಹಾಡಿ ಅವರನ್ನು ಸ್ಮರಿಸಿ ಭಾವುಕರಾದರು. ವಸಿಷ್ಠ ವೇದಿಕೆಯಲ್ಲಿದ್ದ ಸಂದರ್ಭ ಜನರು ‘ಚಿಟ್ಟೆ.. ಚಿಟ್ಟೆ’ ಎಂದು ಕಿರುಚುತ್ತ ಅಭಿಮಾನ ತೋರಿದರು.

ಕೆಜಿಎಫ್ ಖ್ಯಾತಿಯ ಕೂತಂಡ ತಾರಕ್ ಪೊನ್ನಪ್ಪ, ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್, ಉದಯೋನ್ಮುಖ ಕಲಾವಿದರುಗಳಾದ ಇಟ್ಟೀರ ಪಾಯಲ್ ಚಂಗಪ್ಪ, ತಪಸ್ವಿನಿ ಪೂಣಚ್ಚ, ತೇಜಸ್ವಿನಿ ಶರ್ಮ, ಕ್ರಿಕೆಟಿಗ ನೆರವಂಡ ಅಯ್ಯಪ್ಪ, ಅವರ ಪತ್ನಿ ಅನು ಅಯ್ಯಪ್ಪ, ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ರಘು ಗೌಡ, ಸಂಗೀತ ನಿರ್ದೇಶಕ, ಗಾಯಕ ಉದಿತ್ ಹರಿತಾಸ್ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು.

ನಟರು ತಮ್ಮ ಖ್ಯಾತ ಸಂಭಾಷಣೆ ಮೂಲಕ ರಂಜಿಸಿದರೆ, ರಘು ಗೌಡ ಹಾಗೂ ಚಂದನ್ ಆಚಾರ್ ತಮ್ಮ ಗಾಯನದ ಮೂಲಕ ಜನರನ್ನು ಆಕರ್ಷಿಸಿದರು.

ಇದರೊಂದಿಗೆ ಬೆಂಗಳೂರು ಹಾಗೂ ಕೊಡಗು ಜಿಲ್ಲೆಯ ರ‍್ಯಾಪರ್’ಗಳು ತಮ್ಮ ವೇಗದ ಹಾಡಿನ ಮೂಲಕ

(ಮೊದಲ ಪುಟದಿಂದ) ಯುವಜನತೆಯ ಸಂಭ್ರಮಕ್ಕೆ ಕಿಚ್ಚು ಹಚ್ಚಿದರು. ಮಂಗಳೂರಿನ ಸೆಗಿನ್ ತನ್ನ ಡಿಜೆ ಮೂಲಕ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

‘ಯೂತ್ ಐಕಾನ್’ ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಯುವಕ - ಯುವತಿರಿಗೆ ಯುವ ಕಲೋತ್ಸವ ಪ್ರಯುಕ್ತ ಕಿಂಬರ್ಲಿ ರಿಕ್ರಿಯೆಶನ್ಸ್ ವತಿಯಿಂದ ‘ಯೂತ್ ಐಕಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಂತರರಾಷ್ಟಿçÃಯ ಸ್ಕೀಯಿಂಗ್ ಪಟು ನಾಪೋಕ್ಲು ನಿವಾಸಿ ತೆಕ್ಕಡ ನಂಜುAಡ ಶಂಬು ಹಾಗೂ ತೆಕ್ಕಡ ಪಾರ್ವತಿ ದಂಪತಿಯ ಪುತ್ರಿ ತೆಕ್ಕಡ ಭವಾನಿ ನಂಜುAಡ, ಅಂತರರಾಷ್ಟಿçÃಯ ಕರಾಟೆ ಪಟು ಸೋಮವಾರಪೇಟೆಯ ತಿಮ್ಮಯ್ಯ ಹಾಗೂ ಮಿನು ದಂಪತಿಯ ಪುತ್ರಿ ಅಂಕಿತ ಬಿ.ಟಿ, ರಾಷ್ಟಿçÃಯ ಮೋಟೋ-ಡಿಚಿಟಟಥಿಯಲ್ಲಿ ಸಾಧನೆ ಮಾಡಿರುವ ಮೇಕೇರಿಯ ಬಿ.ಎನ್ ರತ್ನಾಕರ್ ರೈ ಹಾಗೂ ನಮಿತಾ ಆರ್.ರೈ ಪುತ್ರ ಅಭಿನ್ ರೈ, ಮೈಂಡ್ ಆ್ಯಂಡ್ ಮ್ಯಾಟರ್ ಸಂಸ್ಥೆಯನ್ನು ಸ್ಥಾಪಿಸಿ ಸಮಾಜ ಸೇವೆ ಮಾಡುತ್ತಿರುವ ಮಡಿಕೇರಿಯ ಮುಂಡೋಟೀರ ಅಪ್ಪಯ್ಯ ಹಾಗೂ ರಾಣಿ ಅಪ್ಪಯ್ಯ ಅವರ ಪುತ್ರಿ, ಮಚ್ಚಾರಂಡ ಮೇಜರ್ ಮಂದಣ್ಣ ಅವರ ಪತ್ನಿ ದೀಪಿಕಾ ಅಪ್ಪಯ್ಯ,