ಫುಟ್‌ಬಾಲ್ ಪಂದ್ಯದ ವೇಳೆ

ಗಲಭೆ-ಕಾಲ್ತುಳಿತದಿಂದ ಸಾವು-ನೋವು

ಜಕಾರ್ತ, ಅ. ೨: ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೧೭೦ಕ್ಕೇರಿದೆ. ಆಕ್ರೋಶಗೊಂಡ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಇದರಿಂದ ಕಾಲ್ತುಳಿತ ಉಂಟಾಯಿತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ೯.೩೦ಕ್ಕೆ ಸಾವಿನ ಸಂಖ್ಯೆ ೧೫೮ ಆಗಿತ್ತು. ನಂತರ ೧೦.೩೦ಕ್ಕೆ ಸಾವಿನ ಸಂಖ್ಯೆ ೧೭೦ಕ್ಕೆ ಏರಿದೆ. ಇದು ಪೂರ್ವ ಜಾವಾ ವಿಪತ್ತು ತಗ್ಗಿಸುವ ಸಂಸ್ಥೆ ಸಂಗ್ರಹಿಸಿದ ಡೇಟಾ ಎಂದು ಪೂರ್ವ ಜಾವಾ ಡೆಪ್ಯೂಟಿ ಗವರ್ನರ್ ಎಮಿಲ್ ದರ್ಡಾಕ್ ತಿಳಿಸಿದ್ದಾರೆ. ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ ೧೮ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ವಿಶ್ವದ ಅತ್ಯಂತ ಮಾರಣಾಂತಿಕ ಕ್ರೀಡಾಂಗಣದ ದುರಂತಗಳಲ್ಲಿ ಒಂದಾಗಿದೆ. ಇಂಡೋನೇಷ್ಯಾದ ಟಾಪ್ ಲೀಗ್ ಪಂದ್ಯದಲ್ಲಿ ಪರ್ಸೆಬಯಾ ತಂಡ ೩-೨ ರಿಂದ ಗೆದ್ದ ನಂತರ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಇಂಡೋನೇಷ್ಯಾದಲ್ಲಿ ಒಂದು ವಾರಗಳ ಕಾಲ ಆಟಗಳನ್ನು ಸ್ಥಗಿತಗೊಳಿಸಿ ತನಿಖೆ ಪ್ರಾರಂಭಿಸಲಾಗಿದೆ ಎಂದು ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ ತಿಳಿಸಿದೆ. ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಬೆಂಬಲಿಗರು ಪಿಚ್‌ಗೆ ನುಗ್ಗಿ ಗಲಾಟೆ ಮಾಡಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಅಭಿಮಾನಿಗಳು ಪಿಚ್‌ಗೆ ಇಳಿಯುತ್ತಿದ್ದಂತೆ ಪೊಲೀಸರು ಅಶ್ರುವಾಯು ಬಳಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಆದರೂ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ ೧೭೦ ಜನ ಮೃತಪಟ್ಟಿದ್ದಾರೆ.

ಚಂಡಮಾರುತದ ಆರ್ಭಟಕ್ಕೆ ೪೮ ಮಂದಿ ಸಾವು

ವಾಷಿಂಗ್ಟನ್, ಅ. ೨: ದೈತ್ಯಾಕಾರದ ಇಯಾನ್ ಚಂಡಮಾರುತದ ಆರ್ಭಟಕ್ಕೆ ಅಮೇರಿಕಾದ ಅನೇಕ ರಾಜ್ಯಗಳು ಅಕ್ಷರಶಃ ನಲುಗಿಹೋಗಿವೆ. ನೈಋತ್ಯ ಕರಾವಳಿಯಿಂದ ಕೆರೊಲಿನಾದವರೆಗೆ ತೀವ್ರ ಅನಾಹುತ ಸೃಷ್ಟಿಸಿದ್ದು, ಸಾವಿರಾರು ಜನರು ಇನ್ನೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಸದ್ಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಫ್ಲೋರಿಡಾದಲ್ಲಿನ ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಇಯಾನ್ ಚಂಡಮಾರುತವು ಅಮೇರಿಕಾದಲ್ಲಿ ವಿಪರೀತ ಹಾನಿ ಉಂಟುಮಾಡಿರುವ ಚಂಡಮಾರುತಗಳಲ್ಲಿ ಒಂದೆನಿಸಿದ್ದು, ಫ್ಲೋರಿಡಾದಲ್ಲಿ ಸುಮಾರು ೪೮ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಸ್ತೆಗಳು, ದ್ವೀಪ ರಾಜ್ಯಗಳಿಗೆ ತಡೆಗೋಡೆಗಳಾಗಿ ನಿರ್ಮಿಸಿದ್ದ ಸೇತುವೆಗಳು ಪ್ರವಾಹಕ್ಕೆ ಸಿಲುಕಿವೆ. ಹೀಗಾಗಿ ಸೀಮಿತ ಟೆಲಿಫೋನ್ ಸೇವೆ, ನೀರು, ವಿದ್ಯುತ್ ಮತ್ತು ಇಂಟರ್ನೆಟ್‌ನAತಹ ಮೂಲಭೂತ ಸೌಕರ್ಯಗಳ ಕೊರತೆಯು ತಲೆದೋರಿದೆ.

ಪೊಲೀಸ್ ಕಸ್ಟಡಿಯಿಂದ ಗ್ಯಾಂಗ್‌ಸ್ಟರ್ ಪರಾರಿ

ಚಂಡೀಗಢ, ಅ. ೨: ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು ಎಂಬಾತ ಶನಿವಾರ ರಾತ್ರಿ ಪಂಜಾಬ್‌ನ ಮಾನ್ಸಾ ಜಿಲ್ಲೆಯ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಮತ್ತೊಂದು ಪ್ರಕರಣದಲ್ಲಿ ದೀಪಕ್ ಟಿನುವನ್ನು ಮಾನ್ಸಾ ಪೊಲೀಸರು ‘ಪ್ರೊಡಕ್ಷನ್ ವಾರಂಟ್’ ಮೇಲೆ ಗೋಯಿಂದ್‌ವಾಲ್ ಸಾಹಿಬ್ ಜೈಲಿನಿಂದ ಕರೆತರುವಾಗ ಶನಿವಾರ ರಾತ್ರಿ ಆತ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀಪಕ್ ಟಿನು, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತನಾಗಿದ್ದು, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಆರೋಪಿಯೂ ಆಗಿದ್ದಾನೆ.

ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಭಯೋತ್ಪಾದಕನ ಹತ್ಯೆ

ಶ್ರೀನಗರ, ಅ. ೨: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಉಗ್ರನನ್ನು ಶೋಪಿಯಾನ್‌ನ ನೌಪೋರಾ ಪ್ರದೇಶದ ನಸೀರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ ದಕ್ಷಿಣ ಕಾಶ್ಮೀರ ಜಿಲ್ಲೆಯ ಬಾಸ್ಕುಚಾನ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ನಿರ್ದಿಷ್ಟ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಸುತ್ತುವರಿದಿದ್ದರು ಮತ್ತು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಪಡೆಗಳು ಶೋಧ ನಡೆಸುತ್ತಿದ್ದಂತೆಯೇ ಭಯೋತ್ಪಾದಕರು ಏಕಾಏಕಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿ ಮತ್ತು ಎನ್‌ಕೌಂಟರ್‌ನಲ್ಲಿ ಸ್ಥಳೀಯ ಎಲ್‌ಇಟಿ ಉಗ್ರನ ಹತ್ಯೆಯಾಗಿದೆ. 'ಹತ್ಯೆಗೀಡಾದ ಭಯೋತ್ಪಾದಕನನ್ನು ಶೋಪಿಯಾನ್‌ನ ನೌಪೋರಾ ಪ್ರದೇಶದ ನಸೀರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಈತ ಎಲ್‌ಇಟಿ ಭಯೋತ್ಪಾದಕ ಸಂಘಟನೆಯೊAದಿಗೆ ಸಂಪರ್ಕ ಹೊಂದಿದ್ದ. ಎಕೆ ರೈಫಲ್ ಸೇರಿ ಶಸ್ತಾçಸ್ತçಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು, ಅ. ೨: ನೈರುತ್ಯ ಮುಂಗಾರು ಹಿಂದಿರುಗುವುದರೊAದಿಗೆ ವಿವಿಧ ಹವಾಮಾನ ವ್ಯವಸ್ಥೆಗಳಿಂದಾಗಿ ಮುಂದಿನ ಐದು ದಿನಗಳ ಕಾಲ ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲ. ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವುದರೊAದಿಗೆ ಅಕ್ಟೋಬರ್‌ನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿ ಮತ್ತು ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದೆ. ಇದರಿಂದಾಗಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಪುಲ್ವಾಮಾದಲ್ಲಿ ಉಗ್ರರ ದಾಳಿ : ಓರ್ವ ಪೊಲೀಸ್ ಹುತಾತ್ಮ

ಪುಲ್ವಾಮಾ, ಅ. ೨: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡದ ಮೇಲೆ ಭಾನುವಾರ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕರ್ತವ್ಯದಲ್ಲಿದ್ದ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದು, ಭದ್ರತಾ ಪಡೆಗಳಿಗೆ ಸಹಾಯ ಮಾಡಲು ಹೆಚ್ಚಿನ ಪಡೆ ಕಳುಹಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಪುಲ್ವಾಮಾದ ಪಿಂಗ್ಲಾನಾದಲ್ಲಿ ಸಿಆರ್‌ಪಿಎಫ್ ಮತ್ತು ಪೊಲೀಸರ ಜಂಟಿ ನಾಕಾಬಂಧಿ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಈ ಭಯೋತ್ಪಾದಕ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದು, ಓರ್ವ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೋಯಿಬಾ(ಎಲ್‌ಇಟಿ)ಗೆ ಸಂಬAಧಿಸಿದ ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ.

ರೂ. ೩೪ ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

ಮುಂಬೈ, ಅ. ೨: ಛತ್ರಪತಿ ಶಿವಾಜಿ ಮಹಾರಾಜ್ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದ ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಭಾನುವಾರ ೫ ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಅಂದಾಜು ರೂ. ೩೪ ಕೋಟಿ ಎನ್ನಲಾಗಿದೆ. ವಿಮಾನ ನಿಲ್ದಾಣದ ಟ್ರಾಲಿ ಬ್ಯಾಗ್‌ನೊಳಗೆ ಹೆರಾಯಿನ್ ಪತ್ತೆಯಾಗಿದೆ. ಹೆರಾಯಿನ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ೩೪.೭೯ ಕೋಟಿ ರೂಪಾಯಿ ಮೌಲ್ಯದ ೪೯೭೦ ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಒಬ್ಬ ಪ್ರಯಾಣಿಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಟ್ರಾಲಿ ಬ್ಯಾಗ್‌ನೊಳಗೆ ವಿಶೇಷವಾಗಿ ತಯಾರಿಸಿದ ಕುಳಿಯಲ್ಲಿ ನಿಷೇಧಿತ ಹೆರಾಯಿನ್ ಪತ್ತೆಯಾಗಿದೆ ಎಂದು ಮುಂಬೈ ಕಸ್ಟಮ್ಸ್ ವಲಯ ಭಾನುವಾರ ಟ್ವಿಟ್ ಮಾಡಿದೆ.