ಕುಶಾಲನಗರ, ಅ. ೩: ಕುಶಾಲನಗರ ಶ್ರೀ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ತಾ. ೫ ರಿಂದ ೨ ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಯಿ ಬಾಬಾ ಅವರ ೧೦೪ ನೇ ಪುಣ್ಯಸ್ಮರಣೆ ಮತ್ತು ಸಾಯಿ ದೇವಾಲಯ ೫ ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ತಾ. ೫ ರಂದು ೫.೩೦ಕ್ಕೆ ಗಣಪತಿ ಹೋಮ, ೬.೩೦ಕ್ಕೆ ಕಾಕಡ ಆರತಿ ನಂತರ ಅಭಿಷೇಕ, ಮಹಾ ಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ , ತಾ. ೬ ರಂದು ಬೆಳಗ್ಗೆ ೬.೩೦ ರಿಂದ ಆರತಿ, ಅಭಿಷೇಕ, ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ದೇವಸ್ಥಾನಕ್ಕೆ ಅನ್ನಸಂತರ್ಪಣೆಗೆ ವಸ್ತುಗಳು ಮತ್ತು ತನು, ಮನ ಸಹಾಯ ನೀಡುವಂತೆ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ.