ಮಡಿಕೇರಿ, ಅ. ೨: ಕಾಮೆಯಂಡ ಮುತ್ತಣ್ಣ ನಾಡು ಕಂಡ ಅಪ್ರತಿಮ ಶಿಲ್ಪ ಕಲಾವಿದರಾಗಿದ್ದು, ಅವರ ಸಂಸ್ಮರಣಾ ಕಾರ್ಯಕ್ರಮದ ಮೂಲಕ ಕಲಾವಿದನನ್ನು ಮತ್ತಷ್ಟು ಅರಿಯಲು ಸಾಧ್ಯವಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಡಾ. ಪಾರ್ವತಿ ಅಪ್ಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಕೊಡಗಿನ ಆದ್ಯ ಶಿಲ್ಪಿ ಕಾಮೆಯಂಡ ಮುತ್ತಣ್ಣ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಇದುವರೆಗೂ ಎಲೆಮರೆ ಕಾಯಿಯಂತಿದ್ದ ಶಿಲ್ಪಕಲಾವಿದ ಕಾಮೆಯಂಡ ದಿ. ಮುತ್ತಣ್ಣ ಅವರನ್ನು ಕೊಡವ ಸಾಹಿತ್ಯ ಅಕಾಡೆಮಿ ನಾಡಿಗೆ ಪರಿಚಯಿಸುವಂತಹ ಉತ್ತಮ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಐಮಂಡ ಗೋಪಾಲ್ ಸೋಮಯ್ಯ ನಿರ್ದೇಶನದ ಕಾಮೆಯಂಡ ಮುತ್ತಣ್ಣ ಅವರ ೧೫ ನಿಮಿಷಗಳ ಸಾಕ್ಷö್ಯ ಚಿತ್ರ ಪ್ರದರ್ಶಿಸಲಾಯಿತು. ಮುತ್ತಣ್ಣ ಅವರಿಂದ ಪ್ರೇರಣೆ ಪಡೆದು ಕಲಾವಿದನಾದ ಅವರ ವಿದ್ಯಾರ್ಥಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ರಾಮ್ ಗೌತಮ್, ಚಿತ್ರಕಲಾವಿದ ಐಮಂಡ ರೂಪೇಶ್ ನಾಣಯ್ಯ, ಕಾಮೆಯಂಡ ಮುತ್ತಣ್ಣ ಅವರ ಪುತ್ರರಾದ ಕಾಮೆಯಂಡ ಕರುಂಬಯ್ಯ ಮತ್ತು ಹರೀಶ್ ಭೀಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟೀರ ಗಿರೀಶ್ ಸ್ವಾಗತಿಸಿದರೆ, ಮಾಚಿಮಾಡ ಜಾನಕಿ ಪ್ರಾರ್ಥಿಸಿ ಸದಸ್ಯೆ ಬಬ್ಬೀರ ಸರಸ್ವತಿ ವಂದಿಸಿದರೆ. ಅಕಾಡೆಮಿ ಸದಸ್ಯ ಪ್ರಭುಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.