ಕುಶಾಲನಗರ, ಅ. ೧: ಕುಶಾಲನಗರ ಪಟ್ಟಣವನ್ನು ಅಪರಾಧ ಮುಕ್ತ ಪಟ್ಟಣವನ್ನಾಗಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಅಧೀಕ್ಷಕ ಆರ್. ಗಂಗಾಧರಪ್ಪ ತಿಳಿಸಿದ್ದಾರೆ. ಅವರು, ಕುಶಾಲನಗರ ಪೊಲೀಸ್ ವಿಶ್ರಾಂತಿಗೃಹದಲ್ಲಿ ನಾಗರೀಕ ಕುಂದು ಕೊರತೆಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಪೊಲೀಸರ ಮೇಲೆ ಹೆಚ್ಚಿನಒತ್ತಡ ನೀಡದೆ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.
ಕುಶಾಲನಗರ ಪಟ್ಟಣದಲ್ಲಿ ವಾಹನ ನಿಲುಗಡೆ ಅವ್ಯವಸ್ಥೆ, ಶಾಲಾ ಕಾಲೇಜುಗಳಲ್ಲಿ ಗಾಂಜಾ ಸರಬರಾಜು, ಹೊರರಾಜ್ಯದ ಅಪರಿಚಿತ ಕಾರ್ಮಿಕರ ಸಮಸ್ಯೆ, ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿಆಟೋ ನಿಲ್ದಾಣ ಮತ್ತು ಅಸಮರ್ಪಕ ವಾಹನ ನಿಲುಗಡೆಗÀಳ ಸಮಸ್ಯೆ, ಸ್ಥಳೀಯ ಫಾತಿಮಾ ಕಾನ್ವೆಂಟ್ ಶಾಲೆಗೆ ಬರುವ ಮತ್ತು ಹಿಂತಿರುಗುವ ಸಂದರ್ಭ ಸಾವಿರಾರು ವಿದ್ಯಾರ್ಥಿಗಳಿಗೆ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗುವ ಸಮಸ್ಯೆ ಸೇರಿದಂತೆ ನಿತ್ಯ ನಡೆಯುವ ಅಪರಾಧಗಳ ಬಗ್ಗೆ ನಾಗರಿಕರು ಸಭೆಯ ಗಮನಕ್ಕೆ ತಂದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಣಕ್ಕೆ ಪೋಷಕರು ಹೆಚ್ಚಿನ ನಿಗಾವಹಿಸಬೇಕಾಗಿದೆ. ಈ ಮೂಲಕ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಡಿವೈಎಸ್‌ಪಿ ಗಂಗಾಧರಪ್ಪ ಹೇಳಿದರು.
ಪ್ರತಿ ತಿಂಗಳ ಮೂರನೇ ಶನಿವಾರ ಪಟ್ಟಣದ ನಾಗರೀಕರ ಕುಂದು ಕೊರತೆಗಳ ಬಗ್ಗೆ ಮತ್ತು ಮೂರನೇ ಭಾನುವಾರ ಪರಿಶಿಷ್ಟ ಜಾತಿ- ಪಂಗಡ ಸಮುದಾಯದ ಕುಂದು ಕೊರತೆ ಚರ್ಚಿಸುವುದರೊಂದಿಗೆ ನಾಗರೀಕರ ಸಮಿತಿ ಪಟ್ಟಣದ ಸಂಘ ಸಂಸ್ಥೆಗಳ ಪ್ರಮುಖರನ್ನು ಕರೆದು ಚರ್ಚಿಸುವ ಮೂಲಕ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಒದಗಿಸಲಾಗುವುದು ಎಂದರು. ಕುಶಾಲನಗರ ಪಟ್ಟಣಠಾಣೆ ಮತ್ತು ಸಂಚಾರಿ ಠಾಣೆಗಳು ವಿಲೀನಗೊಳ್ಳುವುದರೊಂದಿಗೆ ಪ್ರತ್ಯೇಕ ಪೊಲೀಸ್ ಇನ್ಸ್ಪೆಕ್ಟರ್ ನೇಮಕ ಮತ್ತು ೪ ಮಂದಿ ಉಪ ನಿರೀಕ್ಷರ ನಿಯೋಜನೆ ಸಧ್ಯದಲ್ಲೇ ಆಗಲಿದೆ ಎಂದರು. ಈ ಸಂದರ್ಭ ಮಾತನಾಡಿದ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ ಮಹೇಶ್ ಶಾಲಾ ಕಾಲೇಜುಗಳಲ್ಲಿ ದುಶ್ಚಟಗಳ ಬಗ್ಗೆ ಅರಿವು ಜಾಗೃತಿ ಮೂಡಿಸುವ ಸಂಬAಧ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರಲ್ಲದೇ ಪಟ್ಟಣದ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತದೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುವುದು ಎಂದರು.
ಕುಶಾಲನಗರದಲ್ಲಿ ನಡೆದ ಕೆಲವು ವಂಚನೆ ಪ್ರಕರಣಗಳನ್ನು ತಕ್ಷಣ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಲಕ್ಷಾಂತರ ಮೌಲ್ಯದ ನಗದನ್ನು ವಶಪಡಿಸಿ ಕೊಂಡ ಕುಶಾಲನಗರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕಾರ್ಯ ವೈಖರಿಯ ಬಗ್ಗೆ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಕುಶಾಲ ನಗರ ಪೊಲೀಸ್ ಠಾಣಾಧಿಕಾರಿ ಎಂ.ಡಿ. ಅಪ್ಪಾಜಿ, ಪ್ರೊ. ಪಿಎಸ್‌ಐ ಕಾಶಿನಾಥ ಬಗಲಿ, ಸಂಚಾರಿ ಠಾಣಾಧಿಕಾರಿ ಹೆಚ್.ಜೆ. ಚಂದ್ರಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಮೃತ್‌ರಾಜ್, ಎಂ.ಬಿ. ಸುರೇಶ್, ಜಗದೀಶ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.