ಕುಶಾಲನಗರ, ಅ. ೧: ಅರಣ್ಯ ಇಲಾಖೆಯ ಕಾರ್ಯಪಡೆ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ. ಸಿಂಗ್ ಮತ್ತು ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ ಅವರುಗಳು ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾವೇರಿ ನದಿ ತಟದಲ್ಲಿ ಅಳವಡಿಸಿರುವ ಸೋಲಾರ್ ಬೇಲಿ ಮತ್ತುರೈಲ್ವೆ ಬ್ಯಾರಿಕೇಡ್‌ಗಳ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾರಂಗಿ ವೃಕ್ಷೆÆÃಧ್ಯಾನ ಮತ್ತು ನೂತನವಾಗಿ ಪ್ರಾರಂಭಗೊಳ್ಳಲಿರುವ ಹಾರಂಗಿ ಸಾಕಾನೆ ಶಿಬಿರದ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಕೂಡಲೇ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭ ಕೊಡಗು ಅರಣ್ಯ ವೃತ್ತದ ಸಂರಕ್ಷಣಾಧಿಕಾರಿ ಮೂರ್ತಿ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ ಪೂವಯ್ಯ, ವೀರಾಜಪೇಟೆ ಉಪ ವಿಭಾಗದ ಚಕ್ರಪಾಣಿ, ವನ್ಯಜೀವಿ ವಿಭಾಗದ ಶಿವರಾಮ್ ಬಾಬು, ಸ್ಥಳೀಯ ಅಧಿಕಾರಿಗಳಾದ ಶಿವರಾಮ್ ಮತ್ತಿತರರು ಇದ್ದರು.