ಚೆಟ್ಟಳ್ಳಿ, ಅ. ೧: ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಪ್ರಯುಕ್ತ ತಾ. ೨ ರಂದು (ಇಂದು) ಪೂರ್ವಾಹ್ನ ೧೧ ಗಂಟೆಗೆ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಚೆಟ್ಟಳ್ಳಿ ಗ್ರಾಮಸ್ಥರಿಗೆ ಹಾಗೂ ಶಿಬಿರಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ ನಡೆಯಲಿದೆ.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲ ಕಂಠಿ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು ಮಡಿಕೇರಿ ರೋಟರಿ ಮಿಸ್ಸಿ ಹಿಲ್ಸ್ನ ಅಧ್ಯಕ್ಷ ರೋ.ಪ್ರಸಾದ್ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯರಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ನೇತ್ರ ತಜ್ಞರಾದ ರೋ.ಡಾ. ಪ್ರಶಾಂತ್ ಸಿ.ಆರ್. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸರಸ್ವತಿ, ತಂಗಮ್ಮ, ಶ್ರೀಮತಿ ಚೆನ್ನಮ್ಮ ಪ.ಪೂ. ಕಾಲೇಜಿನ ಉಪನ್ಯಾಸಕರಾದ ರಮ್ಯ ಎಂ.ಎಸ್, ಚೆಟ್ಟಳ್ಳಿ ಪ್ರಾ.ಕ್ರ.ಪ.ಸ. ಸಂಘ ಸದಸ್ಯ ಧನಂಜಯ, ನಂಜಪ್ಪ ಭಾಗವಹಿಸಲಿದ್ದಾರೆ.