ಮಡಿಕೇರಿ, ಅ. ೧: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜನಕ ದಿವಂಗತ ಪಾಂಡAಡ ಎಂ. ಕುಟ್ಟಪ್ಪ ಅವರ ಸ್ಮರಣಾರ್ಥವಾಗಿ ಕೊಡವ ಹಾಕಿ ಅಕಾಡೆಮಿ ಆಯೋಜಿಸುತ್ತಿರುವ ೫ಂ ಸೈಡ್ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ತಂಡದ ಹೆಸರು ನೋಂದಣಿ ಪ್ರಕ್ರಿಯೆ ಆರಂಭಗೊAಡಿದೆ. ಅಕ್ಟೋಬರ್ ೨೭ ರಿಂದ ನವೆಂಬರ್ ೬ರ ವರೆಗೆ ಪೊನ್ನಂಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ನಂ. ೬ ರಂದು ಫೈನಲ್ ಜರುಗಲಿದೆ. ಮೊದಲು ಬರುವ ೧೮೦ ಕುಟುಂಬಗಳಿಗೆ ಮಾತ್ರ ಅವಕಾಶವಿದೆ. ಹೆಸರು ನೋಂದಣಿ ಹಲವೆಡೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.