ಹೊದ್ದೂರು, ಸೆ. ೩೦: ಹೊದ್ದೂರು ಕಬಡಕೇರಿ ದವಸ ಭಂಡಾರದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ತೆಕ್ಕಡೆ ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದವಸ ಭಂಡಾರದಲ್ಲಿ ೨೦೩ ಸದಸ್ಯರಿದ್ದು, ಪ್ರಸಕ್ತ ೨೦೨೧-೨೨ನೇ ಸಾಲಿನಲ್ಲಿ ರೂ. ೧,೨೨,೩೯೮ ರಷ್ಟು ಲಾಭ ಗಳಿಸಿದ್ದು, ಸದಸ್ಯರುಗಳು ಕಟ್ಟಡವನ್ನು ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ, ಕಾರ್ಯಕ್ರಮ ನಡೆಸಲು ಬಳಕೆ ಮಾಡಿಕೊಳ್ಳುವಂತಾಗಬೇಕೆAದು ಅಧ್ಯಕ್ಷರು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಚೆಟ್ಟಿಮಾಡ ನಿವ್ಯಾ ಅವಿನಾಶ್, ನಿರ್ದೇಶಕರುಗಳಾದ ಮೇಕಂಡ ತಿಮ್ಮಯ್ಯ, ಚೆಟ್ಟಿಮಾಡ ದಿವಿ, ಮೇಕಂಡ ಬಿ. ಪೆಮ್ಮಯ್ಯ, ಚೆಟ್ಟಿಮಾಡ ಪುರುಷೋತ್ತಮ್, ಕೋರನ ಅಯ್ಯಣ್ಣ, ಮೇಕಂಡ ಎಸ್. ಪಾರ್ವತಿ ಉಪಸ್ಥಿತರಿದ್ದರು. ಮೇಕಂಡ ಸ್ವೀಟಿ ಜಾನಕ್ಕಿ ಪ್ರಾರ್ಥಿಸಿ, ಕಾರ್ಯದರ್ಶಿ ಚೆಟ್ಟಿಮಾಡ ಸುನಿ ಲಕ್ಷö್ಮಣ್ ಕಳೆದ ಸಾಲಿನ ವರದಿ ವಾಚಿಸಿ, ಆಡಳಿತ ಮಂಡಳಿ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.