ನಾಪೋಕ್ಲು ಸೆ. ೩೦: ನಾಪೋಕ್ಲು ಕೊಡವ ಸಮಾಜದಲ್ಲಿ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ವಾರ್ಷಿಕ ಮಹಾಸಭೆ ಜರುಗಿತು.

೨೦೦ಕ್ಕೂ ಹೆಚ್ಚು ರೈತರು ಕಂಪೆನಿಯ ವಹಿವಾಟಿನ ಪ್ರಸ್ತಾವನೆಯನ್ನು ಆಲಿಸಿ ಮುಂದಿನ ವರ್ಷದ ವಹಿವಾಟಿನ ಮಂಡನೆಯನ್ನು ಅನುಮೋದಿಸಿದರು.

ಈಶಾ ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಯ (ಸಿ.ಬಿ.ಬಿ.ಓ) ಸಂಯೋಜಕಿ ರಮಾಪ್ರಿಯ ಅವರು ಮಾತಾಡಿ ಸಂಸ್ಥೆಯ ಮುಂದಿನ ವರ್ಷದ ಯೋಜನೆಯನ್ನು ಪ್ರಸ್ತುತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಮನು ಮುತ್ತಪ್ಪ ಅವರು ಸಂಸ್ಥೆಯ ಈವರೆಗಿನ ಪ್ರಗತಿಯ ಬಗ್ಗೆ ತಿಳಿಸಿದರು. ನಬಾರ್ಡ್ ಡಿಡಿಎಂ ರಮೇಶ್ ಬಾಬು ಅವರು ರೈತರಿಗೆ ಸಂಸ್ಥೆಯ ಪೂರ್ಣ ಪ್ರಯೋಜನ ಪಡೆಯಲು ಕರೆ ನೀಡಿದರು. ದೇವಯ್ಯ ಮತ್ತು ವೀರೇಂದ್ರ ಕುಮಾರ್, ವಿಷಯ ಪರಿಣಿತರು, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಅವರು ಕರಿಮೆಣಸು ಮತ್ತು ಕಾಫಿಯನ್ನು ಬೆಳೆಸುವ ಅತ್ಯುತ್ತಮ ವಿಧಾನಗಳು ಕುರಿತು ತಾಂತ್ರಿಕ ಸೆಷನ್ ಅನ್ನು ನಡೆಸಿಕೊಟ್ಟರು.

ಈಶಾ ಸಂಸ್ಥೆಯ ಸಂಯೋಜಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಣ್ಣ ವಂದಿಸಿದರು. ಈ ಸಂದರ್ಭದಲ್ಲಿ ಈಶಾ ಔಟ್ ರೀಚ್ ಸ್ವಯಂ ಸೇವಕರಾದ ಸ್ವಾಮಿ ನಕುಜ, ಸ್ವಾಮಿ ನಳದ ಅವರು ಹಾಗೂ ಹಲವಾರು ಸ್ವಯಂ ಸೇವಕರು ಹಾಜರಿದ್ದರು.