ಕಣಿವೆ, ಸೆ. ೩೦: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಾವೇರಿ ನದಿ ದಂಡೆಯ ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಸಾಕಾನೆಗಳನ್ನು ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶ ಅತ್ತೂರಿಗೆ ಸ್ಥಳಾಂತರಿಸಲಾಗಿದೆ.

ಏಕದAತ, ರಾಮ, ಸುಬ್ರಮಣ್ಯ ಹಾಗೂ ಮಾರುತಿ ಎಂಬ ನಾಲ್ಕು ಸಾಕಾನೆಗಳನ್ನು ದುಬಾರೆಯಿಂದ ಸರಿ ಸುಮಾರು ೨೧ ಕಿ.ಮೀ. ದೂರದ ಅತ್ತೂರಿಗೆ ಕಾಲ್ನಡಿಗೆಯಲ್ಲಿಯೇ ಕರೆ ತರಲಾಯಿತು. ಈಗಾಗಲೇ ಸಾಕಾನೆಗಳ ಸ್ಥಳಾಂತರಕ್ಕೆAದೇ ಅತ್ತೂರಿನಲ್ಲಿ ೪೦ ಎಕರೆ ವಿಶಾಲವಾದ ಭೂಪ್ರದೇಶವನ್ನು ಗೊತ್ತುಪಡಿಸಲಾಗಿದ್ದು ಅದರ ಸುತ್ತಲೂ ಫೆನ್ಸಿಂಗ್ ಅಳವಡಿಸಲಾಗಿದೆ.

ಅದರೊಳಗೆ ಸಾಕಾನೆಗಳಿಗೆಂದೇ ವಿವಿಧ ರೀತಿಯ ಮೇವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಹಾಗೆಯೇ ಸಾಕಾನೆಗಳ ದಾಹ ನೀಗಿಸಲು ಹಾರಂಗಿ ಹಿನ್ನೀರು ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ‘ಶಕ್ತಿ'ಗೆ ಮಾಹಿತಿ ನೀಡಿದರು. ದುಬಾರೆಯಲ್ಲಿ ಪ್ರವಾಸಿಗರನ್ನು ನಿಯಂತ್ರಿಸುವ ದಿಸೆಯಿಂದ ಹಾಗೂ ಸಾಕಾನೆಗಳು ಅನುಭವಿಸುತ್ತಿದ್ದ ನರಕ ಯಾತನೆಯನ್ನು ದೂರ ಮಾಡುವ ನಿಟ್ಟಿನಲ್ಲಿ ದುಬಾರೆಯ ಒಟ್ಟು ಆನೆಗಳ ಪೈಕಿ ಕೇವಲ ಕೆಲವೊಂದು ಸಾಕಾನೆಗಳನ್ನು ಸ್ಥಳಾಂತರಿಸುವ ಇರಾದೆ ಹೊಂದಿರುವುದಾಗಿ ಅಧಿಕಾರಿಗಳ ಹೇಳಿಕೆಯಾಗಿದೆ. ಈಗಾಗಲೇ ದುಬಾರೆಯಲ್ಲಿನ ಒಟ್ಟು ೩೦ ಸಾಕಾನೆಗಳ ಪೈಕಿ ಕೆಲವೊಂದು ಸಾಕಾನೆಗಳನ್ನು ಮಾತ್ರ ಅಲ್ಲಿಗೆ ಕೊಂಡೊಯ್ಯ ಲಾಗುತ್ತಿದೆ. ಇಲ್ಲಿಗೆ ಪ್ರವಾಸಿಗರ ಪ್ರವೇಶದ ಬಗ್ಗೆ ಇನ್ನಷ್ಟೆ ತೀರ್ಮಾನವಾಗಬೇಕಿದೆ.

ದುಬಾರೆ ಸಾಕಾನೆ ಶಿಬಿರದಲ್ಲಿನ ಗೋಪಿ, ವಿಕ್ರಮ, ಧನಂಜಯ, ವಿಜಯ, ಕಾವೇರಿ ಹಾಗೂ ಸುಗ್ರೀವ ಎಂಬ ಆರು ಸಾಕಾನೆಗಳು ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ತೆರಳಿರುವುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ದುಬಾರೆ ಸಾಕಾನೆ ಶಿಬಿರದಲ್ಲಿ ಪಾರ್ಥ, ಕರ್ಣ, ಲವ, ಜನರಲ್ ತಿಮ್ಮಯ್ಯ, ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ವ್ಯಾಲಿ, ಕಂಚನ್, ಈಶ್ವರ, ಪ್ರಶಾಂತ, ಶ್ರೀವಿದ್ಯಾ, ನಂಜುAಡ, ದೇವಾ, ಭೀಷ್ಮಾ, ಕ್ರಾಲ್‌ನಲ್ಲಿರುವ ಕಾಡಾನೆ ಸೇರಿ ೧೫ಕ್ಕೂ ಹೆಚ್ಚು ಸಾಕಾನೆಗಳು ದುಬಾರೆ ಸಾಕಾನೆ ಶಿಬಿರದಲ್ಲಿವೆ. - ಕೆ.ಎಸ್. ಮೂರ್ತಿ