ವೀರಾಜಪೇಟೆ, ಸೆ. ೩೦: ಕನ್ನಡ ಸಾಹಿತ್ಯ ಪ್ರಪಂಚದ ಕವಿಗಳು ತಮ್ಮ ಭಾವನೆಗಳನ್ನು ಸಮಾಜಿಕ ಮೌಲ್ಯಗಳ ತಳಹದಿಯ ಮೇಲೆ ಸಾಹಿತ್ಯ ರಚನೆ ಮಾಡಿರುವುದು ಧೀಮಂತ ಕನ್ನಡ ಸಾಹಿತ್ಯದ ಪ್ರತಿಬಿಂಬ ಎಂದು ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕಿ ಪ್ರತಿಮ ಹರೀಶ್ ರೈ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬಿಳುಗುಂದು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಭಾಂಗಣ ದಲ್ಲಿ ನಡೆದ ಎಸ್.ಎಸ್. ರಾಮಮೂರ್ತಿ ದತ್ತಿನಿಧಿ ಮತ್ತು ಕನ್ನಡ ಸಾಹಿತ್ಯ ಬೆಳವಣಿಗೆಗೆ ಕನ್ನಡದ ಕವಿಗಳ ಕೊಡುಗೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಹಲ್ಮಿಡಿ ಶಾಸನದಿಂದ ಅರಂಭವಾಗಿರುವ ಕನ್ನಡ ಸಾಹಿತ್ಯ ರಚೆನೆಯು ಹಳೆಗನ್ನಡ, ನಡುಕನ್ನಡ ಮತ್ತು ಹೊಸ ಕನ್ನಡ ಹೀಗೆ ವಿಂಗಡಣೆಗೊಳಿಸಿದ ಕನ್ನಡ ಭಾಷೆಯಲ್ಲಿ ಆಧಿ ಕವಿ ಪಂಪ, ರನ್ನ, ಅಕ್ಕಮಾಹಾದೇವಿ, ಕುಮಾರ ವ್ಯಾಸ, ಬಸವಣ್ಣ, ಸಂತ ಶಿಶುನಾಳ ಶರೀಫಾ, ದಾಸ ಸಾಹಿತ್ಯದ ಮೇರು ಕವಿ ಕನಕದಾಸರು, ಕುವೆಂಪು, ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ರವಿ ಕಾಣದನ್ನು ಕವಿ ಕಂಡ ಎಂಬ ನಾಣ್ನುಡಿಯು ಎಂದಿಗೂ ಶಾಶ್ವತವಾಗಿ ನೆಲೆ ಕಾಣುತ್ತದೆ ಎಂದು ತಮ್ಮ ದತ್ತಿ ಉಪನ್ಯಾಸದಲ್ಲಿ ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಅವರು ಮಾತನಾಡಿ, ಎಸ್.ಎಸ್. ರಾಮಮುರ್ತಿ ಅವರು ವೀರಾಜ ಪೇಟೆ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ವಕೀಲರಾಗಿದ್ದ ರಾಮಮುರ್ತಿ ಅವರು ಸಮಾಜಿಕ ಸೇವೆಯಲ್ಲಿ ತನ್ನದೆಯಾದ ರೀತಿಯಲ್ಲಿ ಛಾಪುನ್ನು ಮೂಡಿಸಿ ಜನಮಾನಸ ದಲ್ಲಿ ಅಜಮಾರವಾಗಿದ್ದಾರೆ. ಶ್ರೀಯುತರು ಸಮಾಜಕ್ಕೆ ನೀಡಿರುವ ಸೇವೆಯನ್ನು ಸದಾ ಗುರುತಿಸು ವಂತಾಗಬೇಕು. ಈ ನಿಟ್ಟಿನಲ್ಲಿ ಹೆಚ್.ಆರ್. ರವಿಶಂಕರ್ ಮತ್ತು ಸಹೋದರರು ದತ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.

ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ಶಾಲಾ ವಿಧ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಸದಾಭಿರುಚಿ ಬೆಳೆಯುತ್ತದೆ. ಸಾಹಿತ್ಯದ ಕಡೆಗೆ ಒಲವು ಮೂಡುತ್ತದೆ. ಶಾಲೆಯ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯತ್ವ ನೊಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರುಣ ಆನ್ಸಿ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭ ಉದ್ದೇಶಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಹೇಮಾವತಿ ಪಿ.ಎನ್., ಶಿಕ್ಷಕಿ ಆಶಾ ರಾಣಿ ಅವರು ಮಾತ ನಾಡಿದರು. ಶಾಲಾ ವಿದಾÁ್ಯರ್ಥಿಗಳು ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು. ಮುಖ್ಯ ಅತಿಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಶಿಕ್ಷಕರು ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಹೆಚ್.ಜಿ. ಸಾವಿತ್ರಿ ಅವರು ಸರ್ವರನ್ನು ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ನಾ. ಕನ್ನಡಿಗ ಟೋಮಿ ಥೋಮಸ್ ಅವರು ನಿರೂಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕೋಶಾಧಿಕಾರಿ ಶಭರಿಶ್ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದ ರಾದ ಬಾವ ಮಾಲ್ದಾರೆ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಶಿಕ್ಷಕರು, ಶಾಲೆಯ ವಿಧ್ಯಾರ್ಥಿಗಳು ಹಾಜರಿದ್ದರು.