ಮಡಿಕೇರಿ, ಸೆ. ೨೯: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕುಟ್ಟಂಡ ಕೆ. ಪೂವಯ್ಯ ಅಧ್ಯಕ್ಷತೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಸಂಘವು, ೨೦೨೧-೨೨ನೇ ಸಾಲಿನಲ್ಲಿ ರೂ. ೧೪,೪೧೮.೫೦ ಲಕ್ಷದಷ್ಟು ವಾರ್ಷಿಕ ವಹಿವಾಟು ನಡೆಸಿ, ರೂ. ೪೮.೬೦ ಲಕ್ಷದಷ್ಟು ಲಾಭಗಳಿಸಿದ್ದು, ಶೇ. ೨೨ ರಷ್ಟು ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಂಘವು ೨೬೧೫ ಸದಸ್ಯರನ್ನು ಹೊಂದಿದ್ದು, ರೂ. ೧೨೨.೪೦ ಲಕ್ಷ ಪಾಲು ಬಂಡವಾಳ ವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ. ೨೩೦೩.೯೬ ಲಕ್ಷ ಠೇವಣಾತಿ ಹೊಂದಿದ್ದು, ರೂ. ೨೩೫೬.೫೭ ಲಕ್ಷ ಸಾಲ ವಿತರಿಸಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷ ಐನಂಡ ಕೆ. ಅಯ್ಯಣ್ಣ, ನಿರ್ದೇಶಕರುಗಳಾದ ಮೂಕೋಂಡ ಸಿ. ಅಯ್ಯಪ್ಪ, ಮಾಚಿಮಂಡ ಎಂ. ಉತ್ತಪ್ಪ, ಮುಕ್ಕಾಟಿರ ಎ. ಸಂತೋಷ್, ಕುಟ್ಟಂಡ ಟಿ. ಪೊನ್ನಮ್ಮ, ಕುಟ್ಟಂಡ ರೀಟಾ ಚಿಣ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ರಜನಿ ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.